ಬೆಂಗಳೂರು:ಕರೊನಾ ಸೋಂಕು ಪ್ರಕರಣ ಹಾಗೂ ಪಾಸಿಟಿವಿಟಿ ದರ ಏರಿಳಿತದ ನಡುವೆಯೇ ಅನ್​ಲಾಕ್​ಗೆ ಬಿರುಸಿನ ತಾಲೀಮು ನಡೆಸಿರುವ ರಾಜ್ಯ ಸರ್ಕಾರ, ಸೋಮವಾರದಿಂದ ಹಂತಹಂತವಾಗಿ ರ್ನಿಬಂಧ ತೆರವು ಮಾಡುವುದು ಬಹುತೇಕ ಫಿಕ್ಸ್​ ಆಗಿದೆ. ಈ ಮಧ್ಯೆ ಶುಕ್ರವಾರದಿಂದ ಸಿಎಂ ಯಡಿಯೂರಪ್ಪ ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರವಾಸ ಕೈಗೊಳ್ಳುವುದರಿಂದ ಗುರುವಾರ ಅವರ ನೇತೃತೃತ್ವದಲ್ಲಿ ನಡೆಯುವ ಸಭೆ ಕುತೂಹಲ ಕೆರಳಿಸಿದೆ. ತಜ್ಞರ ಸಲಹೆಗಳು, ವಸ್ತುಸ್ಥಿತಿ ಆಧಾರದ ಮೇಲೆ ಸರ್ಕಾರ ರ್ನಿಣಯ ಕೈಗೊಳ್ಳುವುದರಿಂದ ಪರಿಷತ ಮಾರ್ಗಸೂಚಿ ಗುರುವಾರವೇ ಪ್ರಕಟವಾಗುವ ಸಾಧ್ಯತೆಗಳಿವೆ.
ಕರೊನಾ ಎರಡನೇ ಅಲೆ ಪ್ರಭಾವ ತಗ್ಗುತ್ತಿದ್ದರೂ ಕೆಲವು ಜಿಲ್ಲೆಗಳಲ್ಲಿ ಗಂಭೀರ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಏಕಸ್ವರೂಪದ ಅನ್​ಲಾಕ್​ ಜಾರಿಗೊಳಿಸುವುದು ಅನುಮಾನ. ಆರ್ಥಿಕತೆಗೆ ಚೈತನ್ಯ ತುಂಬಲು ಹಾಗೂ ಜನರನ್ನು ಒತ್ತಡದಿಂದ ಹೊರತರಲು ಪೂರಕವಾದ ಪ್ರಮುಖ ಚಟುವಟಿಕೆಗಳು ಮೊದಲ ಆದ್ಯತೆ ಮೇಲೆ ಅವಕಾಶ ಗಿಟ್ಟಿಸಿಕೊಳ್ಳುವ ನಿರೀೆಯಿದೆ. ತಜ್ಞರ ಸಲಹೆ ಪ್ರಕಾರ ಹೊಸ ಪ್ರಕರಣಗಳು 5 ಸಾವಿರಕ್ಕಿಂತ ಕಡಿಮೆ ಹಾಗೂ ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಕಡಿಮೆಯಾಗಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − nine =
Remember me
