ಬೆಂಗಳೂರು:ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಸಿಗುವ ದಿನಗಳು ಹತ್ತಿರ ಬರುತ್ತಿದ್ದಂತೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೂ ಕೇಂದ್ರದ ನೆರವನ್ನು ದೊಡ್ಡ ಪ್ರಮಾಣದಲ್ಲಿ ಪಡೆಯುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 2.30 ಲಕ್ಷ ಕೋಟಿ ರೂ.ಗಳಷ್ಟು ದೊಡ್ಡ ಪ್ರಮಾಣದ ಹಣ ಬೇಕಾಗಿದೆ. ಆದರೆ, ರಾಷ್ಟ್ರೀಯ ಯೋಜನೆ ಗಳಾದರೆ ಕೇಂದ್ರದಿಂದ ನೆರವು ಶೇ.60 ಸಿಗುವುದರಿಂದ ಸರ್ಕಾರ ಯುಕೆಪಿ ಮೂರನೇ ಹಂತಕ್ಕೂ ಪಡೆಯಲು ನಿರ್ಧರಿಸಿದೆ. ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದು ಬಹಳಷ್ಟು ದಿನಗಳೇ ಆಗಿದೆ. ಆದರೆ ಇನ್ನೂ ಅಧಿಸೂಚನೆ ಪ್ರಕಟವಾಗಿಲ್ಲ. ಆದ್ದರಿಂದ ಸರ್ಕಾರ ಮಹಾರಾಷ್ಟ್ರದ ಜತೆ ಸೇರಿ ಗೆಜೆಟ್ ಪ್ರಕಟಣೆಗೆ ಪ್ರಯತ್ನ ನಡೆಸಿದೆ. ಕೃಷ್ಣಾ ಯೋಜನೆ ವ್ಯಾಪ್ತಿಗೆ ಬರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಮಾತ್ರ ಈ ಪ್ರಯತ್ನಕ್ಕೆ ವಿರೋಧ ಮಾಡುತ್ತಿವೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಭೂ ಸ್ವಾಧೀನ ಬಿಟ್ಟು 40 ಸಾವಿರ ಕೋಟಿ ರೂ.ಗಳ ಅಗತ್ಯ ಇದೆ ಎಂಬುದು ಸದ್ಯದ ಅಂದಾಜು. ರಾಷ್ಟ್ರೀಯ ಯೋಜನೆಯಾದರೆ ಸುಮಾರು 25 ಸಾವಿರ ಕೋಟಿ ರೂ. ಲಭ್ಯವಾಗುತ್ತದೆ. ಕೃಷ್ಣಾ ಮೇಲ್ದಂಡೆಯಲ್ಲಿ ಅರಣ್ಯ ಮುಳುಗಡೆ ಇರುವುದಿಲ್ಲ. ಬಯಲು ಪ್ರದೇಶದಲ್ಲಿಯೇ ಆಗುತ್ತಿರುವ ಯೋಜನೆಯಾಗಿದೆ. ಆದ್ದರಿಂದ ಗೆಜೆಟ್ ಆದರೆ ಸಾಕು, ಉಳಿದ ಪ್ರಕ್ರಿಯೆಗಳು ತಡವಾಗುವುದಿಲ್ಲವೆಂದು ಅಭಿಪ್ರಾಯಪಡುತ್ತಾರೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ.
