ಯಾದಗಿರಿ:ಮಂಗಗಳು ಅಂದರೆ ಹೆದರಿ ಮಾರುದ್ದ ದೂರ ಹೋಗುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿಯ ಸುತ್ತ ಮಂಗಗಳು ಸುತ್ತುವರೆದರೂ ಆತ ಯಾವುದಕ್ಕೂ ಅಂಜದೆ ಅಳುಕದೇ ಮಂಗಗಳೊಡನೆ ಆಟವಾಡುತ್ತಿರುವ ವಿಡಿಯೋ ಇದೀಗ ಯಾದಗಿರಿ ಜಿಲ್ಲೆಯಲ್ಲಿ ಫುಲ್ ವೈರಲ್ ಆಗಿದೆ.
ಹೌದು, ಯಾದಗಿರಿ ತಾಲೂಕಿನ ಮುದ್ನಾಳ್ ಗ್ರಾಮದ ನಿವಾಸಿ ಪ್ರಾಣಿ ಪ್ರಿಯ ಉಮೇಶ್ ಮುದ್ನಾಳ್ ಎಂಬುವವರು ಮಂಗಗಳೊಡನೆ ಅನ್ಯೋನ್ಯತೆಯಿಂದ ಬೆರೆತು ತಮ್ಮ ಮಕ್ಕಳೊಂದಿಗೆ ಹೇಗೆ ಕಾಲ ಕಳೆಯುತ್ತಾರೋ ಅದೇ ರೀತಿ ಕೋತಿಗಳೊಡನೆ ಸಮಯ ಕಳೆದಿದ್ದಾರೆ.
ಬೆಳಗ್ಗೆ ಮನೆಯ ಹೊರಗಡೆ ಮಲಗಿದ್ದಾಗ ಗುಂಪು ಗುಂಪಾಗಿ ಮಂಗಗಳು ಬಂದು ಪ್ರಾಣಿ ಪ್ರೇಮಿ ಉಮೇಶ ಮುದ್ನಾಳ್ ಅವರನ್ನು ಹಾಸಿಗೆಯಿಂದ ಎಬ್ಬಿಸಿ, ಅವರನ್ನು ಸುತ್ತುವರೆದು, ಹೆಗಲ ಮೇಲೆ ಕೂರುತ್ತವೆ. ಹೀಗೆ ನಿದ್ರೆಯಿಂದ ಎಬ್ಬಿಸಿದ ಮಂಗಗಳ ಮೇಲೆ ಉಮೇಶ್​, ಯಾವುದೇ ರೀತಿಯಲ್ಲಿ ಸಿಟ್ಟು ಮಾಡಿಕೊಳ್ಳದೆ, ಪ್ರೀತಿಯಿಂದ ಮೈದವಡುತ್ತಾರೆ. ಬಳಿಕ ಎಲ್ಲ ಮಂಗಗಳಿಗೂ ಹಣ್ಣು ಹಂಪಲು ನೀಡಿ ಅವುಗಳೊಂದಿಗೆ ಅನ್ಯೋನ್ಯತೆಯಿಂದ ಕಾಲ ಕಳೆಯುತ್ತಾರೆ.
ಸದ್ಯ ಈ ಮಂಗಗಳೊಡನೆ ತುಂಬಾ ಪ್ರೀತಿಯಿಂದ ಬೆರೆತು ಆಟವಾಡುವ ಪ್ರಾಣಿ ಪ್ರೇಮಿ ಉಮೇಶ್ ಮುದ್ನಾಳ್ ಅವರ ವೀಡಿಯೋ ಸಾಮಾಜಿಕ ಜಾಲತಡಣದಲ್ಲಿ ಫುಲ್ ವೈರಲ್ ಆಗಿದೆ. ಉಮೇಶ್ ಮುದ್ನಾಳ್ ಅವರ ಪ್ರಾಣಿ ಪ್ರೇಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಸರ್ಕಾರ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ; ಸಿದ್ದರಾಮಯ್ಯ

INDIA ಒಕ್ಕೂಟದ ನಾಯಕರ ಐಫೋನ್ ಹ್ಯಾಕ್ ಯತ್ನ ಪ್ರಕರಣ: ಆ್ಯಪಲ್​ ಕೊಟ್ಟ ಸ್ಪಷ್ಟನೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
