ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕ ವಲಯದಲ್ಲಿನ ಅರ್ಚಕರು, ಹೋಟೆಲ್ ಮತ್ತು ಬೇಕರಿ ಸಿಬ್ಬಂದಿ, ಗೃಹರಕ್ಷಕದಳ ಸಿಬ್ಬಂದಿ ಹಾಗೂ ಕಳ್ಳರಿಗೂ ಸೋಂಕು ದೃಢಪಟ್ಟಿದೆ. ದೇವರು, ತಿಂಡಿ, ತಿನಿಸು ಎಂದು ಹೊರಗೆ ಹೋಗುವವರಿಗೆ ಸೋಂಕಿನ ಆಪತ್ತು ಎದುರಾಗಿದೆ.
ಹೌದು, ಶುಕ್ರವಾರ ನಗರದಲ್ಲಿ ಕರೊನಾ ಸೋಂಕಿಗೆ ಒಳಗಾದವರಲ್ಲಿ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಬೇಕರಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ, ಶಿವಾನಂದ ವೃತ್ತದಲ್ಲಿನ ಜನಾರ್ದನ ಹೋಟೆಲ್ ಪಕ್ಕದಲ್ಲಿ ವಾಸವಿದ್ದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.
ಅನಾಥವಾಗಿ ಪ್ರಾಣಬಿಟ್ಟ ಸೋಂಕಿತ:52 ವರ್ಷದ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ಸಿಗದೆ ಕಲಾಸಿಪಾಳ್ಯ ಠಾಣೆ ಮುಂದೆ ಅನಾಥವಾಗಿ ಪ್ರಾಣಬಿಟ್ಟಿದ್ದಾನೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಯನ್ನು ಕ್ವಾರಂಟೈನ್​ನಲ್ಲಿರಿಸಲಾಗಿತ್ತು. 3 ದಿನದ ಹಿಂದೆ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದರು. ಆಗ ಮರಳಿ ಕ್ವಾರಂಟೈನ್​ಗೆ ಹೋದರೂ ಅಲ್ಲಿಯೂ ಸೋಂಕಿರುವ ಕಾರಣಕ್ಕೆ ಸೇರಿಸಿಕೊಳ್ಳದೆ ಹೊರಗೆ ಕಳುಹಿಸಲಾಗಿತ್ತು. ಎಲ್ಲಿಯೂ ಚಿಕಿತ್ಸೆ ಸಿಗದೆ ಕಲಾಸಿಪಾಳ್ಯ ಠಾಣೆ ಮುಂದೆ ವ್ಯಕ್ತಿ ಮೃತಪಟ್ಟಿದ್ದಾನೆ.
ಪೂಜಾರಿಗೂ ಕರೊನಾ:ವಿಲ್ಸನ್​ಗಾರ್ಡನ್​ನ ಅಕ್ಕಯ್ಯಮ್ಮ ದೇವಸ್ಥಾನದ ಪೂಜಾರಿಗೆ ಸೋಂಕಿರುವುದು ದೃಢವಾಗಿದೆ. ಅವರ ಕುಟುಂಬದ 7 ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿಗೆ ಮನೆಯಲ್ಲೇ ಆರೈಕೆ ಬಹಿರಂಗವಾಗಿ ಕೋವಿಡ್ ರೋಗ ಲಕ್ಷಣ ಹೊಂದಿರದ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಆಖ್ತರ್ ಸುತ್ತೋಲೆ ಹೊರಡಿಸಿದ್ದಾರೆ. ಕರೊನಾ ಸೋಂಕಿತರಿಗೆ ಆರೈಕೆ ಮಾಡುವ ವೇಳೆ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ. ಹೀಗೆ ಸೋಂಕಿಗೆ ಒಳಗಾದವರಲ್ಲಿ ಯಾವುದೇ ರೋಗ ಲಕ್ಷಣ ಕಾಣಿಸಿಕೊಳ್ಳುವುದಿಲ್ಲ. ಇವರಿಗೆ ಆರೈಕೆ ಬಗ್ಗೆ ಮಾಹಿತಿ ಇರುವುದರಿಂದ ಮನೆಯಲ್ಲಿಯೇ ಸ್ವಯಂ ಅರೈಕೆ ಮಾಡಿಕೊಳ್ಳಬಹುದು. ಆಕ್ಸಿಮೀಟರ್ ಮತ್ತು ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ನೀಡಲಾಗುತ್ತದೆ.
