ಉಡುಪಿ:ಬಾಡಿಗೆ ಆಟೋದಲ್ಲಿ ಮಹಿಳೆಯೊಬ್ಬರು ಮರೆತು ಹೋಗಿದ್ದ 50 ಸಾವಿರ ಹಣ ಹಾಗೂ ದಾಖಲೆ ಪತ್ರವನ್ನು ಚಾಲಕ ಹಿಂದಿರುಗಿಸಿ ಮಾನವೀಯತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ.
ಅಂಬಲಪಾಡಿಯ ಜಯಶೆಟ್ಟಿ ಉದಾರತೆ ಮೆರದ ಆಟೋ ಚಾಲಕ. ಅಂಬಲಪಾಡಿಯಿಂದ ಜಯಶೆಟ್ಟಿಯವರು ಮಹಿಳೆಯೊಬ್ಬರನ್ನು ತನ್ನ ಬಾಡಿಗೆ ರಿಕ್ಷಾದಲ್ಲಿ ಕಟಪಾಡಿಗೆ ಬಿಟ್ಟು ಮತ್ತೆ ಅಂಬಲಪಾಡಿ ರಿಕ್ಷಾ ನಿಲ್ದಾಣಕ್ಕೆ ಹಿಂದಿರುಗಿದ್ದರು.
ಇದನ್ನೂ ಓದಿ:ರೈತ-ಕಾರ್ಮಿಕ ವಿರೋಧಿ ನೀತಿಗಳಿಗೆ ಖಂಡನೆ: ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ
ಈ ವೇಳೆ ತನ್ನ ಆಟೋದಲ್ಲಿ ಪ್ಲಾಸ್ಟಿಕ್ ಕವರ್ ಸಿಕ್ಕಿದ್ದು, ಇದರಲ್ಲಿ ಇದ್ದ ಹಣದ ಕಂತೆ ಹಾಗೂ ದಾಖಲೆ ಪತ್ರಗಳನ್ನು ಗಮನಿಸಿದ ರಿಕ್ಷಾ ಚಾಲಕ ಜಯಶೆಟ್ಟಿ ಮತ್ತೆ ಕಟಪಾಡಿಗೆ ಬಂದು ಮಹಿಳೆಯನ್ನು ಹುಡುಕಿ ಹಣ ಹಾಗೂ ದಾಖಲೆ ಪತ್ರವನ್ನು ಹಿಂದಿರುಗಿಸಿದ್ದಾರೆ.
ಒಟ್ಟು 50 ಸಾವಿರ ರೂ. ಹಣ ಇತ್ತಾಗಿ ಮಹಿಳೆ ತಿಳಿಸಿದ್ದು, ಹಣ ಹಿಂದಿರುಗಿಸಿ ಮಾನವೀಯತೆ ಮೆರೆದ ಜಯಶೆಟ್ಟಿ ಅವರಿಗೆ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
https://www.vijayavani.net/shoplifter-is-caught-on-supermarket-cctv-stashing-groceries-in-her-underpants/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 1 =
Remember me
