| ನಿರಂಜನ ದೇವರಮನೆ ಚಿತ್ರದುರ್ಗ
ನಿರಂತರ ಸಮಾಜೋ- ಧಾರ್ವಿುಕ ಕಾರ್ಯಗಳನ್ನು ನಿರ್ವಹಿ ಸುತ್ತಿರುವ ಈ ನಾಡಿನ ಅನೇಕ ಧರ್ಮಪೀಠಗಳು ಹಾಗೂ ದೇವಮಂದಿರಗಳಲ್ಲಿ ಒಂದು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠ.
ಪರಶಿವನ ಪಂಚಮುಖಗಳಿಂದ ಪ್ರಾದುರ್ಭವಿಸಿ ವೀರಶೈವ ಮತವನ್ನು ಸ್ಥಾಪಿಸಿ, ಶಿವಸವೋತ್ತಮತೆಯನ್ನು ಪ್ರಶಂಸಿಸಿ, ಶಿವಭಕ್ತಿ ಪ್ರಸಾರವನ್ನು ಕೈಗೊಂಡು ತಮ್ಮ ತಪಃಪ್ರಭಾವ ಹಾಗೂ ಕ್ರಿಯಾತ್ಮಕ ಶಕ್ತಿಯಿಂದ ಜಗತ್ತಿನ ಪವಿತ್ರ ಸ್ಥಳಗಳಲ್ಲಿ ಶಿವಲಿಂಗಗಳನ್ನು ಸ್ಥಾಪಿಸಿ, ಶಿವಪೂಜಾ ವೈಭವವನ್ನು ಪ್ರದರ್ಶಿಸಿದ ಶ್ರೀಜಗದ್ಗುರು ಪಂಚಾಚಾರ್ಯರು ಲೋಕಪೂಜ್ಯರೆನ್ನಿಸಿದ್ದಾರೆ. ಅಂತಹ ಪಂಚಪೀಠಗಳಲ್ಲಿ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠದ ಆದಿ ಆಚಾರ್ಯರಾದ ಶ್ರೀಜಗದ್ಗುರು ಮರುಳಾರಾಧ್ಯರು ಮಾಳವ ದೇಶದ ಕ್ಷಿಪ್ರ ನದಿ ತಟದಲ್ಲಿರುವ ಶ್ರೀಸಿದ್ದೇಶ್ವರ ಲಿಂಗದಿಂದ ಅವತರಿಸಿ ಅಲ್ಲಿಯೇ ಶ್ರೀಪೀಠವನ್ನು ಸ್ಥಾಪಿಸಿ ‘ಶಿವಾದ್ವೈತ ಸಿದ್ಧಾಂತ’ವನ್ನು ಮಾನವ ಕುಲದ
ಉದ್ದಾರಕ್ಕಾಗಿ ಸಂಸ್ಥಾಪಿಸಿ ಮಹಾಮಹಿಮರಾಗಿದ್ದಾರೆ. ಈ ಪರಂಪ ರೆಯ ಶ್ರೀ ದಾರುಕಾಚಾರ್ಯರು ಹಿಂದುಳಿದ ವರ್ಗದ ದಧೀಚಿಗೆ ಶಿವಾದ್ವೈತವನ್ನು ಬೋಧಿಸಿ ಕುಲ-ಹದಿನೆಂಟು ಜಾತಿಯನ್ನು ಉದ್ಧರಿಸಿದ ಸಮಾಜ ಪರಿವರ್ತನ ಮಹಾ ಪ್ರವರ್ತಕರಾಗಿದ್ದಾರೆ. ಕಾಲಾಂತರದಲ್ಲಿ ಕರ್ನಾಟಕದ ಉಜ್ಜಯಿನಿ ಪರಿಸರಕ್ಕೆ ಸ್ಥಳಾಂತರವಾದ ಈ ಪೀಠ ಅಂದಿನ ತನ್ನ ಧರ್ಮ-ಸಂಸ್ಕೃತಿ-ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದೆ. ಈ ಪೀಠದ ಆಚರಣೆಗಳಲ್ಲಿ ಬಹುಮುಖ್ಯವಾದ ಶ್ರೀ ಮರುಳಸಿದ್ಧೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ತೈಲಾಭಿಷೇಕ ಬಹುವಿಶಿಷ್ಟವಾಗಿದೆ. ರಾಷ್ಟ್ರದ ಭಾವೈಕ್ಯತೆಯ ಬೆಸುಗೆಯಾಗಿ, ಸರ್ವಧರ್ಮ ಸಹಿಷ್ಣುತೆಯ ಸಂಬಂಧಿಯಾಗಿ, ಸಾಮಾಜಿಕ ಸಂವೇದನೆಯ ಸೇತುಬಂಧವಾಗಿದೆ.

