ಕೀರ್ತಿನಾರಾಯಣ ಸಿ. ಬೆಂಗಳೂರುಮೂರು ವರ್ಷದ ಹಿಂದೆ ಅಪ್ಪಳಿಸಿದ ಕೋವಿಡ್ ಸಂದರ್ಭದಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನೇ ಲಾಭ ಮಾಡಿಕೊಂಡು ಹುಟ್ಟಿಕೊಂಡ ‘ಲೋನ್ ಆಪ್’ಗಳ ಹಾವಳಿ ಇನ್ನೂ ನಿಂತಿಲ್ಲ. ಕೆಲವೇ ನಿಮಿಷದಲ್ಲಿ ಸಾಲ ಕೊಟ್ಟು ಶೇ.30 ರಿಂದ ಶೇ.50ರವರೆಗೆ ಬಡ್ಡಿ ವಿಧಿಸುವ ಈ ಆಪ್​ಗಳು, ಸಾಲ ಮರುಪಾವತಿ ನಂತರವೂ ಸಾಲ ಪಡೆದವರ ಮಾನ ತೆಗೆದು ಅವರು ಜೀವ ಕಳೆದುಕೊಳ್ಳುವಷ್ಟು ಕಿರುಕುಳ ನೀಡುತ್ತಿವೆ.
ದೇಶಾದ್ಯಂತ ಈ ಅನಧಿಕೃತ ಆಪ್​ಗಳ ಜಾಲ ಹರಡಿವೆ. ಯಾರು? ಎಲ್ಲಿಂದ? ಹೇಗೆ? ನಿರ್ವಹಿಸುತ್ತಾರೆ ಎಂಬುದೇ ತಿಳಿಯದಂತೆ ಇಂಟರ್ನೆಟ್​ನಲ್ಲೇ ಡಿಜಿಟಲ್ ಸಾಲ ಕೊಟ್ಟು ಕಿರುಕುಳ ಕೊಡುತ್ತಾರೆ. ಸೈಬರ್ ಪೊಲೀಸರು, ಆರ್​ಬಿಐ ಹಾಗೂ ಬ್ಯಾಂಕ್​ಗಳು ಹಲವು ರೀತಿಯಲ್ಲಿ ಲೋನ್ ಆಪ್​ಗಳ ಜಾಲ ನಾಶಪಡಿಸಲು ಹಾಗೂ ವಂಚನೆಯಾಗದಂತೆ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡರೂ ಪೂರ್ಣಪ್ರಮಾಣದಲ್ಲಿ ಮಟ್ಟಹಾಕಲು ಸಾಧ್ಯ ವಾಗಿಲ್ಲ. ಗೂಗಲ್ ಸಂಸ್ಥೆ 2021ರಿಂದ 2022ರ ಜುಲೈವರೆಗೆ 3,500 ರಿಂದ 4,000 ಲೋನ್ ಆಪ್​ಗಳನ್ನು ಪರಿಶೀಲನೆ ನಡೆಸಿದೆ. ಇದರಲ್ಲಿ ಅನಧಿಕೃತ ಅಥವಾ ಅನುಮಾನಾಸ್ಪದ ಎಂದು ಕಂಡುಬಂದ 2,500 ಆಪ್​ಗಳನ್ನು ಪ್ಲೇ ಸ್ಟೋರ್​ನಿಂದ ಶಾಶ್ವತವಾಗಿ ತೆಗೆದು ಹಾಕಿದೆ.
ಆದರೆ, ಇದೇ ಆಪ್​ಗಳು ಸೋಷಿಯಲ್ ಮೀಡಿಯಾದ ಇನ್​ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್​ಬುಕ್ ವೇದಿಕೆಗಳಲ್ಲಿ ಮರುಸೃಷ್ಟಿಯಾಗಿ ವಂಚನೆಯಲ್ಲಿ ನಿರತವಾಗಿವೆ. ಭಾರತೀಯ ಸೈಬರ್ ಅಪರಾಧ ಕೇಂದ್ರ ಹಾಗೂ ಗೃಹ ಸಚಿವಾಲಯ ಸಾಲದ ಆಪ್​ಗಳ ಅಸಲಿಯತ್ತಿನ ಬಗ್ಗೆ ನಿಯಮಿತವಾಗಿ ವಿಶ್ಲೇಷಣೆ ಮಾಡುತ್ತಲೇ ಇದೆ. ಈ ವಿಶ್ಲೇಷಣೆ ವರದಿ ಹಾಗೂ ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್​ನಲ್ಲಿ ದಾಖಲಾಗುವ ದೂರು ಆಧರಿಸಿ ಅನುಮಾನಾಸ್ಪದ ಆಪ್​ಗಳನ್ನು ಬ್ಲಾಕ್ ಮಾಡುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ಸೂಚನೆ ಕೊಡಲಾಗುತ್ತಿದೆ. ಇಷ್ಟೆಲ್ಲ ಎಚ್ಚರಿಕೆ ಕ್ರಮ ಕೈಗೊಂಡರೂ ವಂಚನೆ ಹಾಗೂ ಕಿರುಕುಳ ಮಾತ್ರ ತಪ್ಪಿಲ್ಲ.