ಚಿಕಿತ್ಸೆ ದರ ಪಟ್ಟಿ ಪರಿಷ್ಕರಿಸಿ
ಬೆಂಗಳೂರು: ಕರೊನಾ ಸೋಂಕಿತರ ಚಿಕಿತ್ಸೆಗೆ ನಿಗದಿಪಡಿಸಿದ ದರ ಪಟ್ಟಿ ಪರಿಷ್ಕರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್​ಗೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮನವಿ ಸಲ್ಲಿಸಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜತೆಗೆ ಕೈಜೋಡಿಸಲು ಸಿದ್ಧರಿದ್ದೇವೆ. ಆದರೆ ಸಾಮಾನ್ಯ ರೋಗಿಗಳಿಗೆ ನಿಗದಿಪಡಿಸಿದ ದರ ತೀರ ಕಡಿಮೆ ಇದ್ದು, ಆಸ್ಪತ್ರೆಗಳಿಗೆ ಹೊರೆಯಾಗಲಿದೆ. ನಾವು ದರಪಟ್ಟಿ ಸಲ್ಲಿಸುವಾಗಲೇ ಕಡಿಮೆ ಶುಲ್ಕ ಅಂತಿಮಗೊಳಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ ಶೇ. 35 ಕಡಿತ ಮಾಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಮತ್ತೊಮ್ಮೆ ದರ ಪರಿಷ್ಕರಿಸಿ ಹೆಚ್ಚಳ ಮಾಡಬೇಕು ಎಂದು ಸಂಘಟನೆ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ಸಾಮಾನ್ಯ ವಾರ್ಡ್​ಗೆ -ಠಿ;15 ಸಾವಿರ, ಆಕ್ಸಿಜನ್ ಸೌಲಭ್ಯ ಇರುವ ವಾರ್ಡ್​ಗೆ -ಠಿ;20 ಸಾವಿರ, ವೆಂಟಿಲೇಟರ್​ರಹಿತ ಐಸೊಲೇಷನ್ ಐಸಿಯು ವಾರ್ಡ್​ಗೆ -ಠಿ;25 ಸಾವಿರ, ವೆಂಟಿಲೇಟರ್​ಸಹಿತ ಐಸೋಲೇಷನ್ ವಾರ್ಡ್​ಗೆ -ಠಿ;35 ಸಾವಿರ ನಿಗದಿಪಡಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ದರವನ್ನು ಕ್ರಮವಾಗಿ -ಠಿ;10 ಸಾವಿರ, -ಠಿ;12 ಸಾವಿರ, -ಠಿ;15 ಸಾವಿರ ಹಾಗೂ -ಠಿ;25 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. ಪ್ರತ್ಯೇಕ ವಾರ್ಡ್ ವ್ಯವಸ್ಥೆಯೊಂದಿಗೆ ರೋಗಿಗಳಿಗೆ ಸೌಲಭ್ಯ ಹಾಗೂ ಸಿಬ್ಬಂದಿಗೆ ಅಗತ್ಯ ಪರಿಕರಗಳ ವ್ಯವಸ್ಥೆ ಮಾಡಲು ಅಧಿಕ ವೆಚ್ಚವಾಗಲಿದೆ. ಹೀಗಾಗಿ ದರ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಬೇಕು ಎಂದು ಕೋರಿದ್ದಾರೆ.
ರಜೆ ಬೇಕಾ, ತಗೊಳ್ಳಿ; ಸಂಬಳ ಮಾತ್ರ ಕೇಳ್ಬೇಡಿ; ನೌಕರರಿಗೆ ಕೆಎಸ್​ಆರ್​ಟಿಸಿ ಆಫರ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
