ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಂಕಿನ ಕರಾಳತೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸೋಮವಾರದಿಂದಲೇ ಅನ್ವಯಿಸುವಂತೆ ಅನ್​ಲಾಕ್ 4.0 ಘೋಷಿಸಿದೆ. ಮೂರು ತಿಂಗಳಿಂದ ಬಾಗಿಲು ಮುಚ್ಚಿದ್ದ ಸಿನಿಮಾ ಮಂದಿರಗಳನ್ನು ಶೇ.50 ಪ್ರೇಕ್ಷಕರಿಗೆ ಪ್ರವೇಶಕ್ಕೆ ಸೀಮಿತವಾಗಿ ಆರಂಭಿಸಲು ಅನುಮತಿ, ನೈಟ್ ಕರ್ಫ್ಯೂನಲ್ಲಿ ತುಸು ವಿನಾಯಿತಿ ಜತೆಗೆ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಕಾಲೇಜುಗಳನ್ನು ತೆರೆಯಲು ಇದ್ದ ನಿರ್ಬಂಧಗಳನ್ನು ಸಡಿಲಿಸಿದೆ. ಕೋವಿಡ್ ಕೇಸ್​ಗಳ ಪ್ರಮಾಣ ಕಡಿಮೆಯಾದಂತೆಲ್ಲ ಈವರೆಗೆ ಮೂರು ಹಂತದಲ್ಲಿ ಅನ್​ಲಾಕ್ ಘೋಷಣೆ ಮಾಡಿ ಸಾಮಾಜಿಕ, ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಿದ್ದ ಸರ್ಕಾರ ಅದರ ಮುಂದುವರಿದ ಭಾಗವಾಗಿ ಭಾನುವಾರ 4.0 ಅನ್​ಲಾಕ್ ಪ್ರಕಟಿಸಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಪರಿಷ್ಕೃತ ನಿಯಮದನ್ವಯ ಇನ್ನು ಮುಂದೆ ರಾತ್ರಿ 10 ರಿಂದ ಬೆಳಗ್ಗೆ 5ರವರೆಗಷ್ಟೇ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದರಿಂದ ವಾಣಿಜ್ಯ ಚಟುವಟಿಕೆಗಳಿಗೆ ನಿರಾಳತೆ ದೊರೆತಿದೆ. ಮಹಾರಾಷ್ಟ್ರ, ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಈ ಹಿಂದಿನ ನಿಯಮಗಳೇ ಅನ್ವಯವಾಗಲಿದ್ದು, ಕಣ್ಗಾವಲು ಕ್ರಮಗಳು ಮುಂದುವರಿಯಲಿವೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಕಾಲೇಜುಗಳನ್ನು ಜು.26 ರಿಂದ ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ಆದರೆ, ಬೋಧಕರು ಹಾಗೂ ವಿದ್ಯಾರ್ಥಿಗಳು ಒಂದು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಜತೆಗೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸ್ಪಷ್ಟಪಡಿಸಲಾಗಿದೆ. ಈ ನಿಯಮಗಳು ಆ.2ರವರೆಗೆ ಜಾರಿಯಲ್ಲಿರುತ್ತವೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಬ್, ಈಜುಕೊಳ ತೆರೆಯಲು ಅವಕಾಶ ನೀಡಿಲ್ಲ. ಸಭೆ-ಸಮಾರಂಭ, ಮದುವೆ, ಅಂತ್ಯಕ್ರಿಯೆಗೆ ಇರುವ ನಿರ್ಬಂಧಗಳು ಮುಂದುವರಿದಿವೆ. ಈ ಚಟುವಟಿಕೆಗಳಲ್ಲಿ ಜನ ಸೇರುವುದಕ್ಕೆ ಇರುವ ಮಿತಿ ತೆಗೆದುಹಾಕಿಲ್ಲ. ಆರ್ಥಿಕ ಮತ್ತು ಇತರ ಚಟುವಟಿಕೆಗಳನ್ನು ಕೋವಿಡ್ ಮಾರ್ಗಸೂಚಿ ಪಾಲನೆ ಮೂಲಕವೇ ನಡೆಸಬೇಕು.

ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಪ್ರಾರಂಭಿಸಲು ಕೊನೆಗೂ ಸರ್ಕಾರ ಅವಕಾಶ ನೀಡಿದೆ. ಸೋಮವಾರ ದಿಂದ ಶೇ. 50ರಷ್ಟು ಹಾಜರಾತಿಗೆ ಚಿತ್ರ ಪ್ರದರ್ಶನ ಮಾಡುವುದಕ್ಕೆ ಅನುಮತಿಯನ್ನು ನೀಡಿದೆ. ಆದರೆ, ತೆರೆಗೆ ಬರಲು ಯಾವೆಲ್ಲಾ ಹೊಸ ಸಿನಿಮಾಗಳು ರೆಡಿಯಾಗಿವೆ? ಈ ಪ್ರಶ್ನೆಗೆ ಉತ್ತರ ಜೀರೋ. ಏಕೆಂದರೆ, ಸದ್ಯಕ್ಕೆ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಯಾರೂ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಕಡೆಯ ನಿಮಿಷದಲ್ಲಿ ಅನುಮತಿ ಸಿಕ್ಕಿದ್ದು ಒಂದು ಕಾರಣವಾದರೆ, ಚಿತ್ರ ಬಿಡುಗಡೆಗೆ ಒಂದಿಷ್ಟು ಸಮಯಾವಕಾಶ ಬೇಕಾಗುತ್ತದೆ. ಅದರಲ್ಲೂ ಸಿನಿಮಾ ಪ್ರಚಾರಕ್ಕೆ 10 ದಿನಗಳ ಕಾಲ ಮಿತಿಯಾದರೂ ಬೇಕು. ಹಾಗಾಗಿ, ಅನುಮತಿ ಇದ್ದರೂ ತಕ್ಷಣಕ್ಕೆ ಯಾವೊಂದು ಹೊಸ ಸಿನಿಮಾ ಸಹ ಬಿಡುಗಡೆಯಾಗುತ್ತಿಲ್ಲ. ಅಷ್ಟೇ ಅಲ್ಲ, ಮುಂದಿನ ಎರಡು ವಾರಗಳ ಕಾಲ ಕರ್ನಾಟಕದಲ್ಲಿ ಹೊಸ ಸಿನಿಮಾ ಬಿಡುಗಡೆ ಆಗುವುದು ಸಂಶಯ ಎಂಬ ಮಾತು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ.
ಮೂರನೇ ಅಲೆ ಭೀತಿಯಲ್ಲಿ ಚಿತ್ರರಂಗ:ಅನುಮತಿ ಸಿಕ್ಕರೂ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರರಂಗ ಹಿಂದೇಟು ಹಾಕುತ್ತಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ಸೆಪ್ಟೆಂಬರ್- ಅಕ್ಟೋಬರ್ ವೇಳೆಯಲ್ಲಿ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ ಎಂಬ ಮಾಹಿತಿ ಈಗಾಗಲೇ ಎಲ್ಲೆಡೆ ಹರಿದಾಡಿರುವುದರಿಂದ, ಅದೂ ಕಳೆದು ಬಿಡಲಿ ಎಂಬ ಲೆಕ್ಕಾಚಾರದಲ್ಲಿ ಹಲವು ನಿರ್ದೇಶಕರು, ನಿರ್ವಪಕರು ಪ್ಲಾನ್ ಮಾಡಿದ್ದಾರೆ. ಹಾಗಾಗಿ ಸದ್ಯ ಶೇ. 50 ಆಸನ ಭರ್ತಿಗೆ ಅವಕಾಶ ಸಿಕ್ಕರೂ, ಸಿನಿಮಾ ಬಿಡುಗಡೆಗೆ ಯೋಜನೆ ರೂಪಿಸಿಲ್ಲ. ನೂರರಷ್ಟು ಅನುಮತಿ ಸಿಕ್ಕ ಮೇಲೆಯೇ ಬರುವುದಾಗಿ ಹೇಳುತ್ತಿದ್ದಾರೆ.
