ಬೆಂಗಳೂರು:ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಎಲ್ಲ ಹುದ್ದೆಯನ್ನು ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಸಂಘದ 31 ಜಿಲ್ಲೆ ಅಧ್ಯಕ್ಷರು, ರಾಜ್ಯ ಪರಿಷತ್ ಸದಸ್ಯರು, ಖಜಾಂಚಿ ಹಾಗೂ ರಾಜ್ಯ ಸಂಘದ ಪ್ರತಿನಿಧಿಗಳ ನಿಯೋಗ ಆ.21 ರಂದು ಬೇಡಿಕೆ ಈಡೇರಿಕೆ ಸಂಬಂಧ ಇಲಾಖೆ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರನ್ನು ಭೇಟಿ ಮಾಡಲಿದೆ. ಬೇಡಿಕೆ ಈಡೇರಿಸದೇ ಹೋದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಸಂಘದ ಅಧ್ಯಕ್ಷ ರಾಜು ವಾರದ ತಿಳಿಸಿದ್ದಾರೆ.ಪಿಡಿಒ ಹುದ್ದೆ ಸೃಷ್ಟಿಯಾಗಿ 12ವರ್ಷ ಕಳೆದರೂ ಒಂದು ಕ್ರಮಬದ್ಧ ಜೇಷ್ಠ್ಠತಾ ಪಟ್ಟಿ ತಯಾರಿಸಿಲ್ಲ. ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅಪರಿಮಿತ ಒತ್ತಡ, ಅವೈಜ್ಞಾನಿಕ ಗುರಿ ನಿಗದಿ ಮಾಡಲಾಗುತ್ತದೆ.
12 ವರ್ಷದಿಂದ ಬೇಡಿಕೆ ಈಡೇರಿಲ್ಲಪಿಡಿಒ ಎಲ್ಲ ಹುದ್ದೆಯನ್ನು ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸುವ ಬೇಡಿಕೆ ಸತತ 12 ವರ್ಷದಿಂದ ಮನವಿ ಸಲ್ಲಿಸಿದ್ರು ಕ್ರಮ ಕೈಗೊಂಡಿಲ್ಲ. ನಾಮಕೆವಾಸ್ತೆ 1,500 ಹಿರಿಯ ಪಿಡಿಒ ಹುದ್ದೆ ಸೃಷ್ಟಿಸಿ ಯಾವುದೇ ರೀತಿಯಲ್ಲಿ ವೃಂದ ಮತ್ತು ನೇಮಕ ನಿಯಮ ಮಾಡದೆಯೇ ಸೂಕ್ತ ವರ್ಗಾವಣೆ ನಿಯಮ ರೂಪಿಸದೆ ಪಿಡಿಒ ಹುದ್ದೆಯನ್ನು ರಾಜ್ಯ ವೃಂದವೆಂದು ಪರಿಗಣಿಸಿ, ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ.
ಸ್ಥಳ ತೋರಿಸದೇ ವರ್ಗಾವಣೆ?ವರ್ಗಾವಣೆ ಇತಿಹಾಸದಲ್ಲೇ ಸಿ ವೃಂದದ ಹುದ್ದೆಯೊಂದಕ್ಕೆ ಕೌನ್ಸೆಲಿಂಗ್ ಮಾಡದೆಯೇ ಬೃಹತ್ ವರ್ಗಾವಣೆ ಮಾಡಿರುವುದು ಇದೇ ಮೊದಲು. ಇದರ ನೇರ ಮತು ್ತಕಟ್ಟ ಪರಿಣಾಮ ನೌಕರರ ಮೇಲೆ ಬೀರಿದ್ದು, 100ಕ್ಕೂ ಹೆಚ್ಚು ನೌಕರರು ಪಿಡಿಒ ಹುದ್ದೆಗೆ ರಾಜೀನಾಮೆ ನೀಡುಲು ಮುಂದಾಗಿದ್ದಾರೆ.ಪ್ರಸ್ತುತ 69 ಜನ ಪಿಡಿಒಗಳಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿದೆ.
ದೋಷಪೂರಿತ ವರ್ಗಾವಣೆ ಸಮಸ್ಯೆದೋಷಪೂರಿತ ವರ್ಗಾವಣೆಯಿಂದಾಗಿ ಹಲವು ಪಿಡಿಒಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದಾರೆ. ನೌಕರರು ವರ್ಗಾವಣೆಗೆ ಯಾವುದೇ ಅರ್ಜಿ ನೀಡದಿದ್ದರೂ ಹಾಸನದಿಂದ ಬೆಳಗಾವಿಗೆ, ಮಂಗಳೂರಿ-ಕಲಬುರಗಿ ,ಮಡಿಕೇರಿ-ಚಾಮರಾಜನಗರ, ಬಿಜಾಪುರ- ಮೈಸೂರು ಸೇರಿದಂತೆ ದೂರದ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ನ್ಯಾಯಾಲಯದ ಪ್ರಕರಣಗಳನ್ನು ಬೇಕಾದಂತೆ ವ್ಯಾಖ್ಯಾನಿಸಿಕೊಂಡು ನಾಲ್ಕು ವರ್ಷದಿಂದ ಒಂದೇ ಒಂದು ಬಡ್ತಿ ನೀಡಲಾಗಿದೆ ಎಂದು ಸಂಘ ಆರೋಪಿಸಿದೆ.————————
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
