ಮಂಡ್ಯ:ಜೆಡಿಎಸ್​ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿಯ ಚಾಣಾಕ್ಯ ಅಮಿತ್​ ಶಾ ರಣಕಹಳೆ ಮೊಳಗಿಸಿದ್ದಾರೆ. ಮದ್ದೂರಿನಲ್ಲಿ ಮೆಗಾ ಡೇರಿ ಉದ್ಘಾಟಿಸಿ ಮಂಡ್ಯ ನಗರಕ್ಕೆ ಆಗಮಿಸಿದ ಅಮಿತ್​ ಶಾ, ವಿವಿ ಮೈದಾನದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು. ರಾಜ್ಯದ ಬಿಜೆಪಿ ನಾಯಕರ ದಂಡೇ ನೆರೆದಿದೆ.
ಬೃಹತ್​ ಸಮಾರಂಭದಲ್ಲಿ ನೆರೆದಿದ್ದ ಸಹಸ್ರಾರು ಜನರನ್ನು ಉದ್ದೇಶಿಸಿ ಭಾಷಣ ಆರಂಭಿಸಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಅವರಿಗೆ ಸಂತಾಪ ಸೂಚಿಸಿದರು. ಮೇಲುಕೋಟೆ ಚಲುವನಾರಾಯಣ, ಆದಿಚುಂಚನಗಿರಿ ಕಾಲಭೈರವೇಶ್ವರ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ, ಮದ್ದೂರಿನ ನರಸಿಂಹ ಸ್ವಾಮಿ, ಆದಿಶಂಕರ, ರಾಮಾನುಜಾಚಾರ್ಯ, ಬಸವಣ್ಣ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಅವರನ್ನ ಸ್ಮರಿಸಿದರು.
ಯಡಿಯೂರಪ್ಪ ಅವರ ಜನ್ಮಸ್ಥಳ ಕೂಡ ಮಂಡ್ಯ, ನಾನು ಕೂಡ ಮಂಡ್ಯವನ್ನು ಸ್ಮರಿಸುತ್ತೇನೆ. ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣವಾಗಿದೆ. ಮೋದಿ ನೇತೃತ್ವಕ್ಕೆ‌ ಶೇ.52 ವೋಟ್​ ಕೊಡುವ ಮೂಲಕ 22 ಲೋಕಸಭಾ ಸ್ಥಾನ ಕೊಟ್ಟಿದ್ದೀರಿ. ಈ ಬಾರಿ ಮೈಸೂರು- ಮಂಡ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರ ಪರಿವಾರ. ಕಾಂಗ್ರೆಸ್​ನಲ್ಲಿ ಭ್ರಷ್ಟಾಚಾರ ತುಂಬಿದೆ. ಈ ಪರಿವಾರ ಮತ್ತು ಭ್ರಷ್ಟಾಚಾರವನ್ನ ಕಿತ್ತೊಗೆದು ಯಶಸ್ವಿಯಾಗಿ ಅಡಳಿತ ನಡೆಸುವ ಕೆಲಸ ಮಾಡಬೇಕಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕ್ರಿಮಿನಲ್ ವ್ಯಕ್ತಿಗಳನ್ನ ಪೋಷಿಸುವ ಕೆಲಸ ಮಾಡುತ್ತಿದೆ. ದಲಿತರು, ಆದಿವಾಸಿಗಳಿಗೆ ಅನ್ಯಾಯ ಆಗೋ ಕೆಲಸ ಜೆಡಿಎಸ್, ಕಾಂಗ್ರೆಸ್​ನಿಂದ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿಯಲ್ಲಿ ಇಬ್ಬರು ದಲಿತರನ್ನ ರಾಮನಾಥ ಕೋವಿಂದ್, ದ್ರೌಪದಿ ಮುರ್ಮು ಅವರನ್ನ ರಾಷ್ಟ್ರಪತಿ ಮಾಡೋ ಕೆಲಸ ಮಾಡಿದ್ದೇವೆ. ನಾವೆಲ್ಲರೂ ಈ ದೇಶದ ಬಡವರಿಗೆ ಆಹಾರ ಒದಗಿಸಿ, ‌ಅನೇಕ ಕಾರ್ಯಕ್ರಮಗಳನ್ನು ಕೊಡುವ ಕೆಲಸ ಮಾಡಿದ್ದೇವೆ. ಬಡವರ ಮನೆಗಳಿಗೆ ಬೆಳಕು, ಶೌಚಗೃಹ ನೀಡುವ ಮೂಲಕ ಗೌರವಯುತ ಬದುಕು ಕಲ್ಪಿಸಿಕೊಡುವ ಕೆಲಸ ಮಾಡಿದ್ದೇವೆ ಎಂದರು.
ಹಳೇ ಮೈಸೂರು ಭಾಗದ ಜನರು ಮೋದಿ ಮತ್ತು ಬೊಮ್ಮಾಯಿ ನೇತೃತ್ವಕ್ಕೆ ಬೆಂಬಲ ಕೊಡಬೇಕಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪಿಎಫ್​ಐ ಅವರ 150 ಕೇಸ್​ಗಳನ್ನು ವಾಪಸ್ ಪಡೆದಿದ್ದರು. ಇದು ಎಂತಹ ಅನಾಹುತಕ್ಕೆ ಕಾರವಾಗಿತ್ತು ಅನ್ನೋದು ಗೊತ್ತಿದೆ. ನರೇಂದ್ರ ಮೋದಿ ಸರ್ಕಾರ ಪಿಎಫ್​ಐ ಬ್ಯಾನ್ ಮಾಡೋ ಕೆಲಸ ಮಾಡಿದೆ. ಭಾರತವನ್ನ ಸದೃಢವಾಗಿ ಮಾಡಿ, ಭಾರತ ಶಕ್ತಿಯನ್ನ ತೋರಿಸೋ ಕೆಲಸ ಮಾಡಬೇಕಿದೆ. ಹೀಗಾಗಿ ಬಿಜೆಪಿಯನ್ನ ಈ ಭಾಗದಲ್ಲಿ ಅತಿಹೆಚ್ಚು ಬೆಂಬಲಿಸಬೇಕಿದೆ ಎಂದು ಅಮಿತ್ ಶಾ ಮನವಿ ಮಾಡಿದರು.
HDKಗೆ ನಾಣ್ಯ​, ನೇಗಿಲು, ಸ್ಕೂಲ್​ ಬ್ಯಾಗ್​, ಕಬ್ಬು, ಬೆಲ್ಲದ ಹಾರ… ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪಂಚರತ್ನ ಯಾತ್ರೆ

ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ

ಮಂಡ್ಯದಲ್ಲಿ ಮೆಗಾ ಡೇರಿ ಉದ್ಘಾಟನೆ: ಪ್ರತಿ ಪಂಚಾಯಿತಿಯಲ್ಲೂ ಡೇರಿ ಸ್ಥಾಪನೆಗೆ ಯೋಜನೆ ಎಂದ ಅಮಿತ್​ ಶಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 6 =
Remember me
