ಬೆಂಗಳೂರು:ಮಹಿಳಾ ಪ್ರಯಾಣಿಕರೊಟ್ಟಿಗೆ ಉಬರ್​ ಚಾ;ಕ ಅಸಭ್ಯವಾಗಿ ವರ್ತಿಸಿ ತನ್ನ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿರುವ ಘಟನೆ ನಗರದ ಬಿಟಿಎಂ ಲೇಔಟ್​ 2ನೇ ಹಂತದಲ್ಲಿ ನಡೆದಿದೆ.
ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್​ವರೆಗೆ ಕ್ಯಾಬ್​ ಬುಕ್​ ಮಾಡಿದ್ದ, ಮಹಿಳೆ ಜೊತೆ ಚಾಲಕ ಅನುಚಿತವಾಗಿ ವರ್ತಿಸಿದ್ದನ್ನು ಆಕೆ ಲಿಂಕ್ಡ್​ಇನ್​​ನಲ್ಲಿ ಪೋಸ್ಟ್​ ಹಾಕಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.
ಬುಧವಾರ ತಡರಾತ್ರಿ ಮಹಿಳೆ ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್​ವರೆಗೆ ಉಬರ್​ ಕ್ಯಾಬ್​ ಬುಕ್​ ಮಾಡಿದ್ಧಾರೆ. ಕ್ಯಾಬ್​ ಏರಿದ ಬಳಿಕ ಮೊದಲಿಗೆ ಚಾಲಕ ರೂಟ್​ ಬದಲಿಸಿದ್ದಾನೆ. ಈ ವೇಳೆ ಮಹಿಳೆ ಆತನಿಗೆ ಸರಿಯಾದ ಮಾರ್ಗದಲ್ಲಿ ಹೋಗುವಂತೆ ಹೇಳಿದ್ಧಾಳೆ.
ಇದನ್ನೂ ಓದಿ:ಸೂಕ್ತ ಸಿದ್ಧತೆ ಕೊರತೆಯಿಂದ ಬಿಬಿಎಂಪಿಯ ಒತ್ತುವರಿ ಕಾರ್ಯಾಚರಣೆ ಸ್ಥಗಿತ
ಸರಿಯಾದ ರೂಟ್​ ಅನುಸರಿಸಿದ ಚಾಲಕನ ನಡೆ ಮೇಲೆ ಅನುಮಾನಗೊಂಡ ಮಹಿಳೆ ಅರ್ಧ ದಾರಿಯಲ್ಲೆ ಇಳಿದಿದ್ಧಾರೆ. ಉಬರ್​ ಚಾಲಕನಿಗೆ ಹಣ ಪಾವತಿ ಮಾಡಿದ್ದಾಳೆ. ಈ ವೇಳೆ ಮಹಿಳೆಗೆ ಚಾಲಕ ತನ್ನ ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ಧಾನೆ. ಇದರಿಂದ ಗಾಬರಿಗೊಂಡ ಯುವತಿ ಸ್ಥಳದಿಂದ ಓಡಿ ಹೋಗಿದ್ಧಾರೆ.
ಕೆಲ ಹೊತ್ತಿನ ಬಳಿಕ ನಡೆದ ಘಟನೆ ಕುರಿತು ಮಹಿಳೆ ಲಿಂಕ್ಡ್​ಇನ್​ ಉಬರ್​ ಕಂಪನಿಯವರಿಗೆ ದೂರು ಕೊಟ್ಟಿದ್ದಾರೆ. ಯುವತಿ ದೂರಿಗೆ ಪ್ರತಿಕ್ರಿಯಿಸಿರುವ ಸಂಸ್ಥೆ ಆತನ ವಿರುದ್ಧ ಕ್ರಮ ಜರುಗಿಸಿರುವುದಾಗಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