ವಿಶ್ವದಲ್ಲೇ ವಿಶಿಷ್ಟ ಶಿಖರ ತೈಲಾಭಿಷೇಕ:ಅಕ್ಷಯ ತದಿಗೆ ಅಮವಾಸ್ಯೆಯಂದು ಆರಂಭವಾಗಿರುವ ಜಾತ್ರೆಯು ಒಂದು ವಾರ ನಡೆಯಲಿದ್ದು, ಮೇ 12ರಂದು ಸಂಜೆ ಗೋಧೂಳಿ ಮುಹೂರ್ತದಲ್ಲಿ ಶ್ರೀಮರುಳಸಿದ್ದೇಶ್ವರಸ್ವಾಮಿಯ ಮಹಾರಥೋತ್ಸವ ನಡೆಯಲಿದೆ. ಶ್ರೀಉಜ್ಜಯಿನಿ ಜಗದ್ಗುರುಗಳು ಹಾಗೂ ಕಾಶೀ ಪೀಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳ ಸಾನಿಧ್ಯದಲ್ಲಿ ನೂರಾರು ಗುರು-ವಿರಕ್ತ ಸ್ವಾಮಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿ ಯೊಂದಿಗೆ ನಡೆಯಲಿದೆ. ಅಂದು ಸಂಜೆ ಶ್ರೀದಾರುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಸದ್ಧರ್ಮ ಜನಜಾಗೃತಿ ಧರ್ಮ ಸಮಾರಂಭ ಜರುಗಲಿದೆ.
ಮೇ 13ರಂದು ಸಂಜೆ 5 ಗಂಟೆಗೆ ಶ್ರೀಮರುಳಸಿದ್ಧೇಶ್ವರಸ್ವಾಮಿ ದೇವಾಲಯದ ಶಿಖರಕ್ಕೆ ತೈಲಾಭಿಷೇಕ ನೆರವೇರಲಿದೆ. ಪರಂಪರೆಯಂತೆ ಜರೀಮಲೆ ರಾಜವಂಶಸ್ಥರಿಂದ ಶಿಖರಕ್ಕೆ ಪ್ರಥಮವಾಗಿ ತೈಲವನ್ನು ಅಭಿಷೇಕ ಮಾಡಲಾಗುತ್ತದೆ. ನಾಡಿನ ಜನತೆಗೆ ಬಂದೊಂದಗಿದ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ ಸುಖ-ಶಾಂತಿ ನೆಲೆಸಲಿ ಎಂಬ ಆಶಯ ಹಾಗೂ ಶನಿದೋಷನಿವಾರಣೆಯಾಗಲಿ ಎಂಬ ಹಿನ್ನೆಲೆಯಲ್ಲಿ ತೈಲಾಭಿಷೇಕ ನಡೆಸಲಾಗುತ್ತದೆ. ಮೇ 14ಕ್ಕೆ ವೀರಮಾಹೇಶ್ವರ ಜಂಗಮ ವಟುಗಳಿಗೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಹಾಗೂ ಧರ್ವೇಪದೇಶ, ಮೇ 17ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. ಅಂತಿಮವಾಗಿ ಶ್ರೀಮರುಳಸಿದ್ದೇಶ್ವರ ಸ್ವಾಮಿಗೆ ಆಘ್ರವಣೆ ನೀಡಿ ಕಂಕಣ ವಿಸರ್ಜನೆಯೊಂದಿಗೆ ದೇವಾಲಯ ಶುದ್ದೀಕರಣ ಮಾಡುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಸಾಮಾಜಿಕ ಸೌಹಾರ್ದದ ಪ್ರತೀಕ: ಶ್ರೀಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ಪೀಠ ಪರಂಪರೆಯೊಂದಿಗೆ ಜನಪರ ಕಲ್ಯಾಣವನ್ನು ತಮ್ಮದಾಗಿಸಿಕೊಂಡು ಮಾನವ ಧರ್ಮವನ್ನು ಎತ್ತಿ ಹಿಡಿಯುವ ಕೈಂಕರ್ಯವನ್ನು ನಿರ್ವಹಿಸುತ್ತಿದ್ದಾರೆ. ಧರ್ಮ-ಸಂಸ್ಕೃತಿ-ಪರಂಪರೆಯನ್ನು ಆಧುನಿಕತೆಯೊಂದಿಗೆ ಬೆರೆಸಿ ಪೀಠದ ಅಸ್ಮಿತೆಯನ್ನು ಇಡೀ ನಾಡಿಗೆ ಅನಾವರಣಗೊಳಿಸುತ್ತಿರು ವುದು ವಿಶೇಷ. ಜಾತ್ರಾ ಮಹೋತ್ಸವದ ಆಮಂತ್ರಣಪತ್ರಿಕೆಯಲ್ಲಿ ‘ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ, ಪ್ರಜಾ ಪ್ರಭುತ್ವದ ಭವ್ಯತೆಯನ್ನು ಬೆಳಗಿಸಿ’ ಎಂಬ ಘೊಷವಾಕ್ಯವನ್ನು ಪ್ರಕಟಿಸಿ ಮತ ದಾರರಲ್ಲಿ ಜಾಗೃತಿಯನ್ನು ಮೂಡಿಸಿದ ಪರಿ ಶ್ಲಾಘನೀಯವಾಗಿತ್ತು. ಈ ನಾಡು ವಿಶ್ವಕಲ್ಯಾಣ ರಾಷ್ಟ್ರವಾಗಲಿ, ಸರ್ವರೂ ಸುಖ-ಸಂತೋಷದಿಂದ ಬಾಳಲಿ, ನಾಡಿನ ಕ್ಷಾಮ-ಡಾಮರಗಳು ದೂರವಾಗಿ ಕ್ಷೇಮ-ಸಂಪತ್ತುಗಳು ಸದಾ ನೆಲೆಸುವಂತಾಗಲಿ, ಭಕ್ತರು ವಾಸಿಸುವ ಊರು-ಕೇರಿಗಳು ಒಂದಾಗಿ ಧರ್ಮ-ಸಂಸ್ಕೃತಿಯ ನೆಲೆಗಳಾಗಲಿ ಎಂಬ ಪ್ರೇರಕ ಧರ್ಮಶಕ್ತಿಯನ್ನು ಈ ಜಾತ್ರಾ ಮಹೋತ್ಸವದ ಮೂಲಕ ಅನುಷ್ಠಾನಗೊಳಿಸಿದ್ದಾರೆ.
ಈ ನಾಡಿನ ರೈತರಿಗೆ ಶ್ರೀಮರುಳಸಿದ್ದೇಶ್ವರನ ಕೃಪೆ ಇದ್ದರೆ, ಮಳೆ-ಬೆಳೆ ಸಮೃದ್ಧವಾಗಿ ಬರುತ್ತದೆ ಎಂಬ ಗಾಢ ನಂಬಿಕೆ ಇರುವುದರಿಂದ ಈ ಜಾತ್ರಾ ಮಹೋತ್ಸವಕ್ಕೆ ಬರುವ ರೈತರು, ಭಕ್ತಾದಿಗಳು ತಮ್ಮ ದಾಸೋಹ ಸೇವೆಯನ್ನು ಅರ್ಪಿಸುತ್ತಾರೆ. ಹೀಗೆ ಹತ್ತಾರು ದಿನಗಳವರೆಗೆ ಜರುಗುವ ಈ ಜಾತ್ರಾ ಮಹೋತ್ಸವ ನೂರಾರು ಚಿಂತನೆಗಳನ್ನು ಇಟ್ಟುಕೊಂಡು ಸಮಾಜೋ- ಧಾರ್ವಿುಕ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಸಾಮಾಜಿಕ ಸೌಹಾರ್ದತೆಯ ತತ್ವ-ಸಿದ್ಧಾಂತಗಳನ್ನು ಸಾರಿ ಸತ್ವಪೂರ್ಣ ಸಾತ್ವಿಕ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗುತ್ತದೆ.

ಬಿಜೆಪಿ ಮುಖಂಡ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
