ನವದೆಹಲಿ:ಸಂಸದರ ಪ್ರಮಾಣವಚನ ಮುನ್ನ ಕೇಂದ್ರ ಸಚಿವ ಎಚ್​,ಡಿ ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿ ಮಾಡಿ, ಅಭಿನಂದನೆ ತಿಳಿಸಿದರು.
ಇದನ್ನೂ ಓದಿ:ನೀಟ್‌-ಯುಜಿ’ ರದ್ದುಮಾಡಿ ರಾಜ್ಯಗಳೇ ಪರೀಕ್ಷೆ ನಡೆಸಲಿ: ಸಿಎಂ ಮಮತಾ ಆಗ್ರಹ
ಇದೇ ವೇಳೆ ಉಭಯ ನಾಯಕರು ಸ್ವಲ್ಪ ಸಮಯ ಪ್ರತ್ಯೇಕವಾಗಿ ಗೌಪ್ಯ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ನಂತರ ಜೆಡಿಎಸ್ ಮುಖಂಡರಾದ ಬಂಡೆಪ್ಪ ಕಾಶೆಂಪುರ್, ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜೆಡಿಎಸ್ ಸಂಸದ ಮಲೇಶ್ ಬಾಬು, ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕೂಡ ಎಚ್ಡಿಕೆ ಭೇಟಿಯಾದರು. ಸಂಸದರಿಗೆ ಮತ್ತು ಸಚಿವರಿಗೆ ಇನ್ನೂ ಅಧಿಕೃತ ನಿವಾಸ ಹಂಚಿಕೆಯಾಗದ ಹಿನ್ನೆಲೆಯಲ್ಲಿ ಬಹುಪಾಲು ಸಂಸದರು ಕರ್ನಾಟಕ ಭವನದಲ್ಲೇ ವಾಸ್ತವ್ಯ ಹೂಡಿದ್ದಾರೆ.
ಲೋಕಸಭೆ ಸದಸ್ಯರಾಗಿ ಮಂಡ್ಯ ಸಂಸದ ಎಚ್‌ಡಿ ಕುಮಾರಸ್ವಾಮಿ ಅವರು ಪ್ರಮಾನವಚನ ಸ್ವೀಕಾರ ಮಾಡಿದರು. ಸೋಮವಾರ ಲೋಕಸಭೆಯಲ್ಲಿ ಸದಸ್ಯರಾಗಿ ಅವರು ಮಾತೃ ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.

ಸೋಮವಾರ ಸಂಸತ್‌ನಲ್ಲಿ ಮೊದಲ ಲೋಕಸಭೆ ಅಧಿವೇಶನ ಆರಂಭವಾಯಿತು. ಪದ್ದತಿಯಂತೆ ಎಲ್ಲಾ ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್‌ ಅವರ ಸಮ್ಮುಖದಲ್ಲಿ ಎಚ್‌ಡಿಕೆ ವಚನ ಬೋಧಿಸಿದರು.ಈ ವೇಳೆ ಕನ್ನಡದಲ್ಲಿ ಪ್ರಮಾಣ ವಚನವನ್ನು ಮಂಡ್ಯ ಲೋಕಸಭೆ ಸದಸ್ಯರು, ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್‌ ಕುಮಾರಸ್ವಾಮಿ ಅವರು ಸ್ವೀಕರಿಸಿದರು.
ಸಚಿವರಾಗಿ ಇಂಗ್ಲಿಷ್‌ನಲ್ಲಿ ಪ್ರಮಾನವಚನ ಸ್ವೀಕರಿಸಿದ್ದ ಎಚ್‌ಡಿಕೆ ಇನ್ನು ಕೇಂದ್ರ ಸಚಿವರಾಗಿ ಎಚ್‌ಡಿ ಕುಮಾರಸ್ವಾಮಿ ಅವರು ಇಂಗ್ಲಿಷ್‌ನಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಸಹಜವಾಗಿ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕನ್ನಡದ ಬದಲಾಗಿ ಇಂಗ್ಲಿಷ್‌ನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರು.
ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ ಕೊಲೆ ಕೇಸ್ ಸಿಐಡಿ ತನಿಖೆಗೆ ವಹಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − six =
Remember me
