ಉಡುಪಿ:ಲಾರಿಯೊಂದರಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದ 16 ವರ್ಷದ ಬಾಲಕನೊಬ್ಬನ ಹುಚ್ಚಾಟಕ್ಕೆ ತಂದೆ ಮತ್ತು ಮಗ ಮೃತಪಟ್ಟ ಘಟನೆ ಉಚ್ಚಿಲದಲ್ಲಿ ನಡೆದಿದೆ. ಬಾಲಕನಿಗೆ ಲಾರಿ ಚಲಾಯಿಸುವುದರಲ್ಲಿ ಅತೀವ ಆಸಕ್ತಿ. ಇದೀಗ ಈ ಆಸಕ್ತಿ ಇಬ್ಬರ ಸಾವಿಗೆ ಕಾರಣವಾಗಿದೆ.
ಅಪಘಾತವಾದ ಲಾರಿಯಲ್ಲಿ ಬಾಲಕ ಕ್ಲೀನರ್ ಆಗಿ ದುಡಿಯುತ್ತಿದ್ದ. ಈ ಹಿಂದೆಯೂ ಸಾಕಷ್ಟು ಬಾರಿ ಲಾರಿ ಚಾಲನೆ ಮಾಡಿ ಸಾಹಸ ಮೆರೆದಿದ್ದ. ಅಂದು ಕೂಡ ಬಾಲಕನಿಗೆ ಲಾರಿ ಓಡಿಸುವ ಅವಕಾಶವನ್ನು ಚಾಲಕ ಶೇಖರ್ ನೀಡಿದ್ದ. ಈ ವೇಳೆ ಬಾಲಕನಿಗೆ ನಿದ್ರೆ ಆವರಿಸಿದೆ. ಈ ವೇಳೆ ಚಾಲಕ ಮುಂದೆ ಟೀ ಶಾಪ್ ಇದೆ. ಅಲ್ಲಿ ಟೀ ಕುಡಿದ ಬಳಿಕ ಎಂದಿನಂತೆ ನಾನು ಗಾಡಿ ಓಡಿಸುತ್ತೇನೆ ಎಂದು ಚಾಲಕ ಶೇಖರ್ ಹೇಳಿದ್ದಾನೆ.
ನಿದ್ದೆ ಮಂಪರಿನಲ್ಲಿ ಲಾರಿ ಚಲಾಯಿಸಿದ ಬಾಲಕ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದ ಬೆಳಗಾವಿ ಮೂಲದ ಪ್ರಭಾಕರ ಮತ್ತವರ ಮಗ ಸಮರ್ಥ್​ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕ ಶೇಖರ್ ಅನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಚಾಲಕನ ಡ್ರೈವಿಂಗ್ ಲೈಸನ್ಸ್, ಲಾರಿ ಏಜನ್ಸಿಯ ಪರವಾನಿಗೆ ರದ್ದತಿಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 7 =
Remember me
