ಹುಬ್ಬಳ್ಳಿ:ಬಂಡಿವಾಡ ಬಳಿ ಶುಕ್ರವಾರ ರಾತ್ರಿ ಚಿತ್ರನಟಿ, ಮಾಜಿ ಸಚಿವೆ ಉಮಾಶ್ರೀ ಕಾರು ಮತ್ತು ಇನ್ನೊಂದು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ತಮ್ಮದೇ ಇನ್ನೋವಾ ಕಾರು ಹಾಗೂ ಮತ್ತೊಂದು ಕಾರಿನ ಮಧ್ಯೆ ಶುಕ್ರವಾರ ರಾತ್ರಿ ಇಲ್ಲಿಯ ಗದಗ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಎರಡು ಜೀವ ಬಲಿಯಾಗಿರುವುದಕ್ಕೆ ಮಾಜಿ ಸಚಿವೆ ಉಮಾಶ್ರೀ ತೀವ್ರ ಸಂಕಟಪಟ್ಟಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಲೇ ಹುಬ್ಬಳ್ಳಿಗೆ ಆಗಮಿಸಿದ ಉಮಾಶ್ರೀ ತೀವ್ರ ನೋವು ತೋಡಿಕೊಂಡಿದ್ದಾರೆ.
ಅಪಘಾತದಲ್ಲಿ ಶೋಭಾ ಕಟ್ಟಿ ಹಾಗೂ ಚಾಲಕ ಸಂದೀಪ ವಿಭೂತಿಮಠ ಎಂಬುವವರು ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಡಾ. ಸ್ಮಿತಾ ಕಟ್ಟಿ ಎನ್ನುವವರು ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋವಾ ಕಾರು ಚಾಲಕ ಶಿವಕುಮಾರ ಕೂಡ ಗಾಯಗೊಂಡಿದ್ದು, ಕಿಮ್ಸ್​ನಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಕಾರು ಚಾಲಕನನ್ನು ಭೇಟಿ ಮಾಡಿದ ಉಮಾಶ್ರೀ, ಅಪಘಾತದಲ್ಲಿ ಇಬ್ಬರು ಜೀವ ತೆತ್ತಿದ್ದಾರೆ. ಇದು ತುಂಬಾ ನೋವಿನ ಸಂಗತಿ. ಯಾಕಪ್ಪಾ ಹೀಗೆ ಮಾಡಿದೆ? ಎಂದು ಚಾಲಕನ ಬಳಿ ಬೇಸರ ವ್ಯಕ್ತಪಡಿಸಿದರು.
ಇನ್ನೋವಾದಲ್ಲಿ ನ.15ಕ್ಕೆ ಹುಬ್ಬಳ್ಳಿಗೆ ಬಂದಿದ್ದೆ. 19ಕ್ಕೆ ಪುನಃ ಬೇರೆ ಕಡೆ ಹೋಗಿ ನ.20ಕ್ಕೆ ಹುಬ್ಬಳ್ಳಿಗೆ ಬರುವುದಿತ್ತು. ಹಾಗಾಗಿ ಕಾರನ್ನು ವಾಪಸ್​ ಕಳಿಸುವುದು ಬೇಡ ಎಂದು ಚಾಲಕನ ಬಳಿ ಬಿಟ್ಟಿದ್ದೆ. ಆದರೆ, ಚಾಲಕ ತಾನೊಬ್ಬನೇ ಗಾಡಿ ತೆಗೆದುಕೊಂಡು ಹೋಗಿದ್ದ. ಯಾಕೆ ಹುಬ್ಬಳ್ಳಿಗೆ ಬಂದಿದ್ದ ಎಂಬುದು ಗೊತ್ತಿಲ್ಲ. ಒಂದು ತಿಂಗಳ ಹಿಂದಷ್ಟೇ ಆತನನ್ನು ನಮ್ಮ ಪಕ್ಷದ ಕಾರ್ಯಕರ್ತರು ಪರಿಚಯಿಸಿದ್ದರು. ಇಡೀ ಘಟನೆಯಿಂದ ನನಗೆ ನೋವಾಗಿದೆ ಎಂದು ಉಮಾಶ್ರೀ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ. ಸ್ಮಿತಾ ಕಟ್ಟಿ ಅವರನ್ನೂ ಉಮಾಶ್ರೀ ಭೇಟಿ ಮಾಡಿದ್ದಾರೆ.
ಹೆಣ್ಣು ಭ್ರೂಣ ಎಂದು ಬಲವಂತವಾಗಿ ಅಬಾರ್ಷನ್ ಮಾಡಿಸಿದ ಭೂಪ! ಮಗುವಿನ ಜತೆಗೆ ತಾಯಿಯೂ ಬದುಕಲಿಲ್ಲ…

ಗಂಡನನ್ನು ತೊರೆದು ಬಂದವಳ ಬದುಕಲ್ಲಿ ದುರಂತ! ಇಷ್ಟಪಟ್ಟು ಮದುವೆಯಾದವನ ಜತೆ ಹೆಣವಾದಳು

ನಿಶ್ಚಿತಾರ್ಥಕ್ಕೆ ಹೊರಟಿದ್ದವರ ಎದುರಿಗೆ ಬಂದ ಜವರಾಯ ಐವರ ಪ್ರಾಣ ಹೊತ್ತೊಯ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eleven =
Remember me
