ನವದೆಹಲಿ:ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿರುವ ಚಾರ್ಮಾಡಿ ಘಾಟ್​ ರಸ್ತೆಯಲ್ಲಿನ 10.8 ಕಿಲೋಮೀಟರ್ ಉದ್ದದ ಎರಡು ಲೇನ್​ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 343 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ಅಪಘಾತ, ಭೂಕುಸಿತದಿಂದಲೇ ಹೆಚ್ಚು ಖ್ಯಾತಿ ಪಡೆದಿದ್ದ ಚಾರ್ಮಾಡಿ ಘಾಟ್​ನಲ್ಲಿ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಂಡರು ಯಾವುದೇ ಪ್ರಯೋಜನವಾಗಿರಲಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಡಬಲ್​ ಲೇನ್​ ರಸ್ತೆ ನಿರ್ಮಿಸಲು ಮುಂದಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮಂಗಳೂರು-ಮೂಡಿಗೆರೆ-ತುಮಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
📢 𝐊𝐚𝐫𝐧𝐚𝐭𝐚𝐤𝐚 🛣#PragatiKaHighway#GatiShakti#BuildingTheNation@PMOIndia@siddaramaiah@JoshiPralhad@bhagwantkhuba@nalinkateel@ShobhaBJP@BYVijayendra@BJP4Karnatakapic.twitter.com/5zzQITUONH
ಇದನ್ನೂ ಓದಿ:ಡ್ರೋನ್​ ಪ್ರತಾಪ್​ಗೆ ಸಿಹಿ ಮುತ್ತು ಕೊಟ್ಟ ಸಂಗೀತಾ; ವಿಡಿಯೋ ವೈರಲ್
ಕರ್ನಾಟಕದಲ್ಲಿ NH-73ರ ಮಂಗಳೂರು-ಮೂಡಿಗೆರೆ-ತುಮಕೂರು ವಿಭಾಗದ ರಸ್ತೆ ವಿಸ್ತರಣೆಗೆ 343.74 ಕೋಟಿ ರೂ. ಮಂಜೂರು ಮಾಡಲಾಗಿದೆ. ಅದನ್ನು ಸುಸಜ್ಜಿತ 2-ಲೇನ್ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಈಗ 10.8 ಕಿಮೀ ವ್ಯಾಪಿಸಿರುವ ಈ ಯೋಜನೆಯು ಇಂಜಿನಿಯರಿಂಗ್ ಖರೀದಿ ಮತ್ತು ನಿರ್ಮಾಣ (EPC) ಮೋಡ್ ಅಡಿಯಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸವಾಲಿನ ಗುಡ್ಡಗಾಡು ಮತ್ತು ಪರ್ವತ ಭೂ ದೃಶ್ಯಗಳನ್ನು ಹೊಂದಿರುವ ಚಾರ್ಮಾಡಿ ಘಾಟ್‌ನಲ್ಲಿ ಸಾರಿಗೆ ಸಂಚಾರವನ್ನು ಹಾಗೂ ಈ ಪ್ರದೇಶದ ಸಂಪರ್ಕವನ್ನು ಹೆಚ್ಚಳ ಮಾಡಲು ಈ ಅನುದಾನ ಸಮಪರ್ಕಕವಾಗಿ ಬಳಕೆ ಆಗಲಿದೆ ಎಂದು ಪ್ರಧಾನಿ ಕಚೇರಿ, ಸಿಎಂ ಸಿದ್ದರಾಮಯ್ಯ, ಪ್ರಲ್ಹಾದ್​ ಜೋಶಿ, ಭಗವಂತ್​ ಖೂಬಾ, ನಳಿನ್​ ಕುಮಾರ್​ ಕಟೀಲ್, ಬಿ.ವೈ. ವಿಜಯೇಂದ್ರ ಹಾಗೂ ಕರ್ನಾಟಕ ಬಿಜೆಪಿಯನ್ನು ಟ್ಯಾಗ್​ ಮಾಡಿ ಪೋಸ್ಟ್​ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
