ಬೆಂಗಳೂರು:ವಿಧಾನ ಪರಿಷತ್​ನ ಎರಡು ಸ್ಥಾನಗಳಿಗೆ ಇಷ್ಟರಲ್ಲೇ ಅಧಿಸೂಚನೆ ಪ್ರಕಟವಾಗಲಿದ್ದು, ಈ ನಡುವೆ ಮತದಾರರ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಇಬ್ಬರು ರಾಜೀನಾಮೆ ನೀಡಿದ್ದರಿಂದ 2 ಸ್ಥಾನಗಳು ಖಾಲಿ ಇದ್ದು, ಅವುಗಳಿಗೆ ಚುನಾವಣೆ ನಡೆಯಬೇಕಾಗಿದೆ.
ಸಾಮಾನ್ಯವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದವರು ಅವಧಿಗೂ ಮುನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಮೃತರಾದರೆ ಅಥವಾ ಇನ್ಯಾವುದೇ ಕಾರಣಕ್ಕೆ ಸದಸ್ಯತ್ವ ತ್ಯಜಿಸಬೇಕಾಗಿ ಬಂದರೆ ಮುಂದಿನ ಅವಧಿಗೆ ಹೊಸ ಸದಸ್ಯರ ಆಯ್ಕೆ ನಡೆಯಲಿದೆ. ಅದೇ ರೀತಿ ಈಗ ಎರಡು ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಯನ್ನೊಳಗೊಂಡ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಮಂಗಳೂರು, ಉಡುಪಿ, ತುಮಕೂರು, ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕನ್ನೊಳಗೊಂಡ ಪದವೀಧರ ಕ್ಷೇತ್ರದ ಚುನಾವಣೆಗೆ ಇಷ್ಟರಲ್ಲೇ ಅಧಿಸೂಚನೆ ಹೊರಬೀಳಲಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ಅವಧಿ ಅಥವಾ ಈ ಸ್ಥಾನದ ಅವಧಿ 2026ರ ನವೆಂಬರ್ 11ರವರೆಗೂ ಇದೆ. ಇಲ್ಲಿಗೆ ಈಗ ಹೊಸ ಸದಸ್ಯನ ಆಯ್ಕೆಯಾಗಬೇಕಾಗಿದೆ.
ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಆಯನೂರು ಮಂಜುನಾಥ್ ಅವಧಿ 2024ರ ಜೂನ್ 21ರವರೆಗೂ ಇದೆ. ಆದರೆ, ಬಿಜೆಪಿಗೆ ವಿದಾಯ ಹೇಳಿ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದ ಪರಿಣಾಮ ನೈಋತ್ಯ ಪದವೀಧರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲಿಗೂ ಈಗ ಚುನಾವಣೆ ನಡೆಸುವ ಅನಿವಾರ್ಯತೆ ಎದುರಾಗಿದೆ.
ಮತದಾರರ ಪಟ್ಟಿ ಸಮಸ್ಯೆ:ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರದ ಹಾಲಿ ಸದಸ್ಯರ ಅವಧಿ 2024ರ ಜೂನ್​ನಲ್ಲಿ ಮುಗಿಯಲಿದ್ದು, ಚುನಾವಣೆ ಪೂರ್ವ ಪ್ರಕ್ರಿಯೆಯಾಗಿ ನವೆಂಬರ್​ನಲ್ಲಿ ಮತದಾರರ ಪಟ್ಟಿಗೆ ನೋಂದಣಿ- ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದೆ.
ಅಂದರೆ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ಆರು ವರ್ಷದ ಹಿಂದೆ ಮಾಡಿಕೊಂಡಿರುವ ಮತದಾರರ ಪಟ್ಟಿಯನ್ನೇ ಬಳಸಬೇಕಾಗುತ್ತದೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಒಂದು ವರ್ಷವೂ ಇಲ್ಲದಿರುವುದರಿಂದ ಚುನಾವಣೆ ನಡೆಸುವ ಬಗ್ಗೆ ಸ್ಪಷ್ಟತೆ ಇಲ್ಲ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಮಾತ್ರ ಆರು ವರ್ಷದ ಹಿಂದಿನ ಮತದಾರರ ಪಟ್ಟಿ ಬಳಸಬೇಕಾಗುತ್ತಿದೆ.
