ಉಡುಪಿ:ಉಡುಪಿಯ ರಕ್ಷಿತಾ ನಾಯಕ್ ಸಂಶಯಾಸ್ಪದ ಸಾವಿನ ಕುರಿತು ಉಡುಪಿ ನಗರ ಪೊಲೀಸರ ತನಿಖೆ ಮುಂದುವರೆದಿದೆ. ಪೊಲೀಸ್ ವಿಚಾರಣೆಯಲ್ಲಿರುವ ಆರೋಪಿ ಪ್ರಶಾಂತ್ ಕುಂದರ್ ಕೆಲ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ.

ರಕ್ಷಿತಾ ಮದುವೆಯಾಗುವಂತೆ ಆಗಾಗೆ ನನ್ನನ್ನು ಒತ್ತಾಯಿಸುತ್ತಿದ್ದಳು. ಆದರೆ, ನಾನು ಒಪ್ಪಿಗೆ ನೀಡಲಿಲ್ಲ. ನಮ್ಮ ನಡುವೆ ಕೇವಲ ಗೆಳೆತನ ಮಾತ್ರ ಇತ್ತೆಂದು ಹೇಳಿದ್ದಾನೆ. ಈ ನಡುವೆ ಪ್ರಶಾಂತ್ ಪತ್ನಿಗೆ ಈ ವಿಚಾರ ಗೊತ್ತಾಗಿ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಳು ಎನ್ನಲಾಗಿದೆ.
ಇದನ್ನೂ ಓದಿ:ಉಡುಪಿ ಯುವತಿ ಅನುಮಾನಾಸ್ಪದ ಸಾವು: ಕೊನೆಗೂ ಸಿಕ್ಕಿಬಿದ್ದ ಪ್ರಿಯಕರ
ರಕ್ಷಿತಾಳಿಗೂ ಪ್ರಶಾಂತ್​ ಬೇರೆ ಮದುವೆಯಾಗಿದ್ದ ಸತ್ಯ ತಿಳಿದಿರಲಿಲ್ಲ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದಿನ ರಕ್ಷಿತಾ ಮದ್ಯ ಸೇವನೆ ಮಾಡಿದ್ದಳು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮದ್ಯಪಾನ ಮಾಡಿ ಪ್ರಶಾಂತ್​ಗೆ ಫೋನ್ ಮಾಡಿ ನೇಣಿಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೂ, ಒಂದು ತಿರ್ಮಾನಕ್ಕೆ ಬರದ ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ಕಾಲ್​ ರೆಕಾರ್ಡ್ಸ್​ನಲ್ಲಿ ಸ್ಫೋಟಕ ಮಾಹಿತಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 1 =
Remember me
