ಬೆಂಗಳೂರು:ಸರ್ಕಾರದ ವಿವಿಧ ಬಗೆಯ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ದರಪಟ್ಟಿ ಏಕೆ ವಿಭಿನ್ನ? ಇಲಾಖೆಯೊಂದೇ ಇರುವಾಗ ಊರಿಗೊಂದು ದರಪಟ್ಟಿ ಏಕೆ? ಎಂಬಿತ್ಯಾದಿ ಪ್ರಶ್ನೆಗೆ ತೆರೆ ಎಳೆಯುವ ಪ್ರಯತ್ನ ಕೊನೇ ಹಂತ ತಲುಪಿದೆ.
ಏಕರೂಪ ಅನುಸೂಚಿ ದರಪಟ್ಟಿ ತಯಾರಿಸಲು ರಚನೆಗೊಂಡಿದ್ದ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸೆಪ್ಟೆಂಬರ್ ಕೊನೇ ವಾರದಲ್ಲಿ ಅನುಷ್ಠಾನ ಕುರಿತು ಪೂರ್ವಭಾವಿ ಸಭೆ ನಡೆಯುವುದು. ಬಳಿಕ ಎಲ್ಲ ಇಲಾಖೆಗಳು ಏಕರೂಪ ದರಪಟ್ಟಿ ಅನುಷ್ಠಾನಕ್ಕೆ ಅಧಿಸೂಚನೆ ಪ್ರಕಟವಾಗಲಿದೆ.
ಜೈ ಪ್ರಸಾದ್ ನೇತೃತ್ವದ ತಂಡದಲ್ಲಿ ನಿವೃತ್ತ ಇಂಜಿನಿಯರ್​ಗಳು, ಬೆಸ್ಕಾಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸದಸ್ಯರಾಗಿದ್ದರು. ತಜ್ಞರ ತಂಡ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿ ಏಕರೂಪತೆ ಇರುವ ದರಪಟ್ಟಿ ಸಿದ್ಧಪಡಿಸಿತು. ಪ್ರಸಕ್ತ ಇರುವ ದರಪಟ್ಟಿಯಲ್ಲಿನ ದರ ವಿಶ್ಲೇಷಣೆ ಮತ್ತು ಸ್ಪೆಸಿಫಿಕೇಷನ್ ಪರಿಶೀಲಿಸಿ ಅವಲೋಕನ ಮಾಡಲಾಗಿದೆ. ಡೇಟಾ ವಿಶ್ಲೇಷಣೆ ಪರಿಶೀಲಿಸಿ ‘ಡೂಪ್ಲಿಕೇಷನ್ ಆಫ್ ಕಾಮನ್ ಐಟಮ್್ಸ ಇನ್ ಡಿಫರೆಂಟ್ ಎಸ್​ಆರ್’ ಬಗ್ಗೆ ಗಮನಿಸಲಾಗಿದೆ. ರಸ್ತೆ, ಸೇತುವೆ ಮತ್ತು ಕಟ್ಟಡಗಳ ಕಾಮಗಾರಿಗೆ ಸಂಬಂಧಿಸಿದಂತೆ ಅಥವಾ ಇತರೆ ವಿಶೇಷ ಕಾಮಗಾರಿಗಳಿದ್ದರೆ ಅದರ ಪಟ್ಟಿ ತಯಾರಿಸಲಾಗಿದೆ.
ದುಬಾರಿ ವೆಚ್ಚಕ್ಕೆ ಕಡಿವಾಣ: ಕಟ್ಟಡಗಳಿಗೆ ದುಬಾರಿ ವೆಚ್ಚ ಮಾಡುವುದು ಬೇಡ ಎಂದು ಸಮಿತಿ ಸಲಹೆ ನೀಡಿದೆ. ಕಲ್ಲಿನ ಕಟ್ಟಡಕ್ಕೆ ಹಾಗೂ ಹೊನ್ನೆ, ತೇಗದ ಬಾಗಿಲಿನ ನೆಪದಲ್ಲಿ ಹೆಚ್ಚಿನ ವೆಚ್ಚ ಮಾಡುವುದು ಸಮಿತಿ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಕಲ್ಲಿನ ಕಟ್ಟಡಗಳು ಹಾಗೂ ದುಬಾರಿ ಬಾಗಿಲು ಬೇಡ ಎಂದು ಸಲಹೆ ನೀಡಿದೆ.