ಅಂದರೆ, 3 ವರ್ಷ ನಿರಂತರವಾಗಿ ಶಿಕ್ಷಕ ವೃತ್ತಿಯಲ್ಲಿರುವವರು ಮತದಾರರಾಗಲು ಅರ್ಹರಾಗುತ್ತಾರೆ. ಆರು ವರ್ಷದ ಹಿಂದೆ ಶಿಕ್ಷಕರಾಗಿ ಮತದಾರರ ಪಟ್ಟಿಯಲ್ಲಿದ್ದವರು ಈಗ ವೃತ್ತಿಯಲ್ಲಿ ಇಲ್ಲದೇ ಇರಬಹುದು ಅಥವಾ ಆರು ವರ್ಷದಿಂದೀಚೆಗೆ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡವರು ಮತದಾರರ ಪಟ್ಟಿಯಲ್ಲಿ ಸೇರಿರುವುದಿಲ್ಲ. ಈ ಕಾರಣಕ್ಕೆ ಮತದಾರರ ಪಟ್ಟಿ ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ. ಈ ವಿಚಾರ ಚುನಾವಣಾ ಆಯೋಗದ ಮೆಟ್ಟಿಲೇರುವ ಸಾಧ್ಯತೆಯೂ ಇದೆ. ಆರು ವರ್ಷದ ಹಿಂದಿನ ಮತದಾರರ ಪಟ್ಟಿಯನ್ನು ಪರಿಗಣಿಸಿದರೆ ನ್ಯಾಯಸಮ್ಮತವಾಗಿ ಚುನಾವಣೆ ಆಗುವುದಿಲ್ಲ, ಅವೈಜ್ಞಾನಿಕವಾಗಲಿದೆ ಎಂಬ ಅಭಿಪ್ರಾಯ ಸ್ಪರ್ಧಾಕಾಂಕ್ಷಿಗಳಲ್ಲೂ ಇದೆ.
ಇನ್ನೊಂದೆಡೆ ಕಾಂಗ್ರೆಸ್​ನಿಂದ ಸ್ಪರ್ಧಿಸಲು ಬಯಸಿರುವ ಪುಟ್ಟಣ್ಣ, ಜೆಡಿಎಸ್​ನ ಸ್ಪರ್ಧಾಕಾಂಕ್ಷಿ ಎ.ಪಿ. ರಂಗನಾಥ್ ಪ್ರಚಾರವನ್ನೂ ಆರಂಭಿಸಿದ್ದಾರೆ.
ಚುನಾವಣೆ ಲೆಕ್ಕಾಚಾರ, ನಾಮನಿರ್ದೇಶನಕ್ಕೆ ಪೈಪೋಟಿ:ವಿಧಾನ ಪರಿಷತ್​ನ ಮೂರು ಸ್ಥಾನಗಳಿಗೆ ನಾಮ ನಿರ್ದೇಶನಕ್ಕೆ ಹೈಕಮಾಂಡ್ ಹಸಿರುನಿಶಾನೆ ನೀಡಿದೆ. ಪ್ರಸ್ತುತ ಸುಧಾಮ್​ದಾಸ್, ಮನ್ಸೂರ್ ಖಾನ್, ಎಂ.ಆರ್. ಸೀತಾರಾಂ ಹೆಸರು ಬಹುತೇಕ ಅಂತಿಮ ಗೊಂಡಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ದಿನೇಶ್ ಅಮೀನ್​ಮಟ್ಟು ಹೆಸರು ಚಲಾವಣೆಗೆ ಬಂದಿದೆ. ಕೆಪಿಸಿಸಿ ವಕ್ತಾರ ನಟರಾಜ ಗೌಡ, ಮಾಜಿ ಸಚಿವೆ ಉಮಾಶ್ರೀ ಕೂಡ ಕೊನೆಯ ಹಂತದ ಪ್ರಯತ್ನ ನಡೆಸಿದ್ದಾರೆ.
2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
