ಕುಂದಾಪುರ:ನೇರಂಬಳ್ಳಿ ವಯೋವೃದ್ಧರು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಕರೊನಾದಿಂದ ಮೃತಪಟ್ಟಿದ್ದು, ಕುಂದಾಪುರ ಹಳೆಕೋಟೆ ಸ್ಮಶಾನದಲ್ಲಿ ಪ್ಯಾಕ್ ಮಾಡಿದ ಬಾಡಿ ಬಿಡಿಸಿದಾಗ ಬೇರೊಬ್ಬರ ಶವ ನೋಡಿ ಕುಟುಂಬಸ್ಥರು ಕಂಗಾಲಾದ ಘಟನೆ ನಡೆದಿದೆ.
ನೇರಂಬಳ್ಳಿ ಮೂಲಕ 65 ವರ್ಷದ ವೃದ್ಧರು ಕರೊನಾ ಸೋಂಕಿನಿಂದಾಗಿ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶವವನ್ನು ಅಂಬುಲೆನ್ಸ್​ನಲ್ಲಿ ಕುಂದಾಪುರಕ್ಕೆ ತರಲಾಗಿತ್ತು.
ಇದನ್ನೂ ಓದಿ:ಮುಂದಿನ ದಿನಗಳಲ್ಲಿ ದೇಶದ ಸರ್ಕಾರಿ ಶಾಲೆಗಳು ಖಾಸಗಿ ಪಾಲಾಗಲಿದೆಯೇ?: ಇಲ್ಲಿದೆ ಸತ್ಯಾಂಶ!
ಶವ ಪ್ಯಾಕ್ ಮಾಡಿದ್ದರಿಂದ ಒಳಗಿರುವ ಶವ ಯಾರದ್ದೆಂದು ಸಂಬಂಧಿಕರಿಗೆ ತಿಳಿಯಲಿಲ್ಲ. ಹಳೆಕೋಟೆ ಸ್ಮಶಾನಕ್ಕೆ ಅಂತ್ಯ ಸಂಸ್ಕಾರಕ್ಕೆ ತಂದಾಗ ಶವ ಸುತ್ತಿದ ಪ್ಯಾಕ್ ಬಿಡಿಸಿದಾಗ ವಯೋವೃದ್ಧರ ಶವದ ಬದಲು ಯುವಕನ ಶವ ಇತ್ತು.
ಇದರಿಂದ‌ ಕುಪಿತರಾದ ಜನ ಆಂಲುಲೆನ್ಸ್ ಚಾಲಕನ ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಸ್ಮಾಶನದಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಮಗಳಿಗೆ ನಿಶ್ಚಯವಾಗಿದ್ದ ವರನಿಗೆ ಫೋನ್​ ಮಾಡಿ ಮನೆಗೆ ಕರೆಸಿಕೊಂಡ ಮಹಿಳೆ ಹೀಗಾ​ ಮಾಡೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
