ಹಾವೇರಿ:ಕಿಡ್ನಿ ಸ್ಟೋನ್​​ನಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಕಾವ್ಯಾ ಪಾಟೀಲ್ (19) ಮೃತ ಯುವತಿಯಾಗಿದ್ದಾಳೆ. ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನದೀಹರಳಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:VIDEO| ಸಿಂಹಕ್ಕೆ ನೀರು ಕುಡಿಸಿದ ಯುವಕ: ಈತನ ಧೈರ್ಯಕ್ಕೆ ನೀವು ಏನು ಹೇಳುತ್ತೀರಾ..?
ಕಿಡ್ನಿಯಲ್ಲಿ ಸ್ಟೋನ್​​ಗಳಿದ್ದ ಕಾರಣ ಕಾವ್ಯಾ ಪಾಟೀಲ್ ಹೊಟ್ಟೆ ನೋವಿನಿಂದ ನರಳುತ್ತಿದ್ದಳು. ಈ ನೋವು ತಾಳಲಾರದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆಂದು ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಾರಪಟ್ಟಣಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿಡ್ನಿ ಕಲ್ಲುಗಳು:ಕಿಡ್ನಿ ಕಲ್ಲುಗಳು ಜನರು ಎದುರಿಸುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಖನಿಜಗಳು ಮೂತ್ರಪಿಂಡಗಳಲ್ಲಿ ಸ್ಫಟಿಕೀಕರಣಗೊಂಡಾಗ ಕಲ್ಲುಗಳು ಉಂಟಾಗುತ್ತವೆ. ಕಲ್ಲುಗಳು ಸಾಮಾನ್ಯವಾಗಿ ನೋವಿನಿಂದ ಕೂಡಿರುತ್ತವೆ ಮತ್ತು ಮೂತ್ರದಲ್ಲಿ ರಕ್ತವನ್ನು ಉಂಟುಮಾಡುತ್ತವೆ ಆದರೆ ಇತರ ಮೂತ್ರಪಿಂಡದ ಕಾಯಿಲೆಗಳಂತೆ ಹಾನಿಕಾರಕವಲ್ಲ. ಮೂತ್ರ ವಿಸರ್ಜನೆಯ ಸಮಯದಲ್ಲಿ ಕಲ್ಲುಗಳು ಸಾಮಾನ್ಯವಾಗಿ ಹೊರಬರುತ್ತವೆ ಆದರೆ ತುಂಬಾ ನೋವಿನಿಂದ ಕೂಡಿರುತ್ತವೆ.
ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಏನು ಕಾರಣ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − eight =
Remember me
