ಬೆಂಗಳೂರು:ಕೆಲವೇ ನಿಮಿಷಗಳ ಮೊದಲು ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅವರು ಎರಡು ವಾರಗಳ ಹಿಂದೆ ವಿಜಯವಾಣಿ ಜತೆ ಮಾತನಾಡಿದ್ದರು. ಅಂದು ವಿಜಯವಾಣಿ ಪ್ರತಿನಿಧಿ ಜತೆ ಮಾತನಾಡಿದ್ದ ಅವರು, ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದರು. ಕಾಕತಾಳೀಯ ಎಂಬಂತೆ ಅದು ನಿಜವಾಗಿದೆ.
ವಿಜಯವಾಣಿ:ಮುಂದಿನ ಚುನಾವಣೆಯಲ್ಲಿ ನೀವು ಕ್ಷೇತ್ರ ಬದಲಿಸ್ತೀರಾ? ಹಿರಿಯರು ಬೇರೆ ಕ್ಷೇತ್ರ ನೋಡಿಕೊಳ್ಳಿ ಎಂದು ಪಕ್ಷದ ಸೂಚನೆ ಇದೆಯಲ್ಲ!
ಉಮೇಶ್ ಕತ್ತಿ:ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್‌ಎ.. ಇನ್ನು 10 ವರ್ಷ ಯಾರೂ ನನ್ನ ಅಲ್ಲಾಡಿಸೋಕೆ ಆಗೋಲ್ಲ. ಯಾವನೂ ನನ್ನ ಸ್ಥಾನ ಕಿತ್ಕೊಳಕೆ ಆಗಲ್ಲ.
ವಿಜಯವಾಣಿ:ನೀವು ಪದೇಪದೆ ಸಿಎಂ ಆಗ್ತೇನೆ ಅಂತೀರಾ? ನಿಜಕ್ಕೂ ಅಷ್ಟೊಂದು ಆಸೆ ಇದೆಯಾ? ಮುಂದಿನ ಬಾರಿ ಪ್ರಯತ್ನ ಮಾಡ್ತಿರಾ?
ಉಮೇಶ್ ಕತ್ತಿ:ಬೇಡಪ್ಪಾ ಬೇಡ, ಆ ಸ್ಥಾನ 300 ಡಿಗ್ರಿ ಹೆಂಚಿನ ಮೇಲೆ ಕೂತಂತೆ. ಯಾರಿಗೆ ಬೇಕ್ರಿ? ಈಗ ಆರಾಮ್ ಇದ್ದೇನೆ. ಅಧಿಕಾರದಲ್ಲಿರಬೇಕು, ಸಚಿವನಾಗಿದ್ದೇನೆ, ಸಂತೃಪ್ತ. ನನ್ನ ಉದ್ಯಮದಲ್ಲಿ ಒಳ್ಳೆಯ ಆದಾಯ ಇದೆ, ಅಷ್ಟು ಸಾಕು.
ವಿಜಯವಾಣಿ:ನೀವು ಮತ್ತೆ ಅಧಿಕಾರಕ್ಕೆ ಬರೋ ವಿಶ್ವಾಸ ಇದೆಯಾ?
ಉಮೇಶ್ ಕತ್ತಿ:ಡಿಕೆಶಿ ಸಿದ್ದರಾಮಯ್ಯ ಒಟ್ಟಿಗೆ ಹೋದರೆ ನಮಗೆ ಕಷ್ಟ. ಅವರು ಒಟ್ಟಿಗೆ ಹೋಗುವುದು ಅನುಮಾನ. ನಾವೇ ದೊಡ್ಡ ಪಕ್ಷವಾಗಿ ಬರುತ್ತೇವೆ.
ಪತ್ರಕರ್ತರು:ರಾಜ್ಯದ ಕೆಲವು ಕಡೆ ಚಿರತೆ ಹಾವಳಿ ಇದೆ, ಇನ್ನು ಕೆಲವು ಕಡೆ ಆನೆ ಹಾವಳಿ ಇದೆಯಲ್ಲ… ಏನು ಮಾಡ್ತಿದೆ ಅರಣ್ಯ ಇಲಾಖೆ?
ಉಮೇಶ್ ಕತ್ತಿ:ಮೊದಲು‌ ನಿಮಗೆ ಗುಂಡು ಹಾರಿಸಬೇಕು, ಆಗ ಎಲ್ಲ ಸರಿ ಆಗುತ್ತೆ. ನಾವು ಪ್ರಾಣಿಗಳ ಸ್ಥಳ ಆವರಿಸಿಕೊಂಡಿದ್ದೇವೆ. ಅವು ಏನು ಮಾಡ್ತವೆ? ಪತ್ರಕರ್ತರೇ ನೀವೇ ಹೇಳಿ ಏನು ಮಾಡಬೇಕು… ನಾನು ಹಾಗೆ ಮಾಡ್ತಿನಿ.

ಕತ್ತಿ ತಂದೆ ಅಧಿವೇಶನ ನಡೆಯುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು; ಪುತ್ರನೂ ಹೃದಯಾಘಾತಕ್ಕೆ ಬಲಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 3 =
Remember me
