ಬೆಂಗಳೂರು:ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸುವಲ್ಲಿ ಕಾಂಗ್ರೆಸ್ ನಿಸ್ಸೀಮ. ಕೊಟ್ಟ ಭರವಸೆ ಈಡೇರಿಸಬೇಕೆಂಬ ಬದ್ಧತೆ ಆ ಪಕ್ಷಕ್ಕೆ ಇಲ್ಲವೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೇಳಿದ್ದನ್ನೇ ಮಾಡುತ್ತದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂಭತ್ತು ವರ್ಷಗಳಲ್ಲಿ ಸಾಧಿಸಿದ ಪ್ರಗತಿ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ನಿದರ್ಶನವೆಂದು ಹೇಳಿದರು.
ಇದನ್ನೂ ಓದಿ:ಪ್ರಿಯಕರನ​ ಬಟ್ಟೆ ಬಿಚ್ಚಿ ಥಳಿಸಿದ ಯುವತಿ! ಒಂದು ದಿನದಲ್ಲಿ ಈಕೆ ಕೊಟ್ಟ ಕಾಟ ಆಘಾತಕಾರಿ
ಸ್ವಚ್ಛ ಭಾರತ ಮಿಷನ್ ನಡಿ ಶೌಚಗೃಹ ನಿರ್ಮಾಣ, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ, ಮನೆಗಳಿಗೆ ನಲ್ಲಿ ನೀರಿನ ಸಂಪರ್ಕದ ಮೂಲಕ ಮಹಿಳೆಯರ ಬಗ್ಗೆ ವಿಶೇಷ ಕಾಳಜಿವಹಿಸಿದ್ದಾರೆ.
ಬಡವರ ನೆನಪಾಗಿದೆರಾಜ್ಯದಲ್ಲೂ ಈ ಹಿಂದೆ ಯಡಿಯೂರಪ್ಪ ಆಡಳಿತಾವಧಿಯಲ್ಲಿ ವಿಧವಾ ಮಾಸಾಶನ ಹೆಚ್ಚಿಸಲಾಯಿತು. ಸಂಧ್ಯಾ ಸುರಕ್ಷಾ ಯೋಜನೆಯಡಿ ಪ್ರತಿ ಹಿರಿಯ ದಂಪತಿ ಕುಟುಂಬಕ್ಕೆ ಮಾಸಿಕ 2,400 ರೂ ನೀಡುವ ಯೋಜನೆ 2008ರಲ್ಲೇ ಬಿಜೆಪಿ ಆರಂಭಿಸಿದೆ. ಆದರೆ ಕಾಂಗ್ರೆಸ್ ಈಗ ಗ್ಯಾರಂಟಿ ಭರವಸೆಯಡಿ ಮಾಸಿಕ 2000 ರೂ ನೀಡುವುದಾಗಿ ಹೇಳುತ್ತಿದೆ. ಚುನಾವಣೆ ಬಂದಿರುವ ಕಾರಣಕ್ಕೆ ಬಡವರ ನೆನಪಾಗಿದೆ ಎಂದು ಛೇಡಿಸಿದರು.
ನಂದಿನಿ ನಮ್ಮ ರಾಜ್ಯದ ಹೆಮ್ಮೆಕೆಎಂಎಫ್, ನಂದಿನಿ ವಿಚಾರವಾಗಿ ಪ್ರತಿಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ನಂದಿನಿ ನಮ್ಮ ರಾಜ್ಯದ ಹೆಮ್ಮೆ. ಕೆಎಂಎಫ್ ಬಲವರ್ಧನೆಗೆ ಬಿಜೆಪಿ ಸರ್ಕಾರ ಕಾಲಕಾಲಕ್ಕೆ ಅಗತ್ಯ ನೆರವು ನೀಡಿದೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ:50 ಲಕ್ಷ ಖರ್ಚು, ಅದ್ಧೂರಿ ಮದ್ವೆ: ಹಣದಾಹಿ IAS ಗಂಡನ ವಿರುದ್ಧ ದೂರು, ನಿವೃತ್ತ ಡಿಐಜಿ ಪುತ್ರಿಯ ಕಣ್ಣೀರ ಕತೆಯಿದು
ಮೂಗು ತೂರಿಸುವ ಅಗತ್ಯವಿಲ್ಲಅಭ್ಯರ್ಥಿಗಳ ಪಟ್ಟಿ ಬಿಡುಗಡೆಯೂ ಪಕ್ಷದ ಕಾರ್ಯತಂತ್ರ. ಆಂತರಿಕ ವಿಷಯದಲ್ಲಿ ಪ್ರತಿಪಕ್ಷಗಳು ಮೂಗು ತೂರಿಸುವ ಅಗತ್ಯವಿಲ್ಲ. ಯಾವಾಗ ಏನು ಮಾಡಬೇಕು, ಪಟ್ಟಿ ಬಿಡುಗಡೆ ಮಾಡಬೇಕು ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಈ ಫೋಟೋದಲ್ಲಿರೋ ವಿಮಾನವನ್ನು 10 ಸೆಕೆಂಡ್​ನಲ್ಲಿ ಗುರುತಿಸುವಿರಾ? ಶೇ.90 ಮಂದಿಯ ಕೈಯಲ್ಲಿ ಆಗಿಲ್ಲ!

ಪ್ರಿಯಕರನ​ ಬಟ್ಟೆ ಬಿಚ್ಚಿ ಥಳಿಸಿದ ಯುವತಿ! ಒಂದು ದಿನದಲ್ಲಿ ಈಕೆ ಕೊಟ್ಟ ಕಾಟ ಆಘಾತಕಾರಿ

ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twenty =
Remember me
