ಬೆಂಗಳೂರು:ಗೂಗಲ್​ ಪೇ ಆ್ಯಪ್​ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯತ್ನಿಸಿದ ಯುವಕನೊಬ್ಬ ತನ್ನ ಖಾತೆಯಿಂದ ಹಣ ಕಳೆದುಕೊಂಡು ಮೋಸ ಹೋಗಿರುವ ಘಟನೆ ನಡೆದಿದೆ.
ಇದನ್ನೂ ಓದಿ:11ನೇ ಮಹಡಿಯಿಂದ ಹುಡುಗಿಯನ್ನು ಎತ್ತಿ ಬೀಸಾಡಿದ ಅಂಕಲ್: ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!
ಬೆಂಗಳೂರಿನ ಗವಿಪುರಂ ನಿವಾಸಿ ಹರೀಶ್ ಮೋಸ ಹೋದ ಯುವಕ. ಗೂಗಲ್ ಪೇ ಓಪನ್ ಆಗದ ಹಿನ್ನೆಲೆಯಲ್ಲಿ ಗೂಗಲ್​ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಾಡಿದ್ದ. ಈ ವೇಳೆ ಸಿಕ್ಕ 9901771222 ನಂಬರ್​ಗೆ ಕರೆ ಮಾಡಿದ್ದ. ಆದರೆ ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಇದಾದ ಕೆಲವೇ ಕ್ಷಣಗಳಲ್ಲಿ 06291766339 ನಂಬರ್​ನಿಂದ ಹರೀಶ್​ಗೆ ಕರೆ ಬಂದಿದೆ. ಅಪರಿಚಿತನೊಬ್ಬ ಮಾತನಾಡಿ ನಿಮ್ಮ ಗೂಗಲ್ ಪೇ ಸಮಸ್ಯೆ ಆಗಿದೆ. ನಾವು ಕೇಳುವ ಮಾಹಿತಿ ನೀಡಿದರೆ ಬಗೆಹರಿಯುತ್ತೆ ಎಂದಿದ್ದಾರೆ.
ಅದನ್ನು ನಂಬಿದ ಹರೀಶ್​, ಡೆಬಿಟ್ ಕಾರ್ಡ್ ನಂಬರ್, ಪಿನ್​ಕೋಡ್ ಹಾಗೂ ಓಟಿಪಿಯನ್ನೂ ನೀಡಿದ್ದಾನೆ. ಬಳಿಕ ಅಪರಿಚಿತ ವ್ಯಕ್ತಿ ನಿಮ್ಮ ಗೂಗಲ್ ಪೇ ಸರಿ ಆಗಿದೆ. ಈಗ ಓಪನ್ ಮಾಡಿ ಎಂದು ಫೋನ್​ ಸಂಪರ್ಕ ಕಡಿದುಕೊಂಡಿದ್ದಾನೆ.
ಇತ್ತ ಕಾಲ್ ಕಟ್ ಮಾಡಿ ನೋಡ್ತಿದ್ದಂತೆ ಅಕೌಂಟ್​ನಲ್ಲಿದ್ದ 24,500 ರೂಪಾಯಿ ಮಂಗಮಾಯವಾಗಿದೆ. ಅಕೌಂಟ್​ನಲ್ಲಿದ್ದ ಹಣ ಇಲ್ಲವಾದ ಬಳಿಕ ಶಾಕ್ ಆಗಿ ಮತ್ತೇ ಅದೇ ನಂಬರ್​ಗೆ ಹರೀಶ್​ ಕಾಲ್ ಮಾಡಿದ್ದಾರೆ. ಆದರೆ ಆ ನಂಬರ್ ಸ್ವಿಚ್ ಆಫ್ ಆಗಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಗೇಮಿಂಗ್​ ಆ್ಯಪ್​ನಲ್ಲಿ ಹಣ ಕಳೆದುಕೊಂಡ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿತ್ತು ಆ್ಯಪ್​ ಹೆಸರು!
ದಕ್ಷಿಣ ಸಿಇಎನ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಿಎಸ್ 4 ವಾಹನಗಳ ಸೇಲ್ಸ್ ಕಳ್ಳಾಟ: ಶೋರೂಂಗಳ ಅಕ್ರಮ ಮಾರಾಟ, ಗ್ರಾಹಕರಿಗೆ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