‘ನಮಗೆ ಶೇ. 100 ಬೇಕು…’:ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ನಟರ ಸಾಲುಸಾಲು ಸಿನಿಮಾಗಳು ಬಿಡುಗಡೆಯ ಹೊಸ್ತಿಲಲ್ಲಿವೆ. ‘ಭಜರಂಗಿ 2’, ‘ಕೋಟಿಗೊಬ್ಬ 3’, ‘ಸಲಗ’, ‘ಕೆಜಿಎಫ್ 2’, ‘ಅವತಾರ ಪುರುಷ’, ‘ವಿಕ್ರಾಂತ್ ರೋಣ’ ಸೇರಿ ಇನ್ನೂ ಹಲವು ಚಿತ್ರಗಳು ರೆಡಿ ಇವೆ. ಆದರೆ, ಶೇ. 100 ಆಸನಕ್ಕೆ ಅವಕಾಶ ನೀಡಿದರಷ್ಟೇ ಸಿನಿಮಾಗಳನ್ನು ತೆರೆಮೇಲೆ ತರಲು ಚಿತ್ರತಂಡದವರು ನಿರ್ಧರಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ‘ಸಲಗ’ ಸಿನಿಮಾ ನಿರ್ವಪಕ ಕೆ.ಪಿ ಶ್ರೀಕಾಂತ್ ಹೇಳುವುದು ಹೀಗೆ, ‘ಈ ಮೊದಲೇ ಹೇಳಿದಂತೆ ಚಿತ್ರಮಂದಿರದಲ್ಲಿ ಶೇ. 100 ಅವಕಾಶ ಸಿಕ್ಕಮೇಲಷ್ಟೇ ನಮ್ಮ ಸಿನಿಮಾ ತೆರೆಗೆ ಬರಲಿದೆ. ಇದೀಗ ಪ್ರಚಾರ ಕೆಲಸಕ್ಕೂ ಇಂದಿನಿಂದ ಚಾಲನೆ ನೀಡಲಿದ್ದೇನೆ. ಈ ಮಧ್ಯೆ, ಯಾರು ಮೊದಲು ಚಿತ್ರ ಬಿಡುಗಡೆಗಡೆ ಮಾಡಬೇಕು ಎಂಬುದರ ಕುರಿತು, ಇತರೆ ದೊಡ್ಡ ಬಜೆಟ್ ಚಿತ್ರಗಳ ನಿರ್ವಪಕರ ಜತೆಗೆ ಸೇರಿ ಚರ್ಚೆ ನಡೆಸಲಿದ್ದೇವೆ’ ಎನ್ನುತ್ತಾರೆ.
ಥಿಯೇಟರ್​ಗೆ ‘ಕೃಷ್ಣ ಟಾಕೀಸ್’:ಎರಡನೇ ಅಲೆ ಸಂದರ್ಭದಲ್ಲಿಯೇ ಚಿತ್ರಮಂದಿರಕ್ಕೆ ಬಂದು ಕೆಲವೇ ದಿನಗಲ ಕಾಲ ಪ್ರದರ್ಶನ ಕಂಡಿದ್ದ, ತೇಜಸ್ ಅಭಿನಯದ ‘ರಿವೈಂಡ್’ ಮತ್ತು ಅಜೇಯ್ ರಾವ್ ನಟನೆಯ ‘ಕೃಷ್ಣ ಟಾಕೀಸ್’ ಇದೀಗ ಮತ್ತೆ ಮರು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಪೈಕಿ ‘ರಿವೈಂಡ್’ ಚಿತ್ರವು ಜುಲೈ 23ರ ಶುಕ್ರವಾರದಂದು ಮರುಬಿಡುಗಡೆಯಾಗುತ್ತಿದೆ. ಇನ್ನು, ‘ಕೃಷ್ಣ ಟಾಕೀಸ್’ ಚಿತ್ರವು ಒಂದು ವಾರ ಬಿಟ್ಟು, ಅಂದರೆ, ಜುಲೈ 30ಕ್ಕೆ ಬಿಡುಗಡೆಯಾಗಲಿದೆ. ಈ ಬಗ್ಗೆ ಮಾಹಿತಿ ನೀಡುವ ಚಿತ್ರದ ನಿರ್ದೇಶಕ ವಿಜಯಾನಂದ್, ‘ಕಳೆದ ಸಲ ಶೇ. 50 ಆಸನ ಭರ್ತಿಗೆ ಅನುಮತಿ ಇದ್ದಾಗಲೇ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಒಳ್ಳೇ ಪ್ರತಿಕ್ರಿಯೆ ಸಿಕ್ಕರೂ, ಹೆಚ್ಚು ಜನ ಚಿತ್ರಮಂದಿರಗಳಿಗೆ ಬಂದಿರಲಿಲ್ಲ. ಇದೀಗ ಮರು ಬಿಡುಗಡೆಯ ಚರ್ಚೆ ನಡೆದಿದೆ. ಇದೇ ತಿಂಗಳ 30ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಪ್ರಚಾರ ಕೆಲಸವೂ ಮತ್ತೆ ಶುರುವಾಗಲಿದೆ’ ಎನ್ನುತ್ತಾರೆ.
ಶ್ರುತಿಗೆ ಶಾಕ್, ಕಾಪುಸಿಗೆ ಮಣೆ: ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ

ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + ten =
Remember me
