ಬೆಂಗಳೂರು:ಉತ್ತರ ಕರ್ನಾಟಕದ ಜನತೆಗೆ ಕುಡಿಯುವ ನೀರೊದಗಿಸುವ ಉದ್ದೇಶದ ಕಳಸಾ-ಬಂಡೂರಿ ತಿರುವು ನಾಲಾ ಯೋಜನೆ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ. ಈ ಯೋಜನೆಯ ವಿಸõತ ಯೋಜನಾ ವರದಿಗೆ ಜಲಸಂಪನ್ಮೂಲ ಇಲಾಖೆ ತಾತ್ವಿಕ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಳಸಾ-ಬಂಡೂರಿ ನಾಲೆಗಳ ತಿರುವು ವಿಸõತ ಯೋಜನಾ ವರದಿ ಪ್ರಕಾರ, ಪರಿಷ್ಕೃತ ಒಟ್ಟು ಮೊತ್ತ 1,677.30 ಕೋಟಿ ರೂ. ಆಗಿದೆ. ಕಳಸಾ ನಾಲೆಯಿಂದ 1.72 ಟಿಎಂಸಿ ಅಡಿ ಮತ್ತು ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿ, ಕುಡಿಯುವ ನೀರು ಪೂರೈಕೆ ಯೋಜನೆಗೆ ಬಳಸಿಕೊಳ್ಳಲಾಗುವುದು.
ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಆಡಳಿತ ಮಂಡಳಿ ಶಿಫಾರಸು ಮಾಡಿದ್ದ ಮೊತ್ತವನ್ನು ಇಲಾಖೆ ಯಥಾವತ್ ಒಪ್ಪಿಲ್ಲ. ತಾಂತ್ರಿಕ ಸಲಹೆಗಾರರು ಮತ್ತು ನಿಗಮದ ವಿನ್ಯಾಸಕರ ಶಾಖೆಯ ಅಭಿಪ್ರಾಯ ಪರಿಗಣಿಸಿ ಪರಿಷ್ಕರಿಸಲಾಗಿದೆ. ಇದರಿಂದಾಗಿ ಒಟ್ಟಾರೆ ಅಂದಾಜು ಮೊತ್ತದಲ್ಲಿ 150.60 ಕೋಟಿ ರೂ. ತಗ್ಗಿದೆ.
ಕಳಸಾ ತಿರುವು ನಾಲಾ ಯೋಜನೆಯ ಅನುಮೋದಿತ ವಿಸõತ ಯೋಜನಾ ವರದಿ ಮೊತ್ತ 885.80 ಕೋಟಿ ರೂ.ಗಳು. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಬಳಿಕ ಕಳಸಾ ಹಾಗೂ ಹರತಾಳ ನಾಲಾಗಳ ಮೇಲೆ ಅಣೆಕಟ್ಟು ನಿರ್ವಿುಸಿ, ಕೂಡು ಕಾಲುವೆ ಮೂಲಕ 1.72 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಲಾಗುತ್ತದೆ.
ಬಂಡೂರಿ ನಾಲಾ ತಿರುವು ಯೋಜನೆಗೆ ಒಪ್ಪಿತ ವಿಸõತ ಯೋಜನಾ ವರದಿ ಮೊತ್ತ 791.50 ಕೋಟಿ ರೂ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನೆರಸೆ ಗ್ರಾಮದ ಬಳಿ ಬಂಡೂರ ಹಳ್ಳಕ್ಕೆ ಅಣೆಕಟ್ಟು ನಿರ್ವಿುಸಿ, ಕೂಡು ಕಾಲುವೆ ಮೂಲಕ 2.18 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಲಾಗುತ್ತದೆ.
ಆರ್ಥಿಕ ಇಲಾಖೆ ಪೂರ್ವಾನುಮತಿ ಪಡೆದ ನಂತರ ಕಳಸಾ-ಬಂಡೂರಿ ನಾಲಾ ಯೋಜನೆಯ ಟೆಂಡರ್ ಪ್ರಕ್ರಿಯೆ ಕೈಗೆತ್ತಿ ಕೊಳ್ಳಬೇಕೆಂದು ಕರ್ನಾಟಕ ನೀರಾವರಿ ನಿಗಮಕ್ಕೆ ಜಲಸಂಪನ್ಮೂಲ ಇಲಾಖೆ ನಿರ್ದೇಶನ ನೀಡಿದೆ.
ಒಪ್ಪಿಗೆ ನಂತರ ಕಾಮಗಾರಿ:ಈ ಬೆಳವಣಿಗೆಯಿಂದ ಕೇಂದ್ರ ಜಲ ಆಯೋಗ (ಸಿಡಬ್ಲು್ಯಸಿ)ದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವುದಕ್ಕೆ ಹಾದಿಯೀಗ ಸುಗಮವಾಗಿದೆ. ಆಯೋಗದಿಂದ ಒಪ್ಪಿಗೆ ದೊರೆತ ನಂತರವಷ್ಟೇ ಯೋಜನಾ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eight =
Remember me
