ಧಾರವಾಡ:ವ್ಯಕ್ತಿಯೊಬ್ಬನನ್ನು ಪೊಲೀಸ್​ ಠಾಣೆಗೆ ಕರೆದೊಯ್ದು ಹೊಡೆದ ಪೊಲೀಸ್​ ಅಧಿಕಾರಿಯನ್ನು ಮನೆಗೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಠಾಣೆಗೆ ಕರೆದೊಯ್ದು ಹೊಡೆಯುವ ಅಧಿಕಾರವನ್ನು ನಿಮಗೆ ಕೊಟ್ಟಿದ್ಯಾರು ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ನಮ್ಮ ಯೋಧರು ಹಿಮಾಲಯದಂತೆ ದೃಢವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಪ್ರಧಾನಿ ಮೋದಿ
ವ್ಯಕ್ತಿಯನ್ನು ಠಾಣೆಗೆ ಕರೆತಂದು ಹೊಡೆದ ಧಾರವಾಡದ ಶಹರ ಠಾಣಾ ಪೊಲೀಸ್​ ಅಧಿಕಾರಿ ಕಾಡದೇವರಮಠಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡ ಸಚಿವ ಪ್ರಲ್ಹಾದ್​ ಜೋಶಿ, “ಹೊಡೆಯಲು ನಿಮಗೆ ಏನು ಅಧಿಕಾರಿಯಿದೆ. ಒಬ್ಬ ವ್ಯಕ್ತಿಯನ್ನು ಹೊಡೆಯುವ ಅಧಿಕಾರ ಕೊಟ್ಟಿದ್ಯಾರು? ಬಿಜೆಪಿಯವನು ಎಂದು ಅವನಿಗೆ ಈ ರೀತಿ ಮಾಡಿದ್ದೀರಾ? ಕಾಂಗ್ರೆಸ್​ ಅಧಿಕಾರದಲ್ಲಿದೆ ಎಂದು ಬಿಜೆಪಿಯವರ ಮೇಲೆ ದಬ್ಬಾಳಿಕೆ ಮಾಡಬಹುದು ಅಂದುಕೊಂಡಿದ್ದೀರಾ?” ಎಂದು ಹೇಳಿದರು.
“ನೀವು ಡ್ಯೂಟಿಯಲ್ಲಿ ಇದ್ದೀರಾ, ಈಗ ನಾನು ನಿಮಗೆ ಹೊಡೆದರೆ ಹೇಗೆ? ಕಾನೂನು ಪ್ರಕಾರ ಅದಕ್ಕೆ ಅನುಮತಿ ಇದ್ಯಾ? ಮತ್ತೆ ಯಾವ ಆಧಾರದ ಮೇಲೆ ನೀವು ಹೊಡೆಯುತ್ತೀರಿ. ನಾನು ಕೇಂದ್ರ ಮಂತ್ರಿಯಾದರು ಸಹಿತ ನಿಮ್ಮ ಕಛೇರಿ ಮುಂದೆ ಬಂದು ಧರಣಿ ನಡೆಸುತ್ತೀನಿ” ಎಂದರು. ಘಟನೆಯ ಪೂರ್ತಿ ವಿವರ ಈ ಕೆಳಗಿನ ವಿಡಿಯೋದಲ್ಲಿದೆ ನೋಡಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eight =
Remember me
