ವಿಶಿಷ್ಟ ಗೋಶಾಲೆ:ದೇವಸ್ಥಾನದ ಆವರಣದಲ್ಲಿ ವಿಶಿಷ್ಟವಾಗಿ ಗೋಶಾಲೆ ನಿರ್ವಿುಸಲಾಗಿದೆ. ಇಲ್ಲಿ ಗೋಮಾತೆಗೆ ಪೂಜೆ, ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಒಟ್ಟು 20 ಗೋವುಗಳು ನಿಂತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನ ಪಡೆಯುವುದಲ್ಲದೆ, ಗೋಮಾತೆಯನ್ನೂ ಪೂಜಿಸಿ ಕೃತಾರ್ಥರಾಗಲು ಸೂಕ್ತ ಸ್ಥಳವಾಗಿದೆ. ಕಲ್ಯಾಣಿ, ಕೆರೆ ಹಾಗೂ ಬಾವಿಗಳನ್ನು ನಿರ್ವಿುಸಲಾಗಿದೆ.
ಭದ್ರತೆಗೆ ವಿಶೇಷ ಕಾಳಜಿ:ಬೇರೆ ಬೇರೆ ಕಡೆಗಳಿಂದ ಬರುವ ಭಕ್ತರಿಗೆ ಹಲವು ಅನುಕೂಲ ಗಳನ್ನು ಒದಗಿಸಲಾಗಿದೆ. ಇದೇ ರೀತಿ ಭದ್ರತೆಗೂ ಗಮನ ನೀಡಲಾಗಿದೆ. ದೇವಸ್ಥಾನದ ಆವರಣದಲ್ಲಿ 60 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 3 ಪಿಟಿಜೆಡ್ ಕ್ಯಾಮರಾಗಳಿವೆ. ಇದರ ವಿಶಿಷ್ಟತೆ ಎಂದರೆ ಬರುವ ಮತ್ತು ಹೋಗುವ ವ್ಯಕ್ತಿಗಳ ಭಾವಚಿತ್ರವನ್ನು ಸ್ಪಷ್ಟವಾಗಿ ಸೆರೆ ಹಿಡಿಯಲಿದೆ. ವಾಹನದ ಸಂಖ್ಯೆ ಸೆರೆ ಹಿಡಿಯಲು ಮತ್ತೊಂದು ವಿಶಿಷ್ಟ ಕ್ಯಾಮರಾ ಅಳವಡಿಸಲಾಗಿದೆ. ಹೀಗೆ ಅತ್ಯದ್ಭುತ ಸಿಸಿ ಕ್ಯಾಮರಾಗಳನ್ನು ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದೆ.
ರಥಬೀದಿಯ ವೈಭವ:ಮಹಾದ್ವಾರ ದಾಟುತ್ತಿದ್ದಂತೆ ರಥಬೀದಿಯು ಕಣ್ಣಿಗೆ ಕಾಣಲಿದೆ. ಅದರಲ್ಲಿ ಸಾಗುತ್ತಿದ್ದಂತೆ ಕೃಷ್ಣದೇವರಾಯ ಕಾಲದ ವೈಭವವು ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದರೊಳಗೆ ಪ್ರವೇಶ ಮಾಡುತ್ತಿದ್ದಂತೆ ಮನಸಿಗೆ ಮುದ ನೀಡುತ್ತದೆ. ಇತರ ಕಟ್ಟಡಗಳ ಮೇಲೆ ನಿಂತು ನೋಡಿದರೆ, ಅತ್ಯದ್ಭುತವೆನಿಸುತ್ತದೆ. ರಥಬೀದಿಯ ಪರಿಕಲ್ಪನೆ ಎಷ್ಟೊಂದು ಪರಿಪೂರ್ಣವಾಗಿ ಅನುಷ್ಠಾನಗೊಂಡಿದೆ ಎಂದರೆ ನೋಡುಗರು ಅಚ್ಚರಿಪಡುತ್ತಾರೆ.
ಸಾಂಪ್ರದಾಯಿಕ ಹೋಮಕುಂಡ:ಹಿಂದು ಪರಂಪರೆಯಲ್ಲಿ ಹೋಮ-ಹವನಕ್ಕೆ ವಿಶೇಷ ಪ್ರಾತಿನಿಧ್ಯ ಇದೆ. ವಾತಾವರಣ ಶುದ್ಧಿ, ಧಾರ್ವಿುಕ ಆಚರಣೆ ಸಂದರ್ಭದಲ್ಲಿ ಹೋಮ-ಹವನ ಮಾಡುವ ಸಂಪ್ರದಾಯ ಇದೆ. ಇದಕ್ಕಾಗಿ ಶಿವಶಕ್ತಿಧಾಮದ ಗಣಪತಿ ಗುಡಿ ಎದುರು ಸಾಂಪ್ರದಾಯಿಕವಾಗಿ ಹೋಮಕುಂಡ ನಿರ್ವಿುಸಲಾಗಿದೆ. ಬಹುತೇಕ ಗಣಪತಿ ಗುಡಿ ಎದುರು ಇರುವಂತೆ ಹೋಮಕುಂಡವನ್ನು ಅಚ್ಚುಕಟ್ಟಾಗಿ ಒಂದಿಷ್ಟು ವಿಶಾಲ ಜಾಗದ ಮಧ್ಯೆ ನಿರ್ವಿುಸಲಾಗಿದೆ. ಪೂಜೆ, ಇತ್ಯಾದಿ ಧಾರ್ವಿುಕ ಕಾರ್ಯಕ್ರಮಗಳು ಇದ್ದಾಗ ಇಲ್ಲಿ ಹೋಮ-ಹವನಗಳು ನಡೆಯಲಿವೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 − one =
Remember me
