ಬೆಂಗಳೂರು:ಕರೊನಾ ಹಿನ್ನೆಲೆಯಲ್ಲಿ ಜಾರಿ ಮಾಡಿದ್ದ ಲಾಕ್​ಡೌನ್ ಅನ್ನು ಹಂತಹಂತವಾಗಿ ಸಡಿಲ ಮಾಡುತ್ತಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮಾರ್ಗಸೂಚಿ ಆಧಾರದಲ್ಲಿ ಅ.31ರವರೆಗೆೆ ಅನ್ವಯವಾಗುವಂತೆ ಮತ್ತೊಂದು ಸುತ್ತಿನ ಅನ್​ಲಾಕ್ ಮಾರ್ಗಸೂಚಿ ಪ್ರಕಟಿಸಿದೆ. ಪ್ರಮುಖವಾಗಿ ಶಾಲೆಗಳ ಪುನರಾರಂಭ, ಜನತೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವ ಕುರಿತಂತೆ ತನ್ನ ನಿಲುವು ಸ್ಪಷ್ಟಪಡಿಸಿದೆ. ಅ.15ರ ನಂತರ ಪ್ರಾಥಮಿಕ ಮತ್ತು ಪ್ರೌಢಶಾಲೆ ಆರಂಭಿಸುವ ಸಂಬಂಧ ಹಂತಹಂತವಾಗಿ ತೀರ್ಮಾನ ತೆಗೆದುಕೊಳ್ಳಬಹುದು, ಅದಕ್ಕೂ ಮುನ್ನ ಸಂಬಂಧಿಸಿದ ಶಾಲಾ ಮತ್ತು ಸಂಸ್ಥೆಯ ಆಡಳಿತ ಮಂಡಳಿ, ಆರೋಗ್ಯ ಇಲಾಖೆ ಜತೆ ಸಮಾಲೋಚಿಸಿ ಸ್ಥಳೀಯ ಪರಿಸ್ಥಿತಿ ಆಧರಿಸಿ, ಷರತ್ತಿಗೆ ಒಳಪಟ್ಟು ಶಾಲೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಕಾಲೇಜುಗಳ ಕುರಿತಂತೆ ಅ.15ರ ನಂತರ ಕೇಂದ್ರ ಶಿಕ್ಷಣ ಇಲಾಖೆ ಜತೆ ಉನ್ನತ ಶಿಕ್ಷಣ ಇಲಾಖೆ ಸಮಾಲೋಚಿಸಿ ಪರಿಸ್ಥಿತಿ ಆಧಾರಿಸಿ ತೀರ್ಮಾನ ಕೈಗೊಳ್ಳಬಹುದಾಗಿದೆ. ಆದಾಗ್ಯೂ ಈ ಪ್ರಾಯೋಗಿಕ, ಸಂಶೋಧನಾ ಚಟುವಟಿಕೆಗಳು ಅ.15ರ ನಂತರ ಆರಂಭಿಸಲು ಅವಕಾಶ ನೀಡಲಾಗಿದೆ.ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯೇ ಸುರಕ್ಷಿತರಲ್ಲ: ಸಿದ್ದರಾಮಯ್ಯ ಆತಂಕ
ಸಮಾರಂಭಕ್ಕೆ ಶೇ.50ರ ಮಿತಿ:ಕ್ರೀಡೆ, ಮನರಂಜನೆ, ಸಾಮಾಜಿಕ, ಧಾರ್ವಿುಕ, ಶೈಕ್ಷಣಿಕ ಕಾರ್ಯಕ್ರಮಗಳು ಇತರ ಸಮಾರಂಭಗಳಿಗೆ ಸಂಬಂಧಿದಂತೆ ಪಾಲ್ಗೊಳ್ಳುವವರಿಗೆ ಮಿತಿ ಹಾಕಲಾಗಿದೆ. 200ರ ಪರಿಮಿತಿಯ ಸಭಾಂಗಣದಲ್ಲಿ ಶೇ.50 ಹಾಜರಾತಿಗೆ ಮಾತ್ರ ಅವಕಾಶ ನೀಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ಇನ್ನು ಮುಂದೆ ದುಬಾರಿ ದಂಡ ಬೀಳಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1000 ರೂ., ಇನ್ನುಳಿದ ಸ್ಥಳಗಲ್ಲಿ 500 ರೂ. ದಂಡ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ದಂಡನೀಯ ಅಪರಾಧವಾಗಿದೆ.
‘ರಾಜ್ಯದಲ್ಲಿ ಶಾಲೆ ಪ್ರಾರಂಭಿಸುವುದೇ ಉತ್ತಮ’ ಎಂದ ಶಿಕ್ಷಣ ತಜ್ಞರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eleven =
Remember me
