ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ಲೆಕ್ಕಪತ್ರ ಕ್ಷೇತ್ರದ ಪರಿಣಿತರನ್ನು ಹಣಕಾಸು ಅಧಿಕಾರಿಯಾಗಿ ನೇಮಿಸುವುದು ಸೇರಿ ಹಲವು ಸುಧಾರಣೆಗಳನ್ನು ಒಳಗೊಂಡ ಕರ್ನಾಟಕ ವಿಶ್ವವಿದ್ಯಾಲಯಗಳು ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಶುಕ್ರವಾರ ಅಂಕಿತ ಹಾಕಿದ್ದಾರೆ.
ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಹೆಸರನ್ನು ಬೆಂಗಳೂರು ಸಿಟಿ ವಿವಿ ಎಂಬುದಾಗಿ ಮರುನಾಮಕರಣ ಮಾಡುವುದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರಶಿಕ್ಷಣ, ನೃಪತುಂಗ ವಿಶ್ವವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿತ್ತು.
ಇದನ್ನೂ ಓದಿ:ಮಾಸ್ಕ್ ಧರಿಸದೇ ಬಂದ ಪ್ರತಾಪ್‌ಸಿಂಹಗೆ ವಿಧಾನಸೌಧದ ಬಾಗಿಲಲ್ಲೇ ತಡೆ!
ಈ ಸುಗ್ರೀವಾಜ್ಞೆಯಲ್ಲಿ ಆ ಅಂಶಗಳನ್ನು ಒಳಗೊಂಡಂತೆ ಹೊಸ ಕ್ಲಸ್ಟರ್ ವಿವಿಗಳಿಗೆ ಮೊದಲ ಕುಲಪತಿಗಳನ್ನು ಸರ್ಕಾರವೇ ನೇಮಕಾತಿ ಮಾಡುವುದಕ್ಕೆ ಅಧಿಕಾರ, ಎಲ್ಲ ವಿವಿಗಳಿಗೆ ಕುಲಸಚಿವರನ್ನಾಗಿ ಅಖಿಲ ಭಾರತ ಸೇವೆಯ (ಐಎಎಸ್, ಐಪಿಎಸ್ ಇತ್ಯಾದಿ) ಅಥವಾ ಕೆಎಎಸ್ ಅಧಿಕಾರಿಗಳನ್ನಷ್ಟೇ ನೇಮಕ ಮಾಡುವ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿ ಹೊರತುಪಡಿಸಿ ಇತರ ವಿಶ್ವವಿದ್ಯಾಲಯಗಳು ದೂರ ಶಿಕ್ಷಣವನ್ನು ನೀಡುವಂತಿಲ್ಲ.
ಕರೊನಾ ಅಟ್ಯಾಕ್ ಆದ್ರೂ ಗೆದ್ದೆ ನಾನು: ಅಮ್ಮನನ್ನು ರಿಸ್ಕ್​​ಗೆ ತಳ್ಳೋಕೆ ರೆಡಿ ಇರಲಿಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
