ಉಡುಪಿ:ದ್ವಿಚಕ್ರ ವಾಹನಕ್ಕೆ ಫಾರ್ಚೂನ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸಾವನ್ನಪ್ಪಿ, ಆಕೆಯ ಸ್ನೇಹಿತೆ ಗಂಭೀರ ಗಾಯಗೊಂಡ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 22ರಲ್ಲಿ ನಡೆದಿದೆ.
ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ (24) ಮೃತಪಟ್ಟ ಯುವತಿ. ಉಜಿರೆ ಮೂಲದ ಸ್ನೇಹಿತೆ ಪ್ರಜ್ನಾ (25) ಗಂಭೀರ ಗಾಯಗೊಂಡಿದ್ದಾರೆ. ಉಡುಪಿಯ ಕುಂದಾಪುರದಿಂದ ಬ್ರಹ್ಮಾವರ ಕಡೆ ಸ್ಕೂಟಿಯಲ್ಲಿ ಯುವತಿಯರು ತೆರಳುತ್ತಿದ್ದಾಗ, ಫಾರ್ಚೂನ್ ವಾಹನ ವೇಗವಾಗಿ ಬಂದು ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರೂ ರಸ್ತೆಗೆ ಬಿದ್ದು ಗಂಭೀರ ಸ್ವರೂಪದ ಗಾಯಗಳಾಗಿತ್ತು.
ಇದನ್ನೂ ಓದಿ:ಒಂದು ಬೀಡಿಯಿಂದಾಗಿ ಪ್ರಾಣವೇ ಹೋಯಿತು; ಯಮುನಾ ನದಿ ತೀರದಲ್ಲಿ ನಡೆಯಿತು ಬರ್ಬರ ಹತ್ಯೆ
ನಂತರ ಆಸ್ಪತ್ರೆಗೆ ದಾಖಲಿಸಿದಾಗ ಶ್ರೇಯಾ ಶಾನುಭಾಗ್ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. ಪ್ರಜ್ನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದಾಗ ಸ್ಥಳೀಯರು, ಸಾಸ್ತಾನ ಟೋಲ್ ಬಳಿ ವಾಹನ ತಡೆದು‌ ಕೋಟ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ವಿಮಾನ ಪ್ರಯಾಣಿಕರಿಗೆ ಸೆಕ್ಸ್​ ಆಫರ್​: ಗಗನಸಖಿಯ ಫೇಸ್​ಬುಕ್​ ಪೋಸ್ಟ್​ನಿಂದ ಮಾದಕ ರಹಸ್ಯ ಬಯಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 12 =
Remember me
