ಬೆಂಗಳೂರು:ಸವೋರ್ಚ್ಛ ನ್ಯಾಯಾಲಯದ ಆದೇಶ ಇಲ್ಲದೆಯೂ ಒಳಮೀಸಲಾತಿ ಜಾರಿ ಮಾಡಬಹುದು. ತಿದ್ದುಪಡಿ ತಂದು ಒಳಮೀಸಲಾತಿ ಕಲ್ಪಿಸುವ ಅವಕಾಶ ಸಂವಿಧಾನದಲ್ಲಿದೆ. ಎದೆಗಾರಿಕೆ ಇದ್ದರೆ ಒಳಮೀಸಲಾತಿ ಜಾರಿಗೊಳಿಸಲು ಸಾಧ್ಯವಿದೆ. ಆದರೆ ಎಂದು ರಾಜಕೀಯ ಪಗಳು ಇಚ್ಛಾಶಕ್ತಿ ತೋರದೆ ಜನರನ್ನು ಮೂರ್ಖರನ್ನಾಗಿಸುತ್ತಿವೆ ಎಂದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಹೇಳಿದ್ದಾರೆ.
ಅಖಿಲ ಕರ್ನಾಟಕ ಆದಿ ಜಾಂಬವ ಸಂಘ ನಗರದ ರವೀಂದ್ರ ಕಲಾೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 45ನೇ ವಾರ್ಷಿಕೋತ್ಸವ ಹಾಗೂ ಲೇಖಕ ಪಿ.ಎಂ.ಚಿಕ್ಕವೆಂಕಟಸ್ವಾಮಿ ಮೇಲಾಗಾಣಿ ಅವರ “ಶ್ರೀ ಆದಿ ಜಾಂಬವ-ಮತಂಗ-ಮಾತಂಗೀ ಅತ್ರಿ ಅನಸೂಯ-ವಸಿಷ್ಠ ಅರುಂದತಿಯರ ಇತಿಹಾಸ’ ಕುರಿತ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಥಾನಮಾನಕ್ಕಿಂತ ಹೆಚ್ಚಾಗಿ ನನಗೆ ನನ್ನ ಸಮುದಾಯದ ಬೆಳವಣಿಗೆ ಮುಖ್ಯ. ಹೀಗಾಗಿ ಒಳಮೀಸಲಾತಿ ಜಾರಿ ಬಗ್ಗೆ ಧೈರ್ಯದಿಂದ ಮಾತನಾಡುತ್ತೇನೆ. ಒಳಮೀಸಲಾತಿ ಜಾರಿಯಾಗಿಲ್ಲ ಎಂಬ ಸಿಟ್ಟಿನಿಂದ ಮೈಸೂರಿನಲ್ಲಿ ‘ಒಳಮೀಸಲಾತಿ ಕಲ್ಪಿಸುವ ಕುರಿತ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲ’ ಎಂದು ಈ ಹಿಂದೆ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.
ಒಳಮೀಸಲಾತಿ ವಿಚಾರ ಸರ್ವೋಚ್ಛ ನ್ಯಾಯಾಲಯದಲ್ಲಿದ್ದು, ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ಭವಿಷ್ಯದಲ್ಲಿ ಮಾದಿಗರ ಪರವಾಗಿ ಹೆಚ್ಚಿನ ಸಂಶೋಧನೆ ನಡೆಯಬೇಕು. ಜತೆಗೆ ಸಮುದಾಯದ ಗೌರವ ಹೆಚ್ಚಬೇಕು ಎಂದರು.
ರಾಜ್ಯಸಭಾ ಸದಸ್ಯ ಡಾ.ಎಲ್​.ಹನುಮಂತಯ್ಯ ಮಾತನಾಡಿ, ಸಮುದಾಯದ ಮಂದಿ ನಾವು ಕನಿಷ್ಠರು ಎಂಬ ಭಾವನೆಯನ್ನು ಮೊದಲು ಮನಸ್ಸಿನಿಂದ ತೆಗೆದು ಹಾಕಬೇಕು. ಮಾದಿಗರಿಗೆ ವಿಶಿಷ್ಟ ಸ್ಥಾನಮಾನ ಭಾರತದಲ್ಲಿದ್ದು, ಎರಡನೇ ಅತಿ ದೊಡ್ಡ ಜಾತಿಯಾಗಿ ಸಮುದಾಯ ಗುರುತಿಸಿಕೊಂಡಿದೆ ಎಂದರು.
ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಅನೇಕ ಹೆಸರುಗಳಿಂದ ಸಮುದಾಯವನ್ನು ಗುರುತಿಸಲಾಗುತ್ತದೆ. ಆದರೆ ನಾವೆಲ್ಲರೂ ಒಂದು ಎಂಬ ಭಾವನೆ ಸಮುದಾಯದಲ್ಲಿ ಇನ್ನೂ ಮೂಡಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಸಮಾನ ಅವಕಾಶ ಸಿಕ್ಕಿಲ್ಲವೆಂದು ಹೋರಾಟ ಮಾಡುತ್ತಿದ್ದೇವೆ. ಸರ್ವೋಚ್ಛ ನ್ಯಾಯಾಲಯದ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇವೆ. ಆದೇಶ ವಿರುದ್ಧವಾದರೆ ಮತ್ತೆ ಹೋರಾಟಕ್ಕೆ ತಯಾರಾಗಬೇಕಾಗಿದೆ ಎಂದು ಹೇಳಿದರು.
ಸಮುದಾಯದಲ್ಲಿ ದೊಡ್ಡ ಜನಸಂಖ್ಯೆ ಇದ್ದರೂ, ಒಗ್ಗಟ್ಟಾಗುವ ಪ್ರಯತ್ನ ಮಾಡಿಲ್ಲ. ಹೀಗಾಗಿ ನಮ್ಮ ಅಗತ್ಯ ಬೇಡಿಕೆಗಳನ್ನು ಕೇಳಲು ಸರ್ಕಾರಗಳು ತಯಾರಿಲ್ಲ. ಲಿಂಗಾಯತ ಸಮುದಾಯಕ್ಕೆ ಎಲ್ಲ ಸೌಲಭ್ಯ ಸಿಕ್ಕಿದರೂ, ಇನ್ನೂ ಬೇಕು ಎಂಬ ಧ್ವನಿ ಧ್ವನಿ ಸಮುದಾಯದ ಹಿರಿಯ ನಾಯಕರಿಂದ ಕೇಳಿ ಬರುತ್ತದೆ. ಈ ಮಾತುಗಳು ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆಗಳಾಗುತ್ತವೆ ಎಂದು ತಿಳಿಸಿದರು.
ಶ್ರೀ ಆದಿ ಜಾಂಬವ ಕೃತಿ ಲೇಖಕ ಪಿ.ಎಂ. ಚಿಕ್ಕವೆಂಟಸ್ವಾಮಿ, ವಿಧಾನ ಪರಿಷತ್​ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್​.ಚಂದ್ರಪ್ಪ, ದ್ರಾವಿಡ ವಿ.ವಿ.ಕುಪ್ಪಂನ ಎನ್​.ಸುಶೀಲ ಮತ್ತಿತರರಿದ್ದರು.
ಯಾವ ಸಮುದಾಯದಲ್ಲೂ ಇಲ್ಲದಷ್ಟು ಸಂಗಳು ಮಾದಿಗ ಸಮುದಾಯದಲ್ಲಿದೆ. ಇದರಿಂದ ನಮ್ಮ ನಡುವೆಯೂ ಭಿನ್ನಾಭಿಪ್ರಾಯ, ಒಡಕುಗಳು ಉಂಟಾಗಿವೆ ಎಂಬ ಸಂದೇಶ ರವಾನೆಯಾಗುತ್ತಿದೆ. ಸರ್ಕಾರ ಹಾಗೂ ರಾಜಕಾರಣಿಗಳಲ್ಲಿ ಸಮುದಾಯದ ಬಗ್ಗೆ ಅಸಡ್ಡೆ ಮೂಡಲು ಇದೂ ಒಂದು ಕಾರಣ.-ಎಚ್​.ಆಂಜನೇಯ, ಮಾಜಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 16 =
Remember me
