
ಬೆಂಗಳೂರು:ಯೂನಿಯನ್ ಬ್ಯಾಂಕ್ ಆ್ ಇಂಡಿಯಾದಿಂದ ವಿದ್ಯಾರ್ಥಿಗಳಿಗಾಗಿ ರಾಷ್ಟ್ರವ್ಯಾಪಿಯು-ಜೀನಿಯಸ್ 3.0 ಸಾಮಾನ್ಯ ಜಾಗೃತಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿಜೆ.ಪಿ.ನಗರದ ಸಂತ ಪಾಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ನಮನ್ ಭೋತಿಕ ಮತ್ತು ಆದಿತ್ಯ ಗಿರಿ ಅವರು ವಿಜೇತರಾಗಿದ್ದಾರೆ.ಬೆಂಗಳೂರು ವಿವಿ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರಿಯವಿದ್ಯಾಲಯ ಸಂಘಟನೆಯ ಉಪ ಆಯುಕ್ತ ಧರ್ಮೆಂದ್ರ ಪಟ್ಲೆ, ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ಬೆಂಗಳೂರು ವಲಯ ಮುಖ್ಯಸ್ಥರಾದ ನವನೀತ್ ಕುಮಾರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ನವನೀತ್ ಕುಮಾರ್, 8ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ತೆರೆಯಲಾಗಿತ್ತು ಮತ್ತು ಪ್ರತಿ ಶಾಲೆಯು 4ತಂಡವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿತ್ತು. ಕ್ವಿಜ್ ಸ್ಪರ್ಧೆಯಲ್ಲಿ 110 ಶಾಲೆಗಳು ಮತ್ತು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರು ಸಿಟಿ ಸುತ್ತಿನಲ್ಲಿ ಭಾಗವಹಿಸಿದ್ದರು ಎಂದರು.ಬೆಂಗಳೂರು, ಅಹಮದಾಬಾದ್, ದೆಹಲಿ, ಮುಂಬೈ ಹೈದರಾಬಾದ್, ಲಕ್ನೋ, ಚೆನ್ನೈ ಇತ್ಯಾದಿ ಸೇರಿದಂತೆ ಭಾರತದ 48 ನಗರಗಳಲ್ಲಿ ಈವೆಂಟ್ ನಡೆಯಲಿದೆ.ಆ.29 ರಂದು ಮೈಸೂರಿನಲ್ಲಿ ಝೋನಲ್ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ ಮತ್ತು ಝೋನಲ್ ಸುತ್ತಿನ ವಿಜೇತರು ನ.7ರಂದು ಮುಂಬೈನಲ್ಲಿ ಅಂತಿಮ ರಸಪ್ರಶ್ನೆಗೆ ಭಾಗವಹಿಸಲಿದ್ದಾರೆ.ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆಗಳ ವಿಷಯಗಳು ಸಾಮಾನ್ಯ ಜ್ಞಾನ, ಭಾರತದ ಜ್ಞಾನ, ವಿಶ್ವ ಸಂಸ್ಕೃತಿ, ಕ್ರೀಡೆ, ಸಾಹಿತ್ಯ, ಪ್ರಸಿದ್ಧ ವ್ಯಕ್ತಿಗಳು, ಸಾಮಾನ್ಯ ಅರಿವು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × two =
Remember me
