ಬೆಂಗಳೂರುಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶದಲ್ಲಿನ ಅನುಪಯುಕ್ತ ವಸ್ತುಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವ ಸಂಬಂಧ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ರಾಮನ್ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ತರುಣ್ ಸೌರದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮಯ್ಯ ತಾಂತ್ರಿಕ ಸಂಸ್ಥೆ ಮತ್ತು ಬ್ಯಾಂಕಾಂಕ್‌ನ ಕಿಂಗ್ ಮಾಂಗ್‌ಕುಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಸುಸ್ಥಿರ ತಂತ್ರಜ್ಞಾನಗಳಿಗೆ ಸುಧಾರಿತ ವಸ್ತುಗಳು’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ (ಐಸಿಎಎಂಎಸ್‌ಟಿ-24) ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ದಿನನಿತ್ಯದ ಜೀವನದಲ್ಲಿ ಸುಧಾರಿತ ವಸ್ತುಗಳ ಪ್ರಾಮುಖ್ಯತೆಯನ್ನು ತಿಳಿಸಿದ ಅವರು, ವಿದ್ಯಾರ್ಥಿಗಳು ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಗೋಕುಲ ಶಿಕ್ಷಣ ಸಂಸ್ಥೆಯ ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ. ಕರಿಸಿದ್ಧಪ್ಪ ಮಾತನಾಡಿ, ಬದಲಾಗುತ್ತಿರುವ ಹವಾಮಾನದಲ್ಲಿ ಬಹಳ ಜಾಗ್ರತೆಯಿಂದ ಹೆಚ್ಚೆ ಇಡಬೇಕಿದೆ. ಮರುಬಳಕೆ ಮಾಡುವಂತಹ ಮತ್ತು ಪರಿಸರ ಸ್ನೇಹಿ ವಸ್ತುಗಳಿಗೆ ಆದ್ಯತೆ ನೀಡದಿದ್ದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪರಿಸರ ಹಾನಿಯಿಂದ ನೀರಿನಲ್ಲಿ ಖನಿಜಾಂಶಗಳು ಸೇರ್ಪಡೆಯಾಗುತ್ತಿರುವುದರಿಂದ ದಿನೇ ದಿನೇ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಮರು ಬಳಕೆ ವಸ್ತುಗಳ ಬಗ್ಗೆ ಗಂಭೀರವಾಗಿ ಗಮನಹರಿಸಬೇಕಿದೆ ಎಂದರು.
ಗೋಕುಲ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಎಂ.ಆರ್. ಸೀತಾರಾಂ ಮಾತನಾಡಿ, 1980-90 ದಶಕಗಳಿಗೆ ಹೋಲಿಸಿದರೆ ಇಂದು ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿರುವುದು ಖುಷಿಯ ವಿಚಾರ. ಆದರೆ, ತಂತ್ರಜ್ಞಾನದ ಭರದಲ್ಲಿ ಪರಿಸರ ಕಾಳಜಿ ಮರೆಯಬಾರದು. ಸುಸ್ಥಿರತೆ ಇಲ್ಲದ ಅಭಿವೃದ್ಧಿ ಪರಿಸರಕ್ಕೆ ಮಾರಕವಾಗಲಿದೆ. ಭವಿಷ್ಯದಲ್ಲಿ ಕಡಿಮೆ ಕಾರ್ಬನ್ ಉಂಟುಮಾಡುವ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.
ನಮ್ಮ ಕಾಲೇಜಿನ ದಿನಗಳಲ್ಲಿ ಮೆಟಿರಿಯಲ್ ಸೈನ್ಸ್ ತಂತ್ರಜ್ಞಾನದಲ್ಲಿ ಹೆಚ್ಚಿನ ಬೆಳವಣಿಗೆಯಾಗಿರಲಿಲ್ಲ. ನಮ್ಮ ತಂದೆಯವರು ಅದೇ ಉದ್ಯಮದಲ್ಲಿದ್ದ ಕಾರಣ ಅಂದಿನಿಂದಲೂ ರಾಮಯ್ಯ ಸಂಸ್ಥೆಯು ಹೊಸತನ, ಆವಿಷ್ಕಾರ ಮತ್ತು ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಂಗ್‌ಕುಟ್ಸ್ ತಾಂತ್ರಿಕ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ತಂತ್ರಗಾರಿಕೆ ಮತ್ತು ವಿಶೇಷ ವ್ಯವಹಾರಗಳ ಅಧ್ಯಕ್ಷರ ಸಹಾಯಕಿ ಡಾ. ಮಾಲಿನೀ ಶ್ರೀಅರಿಯನುನ್, ಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ರಾಮಯ್ಯ, ಪ್ರಾಂಶುಪಾಲ ಡಾ. ಎನ್‌ವಿಆರ್ ನಾಯ್ಡು ಮತ್ತು ಮುಖ್ಯ ಹಣಕಾಸು ಅಧಿಕಾರಿ ಜಿ. ರಾಮಚಂದ್ರ ಸೇರಿ ಹಲವರು ಉಪಸ್ಥಿತರಿದ್ದರು.
21ನೇ ಶತಮಾನವು ಸೀಮಿತ ಮಿತಿಗಳಿಗೆ ತೃಪ್ತಿಯಾಗುತ್ತಿಲ್ಲ. ಮಿತಿ ಇಲ್ಲದ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಅವಲಂಬಿಸಿದೆ. ಈ ಎರಡು ದಿನಗಳ ಸಮ್ಮೇಳನವು ಇಂತಹ ಹಲವು ಅತ್ಯಾಧುನಿಕ ತಂತ್ರಜ್ಞಾನ, ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿ ಶಿಾರಸು ಮಾಡಲಿದೆ.– ಡಾ. ಪಾರ್ಶ್ವನಾಥ್ ಎಚ್.ವಿ., ಮುಖ್ಯ ಕಾರ್ಯನಿರ್ವಾಹಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
