ಬೆಂಗಳೂರು:ಇಡ್ಲಿ ಎಂದ್ರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವಾಗುತ್ತದೆ. ಇಡ್ಲಿ ಜತೆ ಬಿಸಿ ಬಿಸಿಯಾದ ಸಾಂಬಾರ್,​ ಚಟ್ನಿ ಒಂದು ವಡೆ ಇದ್ರೆ ಸಾಕು. ನಾಲಿಗೆಗೆ ರುಚಿ ಹಿಡಿಯುತ್ತದೆ. ದಕ್ಷಿಣ ಭಾರತದ ಸಾಂಪ್ರದಾಯಕ ತಿನಿಸುಗಳಲ್ಲಿ ಒಂದು. ಆದರೆ ಸ್ಯಾಂಡಲ್​ವುಡ್​​ ನಟ ಸುದೀಪ್​ ಅವರಿಗೆ ಬ್ಯಾಂಗಲೋರ್​ ಇಡ್ಲಿ ಬೇಡಾ ಅಂತೆ. ಕಿಚ್ಚಾ ಯಾಕೆ ಹೀಗೆ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಕನ್ನಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಕರೆಯಲಾಗುತ್ತಿದೆ. ಆದರೆ, ಇಂಗ್ಲಿಷ್​ನಲ್ಲಿ Bengaluru ಬದಲು Bangalore ಎನ್ನುವ ಸ್ಪೆಲ್ಲಿಂಗ್ ಇದೆ. ಅಭಿಮಾನಿಗಳ ಬಹುವರ್ಷಗಳ ಬೇಡಿಕೆಯನ್ನು ಆರ್​ಸಿಬಿ ತಂಡ ಕೊನೆಗೂ ಈಡೇರಿಸಲು ಮುಂದಾಗಿದೆ. ಇಂಗ್ಲಿಷ್​ನಲ್ಲಿ “ರಾಯಲ್​ ಚಾಲೆಂಜರ್ಸ್​ ಬ್ಯಾಂಗಲೋರ್​​’ (Bangalore) ಎಂದಿರುವ ತಂಡದ ಹೆಸರು ಇನ್ಮುಂದೆ “ರಾಯಲ್​ ಚಾಲೆಂಜರ್ಸ್​ ಬೆಂಗಳೂರು’ (Bengaluru) ಎಂದು ಬದಲಾಗುವ ನಿರೀಕ್ಷೆ ಇದೆ.
ಮಾರ್ಚ್​ 19ರಂದು ‘ಆರ್​ಸಿಬಿ ಅನ್​ಬಾಕ್ಸ್’ ಕಾರ್ಯಕ್ರಮ ನಡೆಸಲಿದೆ. ಮಾರ್ಚ್​ 19ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.  ಈ ಕುರಿತಾದ ಪ್ರೋಮೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ. ರಿಷಬ್​ ಶೆಟ್ಟಿ, ಶಿವರಾಜ್​ಕುಮಾರ್​​, ಸುದೀಪ್​ ಅವರು ಕಾಣಿಸಿಕೊಂಡಿರುವ ಪ್ರೋಮೋಗಳು  ವೈರಲ್​​ ಆಗಿವೆ.
ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
Understood what Rishabh Shetty is trying to say?
You’ll find out at RCB Unbox. Buy your tickets now. 🎟️@shetty_rishab#RCBUnbox#PlayBold#ArthaAytha#ನಮ್ಮRCBpic.twitter.com/sSrbf5HFmd
— Royal Challengers Bengaluru (@RCBTweets)March 13, 2024

ಈ ಸಮಾರಂಭದ ಪ್ರೋಮೊವೊಂದು ಬಿಡುಗಡೆಯಾಗಿದ್ದು, ಕಂಬಳದ ಕೋಣಗಳೊಂದಿಗೆ ಸ್ಯಾಂಡಲ್​​ವುಡ್​ ನಟ ರಿಷಬ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ.  ಮೂರು ಕಂಬಳದ ಕೋಣಗಳ ಮೇಲೆ ರಾಯಲ್​ ಚಾಲೆಂಜರ್ಸ್​ ಬ್ಯಾಂಗಲೋರ್ ಎಂದು ಬರೆದಿರುತ್ತದೆ. ಈ ವೇಳೆ ರಿಷಬ್ ಶೆಟ್ಟಿ ಬ್ಯಾಂಗಲೋರ್ ಹೆಸರಿನ ಕೋಣವನ್ನು ಇದು ಬೇಡ ಭಟ್ರೆ.. ತೆಗೆದುಕೊಂಡು ಹೋಗಿ ಇದನ್ನು ಎಂದು ಹೇಳಿ ಅರ್ಥ ಆಯ್ತಾ ಎಂದು ಹೇಳುತ್ತಾರೆ. ರಾಯಲ್​ ಚಾಲೆಂಜರ್ಸ್ ಮುಂದೆ ಬೆಂಗಳೂರು ಎನ್ನುವ ಹೆಸರು ಬದಲಾಗುವ ಸಾಧ್ಯತೆ ಎನ್ನುವ ಹಾಗೆ ಈ ಪ್ರೋಮೋದಲ್ಲಿ ಕಂಡು ಬಂದಿದೆ.
ನಮ್ಮ ಶಿವಣ್ಣ ರೊಚ್ಚಿಗೆದ್ದು ಏನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
Understood what Dr. Shiva Rajkumar is trying to say? 🤔
Destination:#RCBUnbox#ArthaAytha#PlayBold#ನಮ್ಮRCBpic.twitter.com/rSNLsOYdPU
— Royal Challengers Bengaluru (@RCBTweets)March 16, 2024

