ಉಡುಪಿ:ಜಿಲ್ಲೆಯಲ್ಲಿ ಪ್ರೇಮಿಗಳ ದಿನದಂದೇ ಹೆಣವೊಂದು ಬಿದ್ದಿದೆ. ವಿವಾಹಿತ ಮಹಿಳೆಯೊಡನೆ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿ ಕರ್ಜೆ, ಗುಡ್ಡೆಯಂಗಡಿಯಲ್ಲಿ ನಡೆದಿದೆ.
ಹೊಸೂರು ಗ್ರಾಮದ, ಉದ್ಕಳ್ಕ ನಿವಾಸಿ ನವೀನ್ ನಾಯ್ಕ ಮೃತಪಟ್ಟ ದುರ್ದೈವಿ. ಅದೇ ಗ್ರಾಮದಲ್ಲಿರುವ ಸರಸ್ವತಿ ಎಂಬವರ ಮನೆಗೆ ಮಲ್ಪೆಯ ಗೌತಮ್ ಎಂಬಾತ ಆಗಾಗ್ಗೆ ಭೇಟಿ ನೀಡುತ್ತಿದ್ದ. ಇದನ್ನು ನೋಡಿದ್ದ ನವೀನ್ ನಾಯ್ಕ ಅವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಬಗ್ಗೆ 15 ದಿನಗಳ ಹಿಂದೆ ಗುಡ್ಡೆಯಂಗಡಿ ಕ್ರಾಸ್‌ಬಳಿ ಇಬ್ಬರ ನಡುವೆ ಗಲಾಟೆಯು ನಡೆದಿದೆ. ಗಲಾಟೆ ಬಳಿಕ ಸರಸ್ವತಿ ಅವರು ನವೀನ್ ನಾಯ್ಕ ಮನೆಗೆ ತೆರಳಿ ನಾನು ಗೌತಮ್ ಮದುವೆಯಾಗಲಿದ್ದೇವೆ. ನಮ್ಮ ವಿಚಾರದಲ್ಲಿ ಅಡ್ಡಬಂದಲ್ಲಿ ಗೌತಮ್ ನಿಮ್ಮನ್ನು ಕೊಲೆ ಮಾಡಲು ಹಿಂಜರಿಯುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರಂತೆ.
ತನ್ನ ಸಂಬಂಧಕ್ಕೆ ಅಡ್ಡಿಯಾಗಿದ್ದ ನವೀನ್‌ನನ್ನು ಪೂರ್ವದ್ವೇಷದಿಂದ ಗೌತಮ್ ಹತ್ಯೆ ಮಾಡಿದ್ದಾನೆ. ಭಾನುವಾರ ರಾತ್ರಿ 6 ಜನರ ಸ್ನೇಹಿತರೊಂದಿಗೆ ಗೌತಮ್ ಕೃತ್ಯ ಎಸಗಿದ್ದಾನೆ. ಆರೋಪಿಗಳನ್ನು ಘಟನೆ ನಡೆದ ಮೂರು ಗಂಟೆಯೊಳಗೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eight =
Remember me
