ಬೆಂಗಳೂರು: ನಿರೀಕ್ಷೆಯಂತೆ ಮೋದಿ ಸರ್ಕಾರದ 3.O ಮೊದಲ ಬಜೆಟ್​ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಭರ್ಜರಿ ಪ್ಯಾಕೇಜ್ ನೀಡಲಾಗಿದೆ. ಈ ಬಾರಿ ಬಜೆಟ್​​ನಲ್ಲಿ ಬಂಗಾರ, ಚಿನ್ನದ ಮೇಲಿನ ಕಸ್ಟಮ್ಸ್ ತೆರಿಗೆ ಮಾಡುವುದಾಗಿ ಬಜೆಟ್​ನಲ್ಲಿ ಮಂಡನೆ ಮಾಡಲಾಗಿದೆ.
ಚಿನ್ನ, ಬೆಳ್ಳಿ ಮೇಲೆ ಶೇ. 10 ರಿಂದ 6ಕ್ಕೆ ಕಸ್ಟಮ್​​ ಡ್ಯೂಟಿ ಕಡಿತ ಮಾಡಲಾಗುತ್ತದೆ. ಅಂದ್ರೆ ಸರಿಸುಮಾರು ಶೇ.4 ರಷ್ಟು ಇಳಿಕೆ ಕಂಡಿದೆ. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಚಿನ್ನ, ಬೆಳ್ಳಿ ಶೇ. 6 ಹಾಗೂ ಪ್ಲಾಟಿನಂ ಮೇಲೆ ಶೇ. 6.4 ರಷ್ಟು ಕಷ್ಟಮ್ಸ್​​ ಖಡಿತ ಮಾಡಲಾಗುತ್ತದೆ.  ಈ ಬಜೆಟ್​ನಲ್ಲಾದ್ರೂ ಚಿನ್ನ, ಬೆಳ್ಳಿಯ ಬೆಲೆ ಇಳಿಯಬಹುದು ಎಂದುಕೊಂಡಿದ್ದ ಬಂಗಾರ ಪ್ರಿಯರಿಗೆ ಮೋದಿ ಸರ್ಕಾರ ಖುಷಿ ಸುದ್ದಿ ನೀಡಿದೆ.
“ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಇಳಿಸಲಾಗಿದೆ, ಇದು ದೇಶೀಯ ಬೆಲೆಗಳಲ್ಲಿ ಇಳಿಕೆಗೆ ಕಾರಣವಾಗಬಹುದು ಮತ್ತು ಬಹುಶಃ ಬೇಡಿಕೆಯನ್ನು ಹೆಚ್ಚಿಸಬಹುದು. ಚಿನ್ನ ಮತ್ತು ಬೆಳ್ಳಿಯ ಮೇಲಿನ ಅಸ್ತಿತ್ವದಲ್ಲಿರುವ ಸುಂಕವು 15 ಪ್ರತಿಶತವಾಗಿದ್ದು, ಇದು ಮೂಲ ಕಸ್ಟಮ್ ಸುಂಕದ 10% ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ನಂತೆ 5 ಪ್ರತಿಶತವನ್ನು ಒಳಗೊಂಡಿರುತ್ತದೆ, ”ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸರಕುಗಳ ಮುಖ್ಯಸ್ಥ ಹರೀಶ್ ವಿ ಹೇಳಿದರು.
ಮಂಗಳವಾರ, ಬೆಲೆಬಾಳುವ ಲೋಹಗಳ ಮೇಲಿನ ಕಸ್ಟಮ್ ಸುಂಕ ಕಡಿತದ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಘೋಷಣೆಯ ನಂತರ ಮಂಗಳವಾರ ಚಿನ್ನ ಮತ್ತು ಆಭರಣ ಚಿಲ್ಲರೆ ವ್ಯಾಪಾರಿಗಳ ಷೇರುಗಳು ಗಗನಕ್ಕೇರಿದವು.
ಬಿಎಸ್‌ಇಯಲ್ಲಿ, ಸೆಂಕೋ ಗೋಲ್ಡ್‌ನ ಷೇರುಗಳು ಪ್ರತಿ ಷೇರಿಗೆ₹1,000.80 ಕ್ಕೆ 6.16 ರಷ್ಟು ಏರಿಕೆಯಾಗಿದೆ. ರಾಜೇಶ್ ಎಕ್ಸ್‌ಪೋರ್ಟ್ಸ್ ಶೇ 5.49 ರಷ್ಟು ಏರಿಕೆ ಕಂಡು₹313.90 ಕ್ಕೆ ತಲುಪಿದೆ ಮತ್ತು ಪಿಸಿ ಜ್ಯುವೆಲರ್ ಶೇ 5 ರಷ್ಟು ಜಿಗಿದು₹74.16 ಕ್ಕೆ ತಲುಪಿದೆ.
ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಭಾನುವಾರ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಸೋಮವಾರ ಬಂಗಾರದ ಬೆಲೆ ಇಳಿಕೆಯಾಗಿತ್ತು. ಇಂದು ಮತ್ತೆ ಚಿನ್ನದ ಜೊತೆಯಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 73,840 ಆಗಿದ್ದರೆ ಚೆನ್ನೈ 74,440 ಮುಂಬೈ  73,840 ಹಾಗೂ ಕೋಲ್ಕತ್ತಾದಲ್ಲಿ 73,840 ಹಾಗೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ  73,990 ರೂ. ಆಗಿದೆ.
ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ.  ಹೀಗಾಗಿಯೇ ಚಿನ್ನ ಹೂಡಿಕೆದಾರರ ಅಚ್ಚುಮೆಚ್ಚಿನ ಹೂಡಿಕೆಯ ವಿಷಯವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
