ಉಡುಪಿ:ಕಳೆದ 72 ವರ್ಷಗಳಲ್ಲಿ ದೇಶ ಭೂಮಿ ಕಳೆದುಕೊಂಡಿತು, ಭಾರತ ಹಿಂದುಗಳನ್ನು ಕಳೆದುಕೊಳ್ಳುತ್ತಿದೆ. ಅದ್ಭುತ ಹಿಂದು ಸಮಾಜ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಕಳವಳ ವ್ಯಕ್ತ ಪಡಿಸಿದ್ದಾರೆ.
ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯಿದೆ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಗಾಂಧಿ ದೇಶ ವಿಭಜನೆ ಮಾಡುವ ಮೊದಲು ದೇಹ ವಿಭಜನೆ ಮಾಡಿ ಎಂದಿದ್ದರು. ಫೆಂಟಾಸ್ಟಿಕ್ ನಾನ್ ಸೆನ್ಸ್ ಎಂದ ನೆಹರೂ ಪ್ರಧಾನಿಯಾದರು. ನೆಹರೂ ಮತ್ತು ತಂಡ ಹೇಡಿಗಳು ನೆಹರು ಕುರ್ಚಿಗಾಗಿ ದೇಶದ ಮಾನ ಕಳೆದರು ಎಂದು ಕಿಡಿಕಾರಿದರು.
ಅಂಬೇಡ್ಕರ್ ರಾಷ್ಟ್ರೀಯ ನಾಯಕ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದು ನಮ್ಮ ದುರ್ದೈವ. ಭಾರತದ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ, ಪಾಕ್ ಹಿಂದುಗಳು ಭಾರತಕ್ಕೆ ಬರಲಿ ಎಂದು ಅಂಬೇಡ್ಕರ್ ಸಲಹೆ ಕೊಟ್ಟಿದ್ದರು ಎಂದರು.
ಶುಕ್ರವಾರ ಇರುವ ಅಲ್ಲಾಹು ಶನಿವಾರ ಎಲ್ಲಿ ಹೋಗ್ತಾನೆ, ಭಾನುವಾರ ಬರುವ ಏಸು ಉಳಿದ ದಿನ ಎಲ್ಲಿ ಹೋಗ್ತಾನೆ ಎಂದು ಪ್ರಶ್ನಿಸಿದ ಕಲ್ಲಡ್ಕ ಪ್ರಭಾಕರ ಭಟ್, ಭಾರತದಲ್ಲಿ ಲಕ್ಷ ಲಕ್ಷ ಮಸೀದಿ ಚರ್ಚ್ ಕಟ್ಟಿದ್ದಾರೆ. ಆದರೆ ನಮ್ಮ ದೇಶ ನಮ್ಮ ಭೂಮಿಯಲ್ಲಿ ಇಷ್ಟೆಲ್ಲ ಕಟ್ಟಿ ನಮಗೇ ವಿರೋಧಿಸ್ತಾರೆ ಎಂದು ಕಿಡಿಕಾರಿದರು.
ಪೌರತ್ವ ಕಾನೂನು ಬಂದದ್ದು ಪಾಕಿಸ್ತಾನದ ಪಾಪಿಗಳ ವಿರುದ್ಧ. ನುಸುಳುಕೋರರಾಗಿ ಕೆಲ ಮುಸಲ್ಮಾನರು ಬಂದು ದೇಶದ ಅರಾಜಕತೆಗೆ ಕಾರಣವಾಗಿದ್ದಾರೆ. ದೇಶದ್ರೋಹಿಗಳಿಗೆ ಪೌರತ್ವ ಕೊಡುವುದಿಲ್ಲ, ಆದರೆ, ಭಾರತೀಯ ಮುಸಲ್ಮಾನರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಪಟ್ಟಂತೆ ಕಮೀಷನರ್ ಡಾ. ಹರ್ಷ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಗೋಲಿಬಾರ್ ಮಾಡದಿದ್ದರೆ ದೇಶದಲ್ಲಿ ಮುಸ್ಲಿಂ ಅಟ್ಟಹಾಸ ನಡೆಯುತ್ತಿತ್ತು ಎಂದರು.
ಅಪ್ಪ ಯಾರೆಂದು ನಿಮಗೆ ಗೊತ್ತಿಲ್ವಾ? ಭಾರತ ಅಂದ್ರೆ ಛತ್ರ ಅಲ್ಲ. ಭಾರತ ಪವಿತ್ರ ನೆಲ ಇಲ್ಲಿ ನೆಲೆಸಲು ಪೌರತ್ವ ಬೇಕು. ಪೌರತ್ವ ಕಾಯ್ದೆಗೆ ಎಲ್ಲರೂ ಒಳಗಾಗಬೇಕು. ದಾಖಲೆ ಇಲ್ಲದವರು ಹೊರಗೆ ನಡೆಯಿರಿ ಎಂದು ಗುಡುಗಿದರು.
ಭಾರತ ಸೂಪರ್ ಪವರ್ ಆಗೋದು ಬೇಡ, ಬದಲಿಗೆ ಭಾರತ ವಿಶ್ವ ಗುರು ಆದರೆ ಸಾಕು. ದೇಶದ ಪ್ರತಿಯೊಬ್ಬ ನೋಂದಣಿ ಮಾಡಲೇಬೇಕು ದೇಶದಲ್ಲಿ ನುಸುಳುಕೋರರು ಉಳಿಯಲು ಸಾಧ್ಯವಿಲ್ಲ ಎಂದರು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × 3 =
Remember me