ಕಟ್ಟಡ ನಿರ್ವಣದಲ್ಲಿ ಬಳಕೆಯಾಗುವ ಪ್ರತಿ ಸಂಗತಿಯನ್ನು ವರದಿಯಲ್ಲಿ ಅಡಕಗೊಳಿಸಿದ್ದು, ಅದಕ್ಕೆ ಗರಿಷ್ಠ ಎಷ್ಟು ವೆಚ್ಚ ಮಾಡಬಹುದೆಂದು ವಿವರಿಸಲಾಗಿದೆ. ಸಿಮೆಂಟ್ ದರ, ಕೂಲಿ, ವಿದ್ಯುದೀಕರಣ, ಪ್ಲಂಬಿಂಗ್, ನೀರಿನ ಸಂಪರ್ಕ ಪ್ರತಿಯೊಂದಕ್ಕೂ ಇಡೀ ರಾಜ್ಯಕ್ಕೆ ಒಂದೇ ರೀತಿ ದರ ನಿಗದಿ ಮಾಡಲಾಗುತ್ತಿದೆ. ಕಚೇರಿಗೆ ಬಳಸುವ ಟೇಬಲ್, ಖುರ್ಚಿ, ಸೋಫಾದ ಗರಿಷ್ಠ ದರವನ್ನೂ ನಿಗದಿ ಮಾಡಲಾಗಿದೆ. ಆದರೆ, ಕೋರ್ಟ್, ಪರಿವೀಕ್ಷಣಾ ಮಂದಿರಗಳು ಮತ್ತು ಅತಿ ಗಣ್ಯ ವ್ಯಕ್ತಿಗಳಿಗಾಗಿ ಖರೀದಿಸುವ ಕಟ್ಟಡಗಳ ವಿಚಾರದಲ್ಲಿ ಮಿತಿ ಹಾಕಿಲ್ಲ.
ಬಿಬಿಎಂಪಿ ವ್ಯಾಪ್ತಿ, ರಾತ್ರಿ ವೇಳೆಯಲ್ಲಿ ನಡೆಸಬೇಕಾದ ಕಾಮಗಾರಿಗಳು, ಸಂಚಾರ ಬದಲು ಮಾಡಿ ಮಾಡಬೇಕಾದ ಕಾಮಗಾರಿಗಳಿಗೆ ಶೇ.10 ಅಧಿಕ ದರ ನೀಡಲು ಅವಕಾಶ ಮಾಡಿಕೊಡಲಾಗಿದ್ದರೆ, ಎರಡನೇ ಹಂತದ ನಗರಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ವಿಜಯಪುರಕ್ಕೆ ಶೇ.8 ವ್ಯತ್ಯಾಸ ಮಾಡಬಹುದು. ಕಲ್ಯಾಣ ಕರ್ನಾಟಕ-ಶೇ.5, ನಿರ್ಬಂಧಿತ ಪ್ರದೇಶಗಳಾದ ಜೈಲು, ಅರಣ್ಯ ಪ್ರದೇಶದ ಕಾಮಗಾರಿಗಳ ದರವನ್ನು ಶೇ.12 ಹೆಚ್ಚಿಸಲು ಅವಕಾಶವಿರುತ್ತದೆ.
ವರದಿ ಸ್ವೀಕರಿಸಿರುವ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ವಿವಿಧ ಇಲಾಖೆಗಳು ಮತ್ತು ವಿವಿಧ ಕ್ಷೇತ್ರದವರನ್ನು ಕರೆಸಿ ಈ ದರಪಟ್ಟಿಯ ಬಗ್ಗೆ ಚರ್ಚೆ ಮಾಡಿದ್ದಾರೆ. ಬಹುತೇಕ ಎಲ್ಲರೂ ಏಕರೂಪ ದರದ ಬಗ್ಗೆ ಒಮ್ಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸೆ.23ರೊಳಗೆ ಇನ್ನೊಂದು ಸುತ್ತಿನ ಸಭೆ ನಡೆಸಿದ ಬಳಿಕ ಈ ದರಪಟ್ಟಿಯನ್ನು ಆದೇಶ ರೂಪದಲ್ಲಿ ಹೊರಡಿಸುವ ಪ್ರಕ್ರಿಯೆ ನಡೆಯಲಿದೆ.
ವೆಚ್ಚ ಕಡಿತಕ್ಕೆ ಮುಂದಾದ ಎಸ್​ಬಿಐ; ಸ್ವಯಂ ನಿವೃತ್ತಿ ಯೋಜನೆಗೆ ಚಿಂತನೆ; 30 ಸಾವಿರ ಸಿಬ್ಬಂದಿ ಲಿಸ್ಟ್​ ರೆಡಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