ಮೂರನೇ ಹಂತ ಏನು, ಎತ್ತ?:ರಾಜ್ಯಕ್ಕೆ ಲಭ್ಯವಾಗುವ 130 ಟಿಎಂಸಿ ನೀರನ್ನು ಬಳಸಿಕೊಳ್ಳುವುದು ಮೂರನೇ ಹಂತದ ಯೋಜನೆಯಾಗಿದೆ. ಇದಕ್ಕಾಗಿ 1.34 ಲಕ್ಷ ಎಕರೆ ಭೂಮಿ ಸ್ವಾಧೀನ ಮಾಡಬೇಕಾಗಿದೆ. ಅದರಲ್ಲಿ 75 ಸಾವಿರ ಎಕರೆ ಮುಳುಗಡೆಯಾಗುತ್ತದೆ. ಉಳಿದಿದ್ದು ಪುನರ್ವಸತಿ ಮತ್ತು ಪುನರ್​ನಿರ್ವಣಕ್ಕೆ (ಆರ್ ಅಂಡ್ ಆರ್) ಬೇಕಾಗುತ್ತದೆ. 20 ಗ್ರಾಮಗಳನ್ನು ಸ್ಥಳಾಂತರ ಮಾಡಬೇಕಾಗಿದೆ. ಅದಕ್ಕಾಗಿ 6500 ಎಕರೆ ಜಮೀನು ಬೇಕಾಗಿದೆ. 3ನೇ ಹಂತಕ್ಕೆ ಬೇಕಾದ ಭೂಮಿಯಲ್ಲಿ 25 ಸಾವಿರ ಎಕರೆ ಭೂಮಿ ಸ್ವಾಧೀನ ಆಗಿದೆ. 37 ಸಾವಿರ ಎಕರೆ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಉಳಿದ 72 ಸಾವಿರ ಎಕರೆ ಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಸೂಚನೆ ನೀಡ ಲಾಗಿದೆ. ಕೆಲವೊಂದು ಸಿವಿಲ್ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ ಎಂದು ಸಚಿವ ಕಾರಜೋಳ ವಿವರಿಸಿದರು.
ಯುಕೆಪಿ ಮೂರನೇ ಹಂತದ ಆರ್ ಆಂಡ್ ಆರ್​ಗೆ ಈ ವರ್ಷದಲ್ಲಿಯೇ ಸರ್ಕಾರ ಸುಮಾರು 10 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಎಂದು ಹೇಳಿದರು. ಸ್ಥಳಾಂತರವಾಗುವ 20 ಹಳ್ಳಿಗಳಿಗೆ ಸಂಬಂಧಿಸಿದಂತೆ ಪುನರ್ವಸತಿ ಕೇಂದ್ರಗಳನ್ನು ತಕ್ಷಣ ತೆರೆಯಲು ಸರ್ಕಾರ ನಿರ್ಧರಿಸಿದೆ.
ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಹಣಕಾಸಿನ ಕೊರತೆ ಇರುವುದರಿಂದ ಬೇರೆಬೇರೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೇಂದ್ರದಿಂದ ರಾಷ್ಟ್ರೀಯ ಯೋಜನೆ ಮಾನ್ಯತೆ ಪಡೆದರೆ ಅನುಕೂಲವಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸದ್ಯದಲ್ಲಿಯೇ ರಾಷ್ಟ್ರೀಯ ಯೋಜನೆ ಮಾನ್ಯತೆ ಸಿಗಲಿದೆ. ನಂತರ ಯುಕೆಪಿಗೆ ಪ್ರಯತ್ನ ನಡೆಸಲಾಗುತ್ತದೆ.
|ಗೋವಿಂದ ಕಾರಜೋಳಜಲಸಂಪನ್ಮೂಲ ಸಚಿವ
ಭದ್ರಾದಲ್ಲಿ ಸಿಗಲಿದೆ 10 ಸಾವಿರ ಕೋಟಿ ರೂ.:ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದರೆ ಸುಮಾರು 10 ಸಾವಿರ ಕೋಟಿ ರೂ.ಗಳು ಸಿಗಲಿದೆ. ಅದಕ್ಕಾಗಿಯೇ ಎಲ್ಲ ಪ್ರಯತ್ನಗಳು ನಡೆದಿದೆ. ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಇದರಿಂದ ಅನುಕೂಲವಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಈಗ ಕುಂಟುತ್ತಾ ಸಾಗುತ್ತಿದೆ.
ಮಹದಾಯಿ:ಮಹದಾಯಿ ಯೋಜನೆಯನ್ನು ಜಾರಿಗೊಳಿ ಸಲು ಬೇಕಾದ ಅನುಮತಿ ಪಡೆಯಲು ಸರ್ಕಾರ ಪ್ರಯತ್ನ ನಡೆ ಸಿದೆ. ಈ ಸಾಲಿನಲ್ಲಿ 1000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಹೀಗೂ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ನಿರ್ದೇಶಕ ಅನೂಪ್ ಭಂಡಾರಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 1 =
Remember me