ಟಾರ್ಚರ್​ಗೆ ವಿದ್ಯಾರ್ಥಿ ಬಲಿ!:ಸಾಲದ ಆಪ್ ಕಿರುಕುಳಕ್ಕೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್​ನಲ್ಲಿ ಆರನೇ ಸೆಮಿಸ್ಟರ್ ಓದುತ್ತಿದ್ದ ಯಶಸ್ 2023ರ ಜುಲೈನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಗೆಳೆಯನ ಆರ್ಥಿಕ ಸಂಕಷ್ಟ ತೀರಿಸಲು ಲೋನ್ ಆಪ್​ಗಳಲ್ಲಿ ಸಾಲ ಪಡೆದಿದ್ದ. ಹಣ ಮರುಪಾವತಿ ಮಾಡದಿದ್ದಾಗ ಆಪ್​ಗಳಿಂದ ಕಿರುಕುಳ ಆರಂಭವಾಗಿತ್ತು.
ಕಬಡ್ಡಿ ಆಟಗಾರ ಆತ್ಮಹತ್ಯೆ:ಪುತ್ತೂರಿನ ಕಬಡ್ಡಿ ಆಟಗಾರ ಸ್ವರಾಜ್ ಎಂಬ ಯುವಕ ಕಳೆದ ಸೆಪ್ಟೆಂಬರ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾಲ ಮರುಪಾವತಿಗೆ ನಾಳೆ ಮಧ್ಯಾಹ್ನವೇ ಡೆಡ್​ಲೈನ್ ಎಂದು ಆಪ್​ನವರು ಬ್ಲಾ್ಯಕ್​ವೆುೕಲ್ ಮಾಡಿದ್ದರಿಂದ ನೇಣು ಹಾಕಿಕೊಂಡಿದ್ದ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಚೇರಿಯಲ್ಲೇ ಯುವಕ ಸೂಸೈಡ್:2022ರ ಜ.10ರಂದು ಸುಶಾಂತ್ ಎಂಬಾತ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಲೋನ್ ಆಪ್​ನವರು ಕರೆ ಮಾಡಿದರೆ ಮೃತಪಟ್ಟಿದ್ದಾಗಿ ಹೇಳಿ ಎಂದು ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದ.
ಟಾರ್ಚರ್ ಹೇಗೆ?:ಸಾಲ ಪಡೆದರೆ ಫೋನ್​ಗಳಲ್ಲಿರುವ ಎಲ್ಲ ಕಾಂಟ್ಯಾಕ್ಟ್ ಗಳು ಆಪ್ ಆಪರೇಟರ್​ಗೆ ಲಭ್ಯವಾಗುತ್ತವೆ. ?ಇಎಂಐ ಪಾವತಿ ವಿಳಂಬ ಅಥವಾ ಪಾವತಿಸಿದ ನಂತರವೂ ಕಿರುಕುಳ ಆರಂಭವಾಗುತ್ತದೆ. ?ಫೋನ್​ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್​ನ ಗ್ರೂಪ್ ಸೃಷ್ಟಿಸಿ, ಅಶ್ಲೀಲ ಫೋಟೋಗಳನ್ನು ಸೃಷ್ಟಿಸಿ ರವಾನೆ
ಆರ್​ಬಿಐ ವೈಟ್​ಲಿಸ್ಟ್!:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಈಗಾಗಲೇ ‘ವೈಟ್​ಲಿಸ್ಟ್’ ಲೋನ್ ಆಪ್​ಗಳ ಪಟ್ಟಿಯನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಂಡಿದೆ. ವೈಟ್​ಲಿಸ್ಟ್ ಎಂದರೆ ಕಾನೂನುಬದ್ಧವಾಗಿ ಸಾಲ ಕೊಟ್ಟು ವಸೂಲಿ ಮಾಡುವ ಆಪ್​ಗಳು. ಇವು ಆರ್​ಬಿಐನಲ್ಲಿ ನೋಂದಾಯಿತವಾಗಿವೆ. ಇದೇ ಪಟ್ಟಿಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಗೂಗಲ್​ನೊಂದಿಗೆ ಹಂಚಿಕೊಂಡಿದೆ. ಈ ಪಟ್ಟಿಯ ಲ್ಲಿರುವ ಆಪ್​ಗಳನ್ನು ಹೊರತುಪಡಿಸಿ ಉಳಿದ ಆಪ್​ಗಳನ್ನು ಪ್ಲೇ ಸ್ಟೋರ್​ನಿಂದ ತೆಗೆಯುವ ಕೆಲಸವನ್ನು ಗೂಗಲ್ ಮಾಡುತ್ತಿದೆ. ಇದಲ್ಲದೆ ಪ್ಲೇ ಸ್ಟೋರ್​ನಲ್ಲಿ ಸಾಲದ ಅಪ್ಲಿಕೇಶನ್​ಗಳ ಜಾರಿಗೊಳಿಸುವ ನೀತಿಯನ್ನು ಗೂಗಲ್ ನವೀಕರಿಸಿ, ಇನ್ನಷ್ಟು ಕಠಿಣ ಷರತ್ತುಗಳನ್ನು ವಿಧಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − one =
Remember me