ಶಿವರಾಜ್​ಕುಮಾರ್ ಅವರ ಎದುರು ಮೂರು ಲಾಂಗ್​ಗಳನ್ನು ಇಡಲಾಗಿದೆ. ಒಂದರಲ್ಲಿ ರಾಯಲ್ ಇದ್ದರೆ, ಮತ್ತೊಂದು ಲಾಂಗ್​ನಲ್ಲಿ ಚಾಲೆಂಜರ್ಸ್ ಇದೆ. ಕೊನೆಯ ಲಾಂಗ್​ನಲ್ಲಿ Bangalore ಎಂದಿತ್ತು. ಶೀಘ್ರವೇ ಇದು ಬದಲಾಗಲಿದೆ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಕಿಚ್ಚ ಸುದೀಪ್​ ಅವರು ಕಾಣಿಸಿಕೊಂಡಿರುವ ಪ್ರೋಮೋದಲ್ಲಿ ಕಿಚ್ಚ ಅವರು ಹೋಟೆಲ್​ವೊಂದಕ್ಕೆ ಉಪಹಾರ ಸೇವನೆಗೆಂದು ಬರುತ್ತಾರೆ. ಮೂರು ಇಡ್ಲಿ ಕೊಡಿ ಎಂದು ಕೇಳುತ್ತಾರೆ. ಆಗ ವೇಟರ್​ ಮೂರು ಇಡ್ಲಿ ತರುತ್ತಾನೆ. ವಿಶೇಷ ಅಂದ್ರೆ ರಾಯಲ್​ ಚಾಲೆಂಜರ್ಸ್​ ಬ್ಯಾಂಗಲೋರ್ ಎಂದು ಇಂಗ್ಲೀಷ್​ನಲ್ಲಿ ಮೂರು ಇಡ್ಲಿ ಮೇಲೆ ಬರೆದಿರುತ್ತದೆ. ವೇಟರ್​ ಒಂದೊಂದೆ ಇಡ್ಲಿಯನ್ನು ತಟ್ಟೆಗೆ ಹಾಕುತ್ತಾನೆ. ಆಗ ಸುದೀಪ್​ ಅವರು ಬ್ಯಾಂಗಲೋರ್ ಎನ್ನುವ ಇಡ್ಲಿ ಬೇಡಾ ಎಂದು ಹೇಳುತ್ತಾರೆ. ಅರ್ಥ ಆಯ್ತಾ ಎಂದು ಕೊನೆಯಲ್ಲಿ ಕೇಳುತ್ತಾರೆ. ಈ ವಿಡಿಯೋ ವೈರಲ್​ ಆಗಿದೆ.
ಕಿಚ್ಚ ಸುದೀಪ್ ಯಾಕ್ ಆ ಇಡ್ಲಿ ಬೇಡ ಅಂದ್ರು ಅರ್ಥ ಆಯ್ತಾ?
Understood why@KicchaSudeepdidn’t want that Idli? 😉
You’ll know on the#RCBUnboxevent day! Stay tuned…#PlayBold#ArthaAytha#ನಮ್ಮRCBpic.twitter.com/wcX8okmpbc
— Royal Challengers Bengaluru (@RCBTweets)March 17, 2024

ಆರ್​ಸಿಬಿ ತಂಡ ಸಾಮಾಜಿಕ ಪ್ರಕಟಿಸಿರುವ ವಿಶೇಷ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್​ವುಡ್​ ನಟರಾದ ರಿಷಬ್​ ಶೆಟ್ಟಿ, ಶಿವರಾಜ್​ಕುಮಾರ್​​, ಸುದೀಪ್ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
VIDEO: ಬದಲಾಗಲಿದೆ ಆರ್​ಸಿಬಿ ಹೆಸರು! ಸುಳಿವು ಬಿಟ್ಟುಕೊಟ್ಟರು ರಿಷಬ್​ ಶೆಟ್ಟಿ!

ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ; ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ FIR

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
