ಬೆಂಗಳೂರು:ಬ್ರ್ಯಾಂಡ್ ಬೆಂಗಳೂರು ಹಾಗೂ ಕರ್ನಾಟಕ ಐಟಿ- ಬಿಟಿ ಮಾತ್ರವಲ್ಲ. ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಹಿಡಿದು ಉದ್ಯಮ-ವಹಿವಾಟು, ಸುಗಮ ವ್ಯವಹಾರಗಳಲ್ಲಿ ಹಲವು ಮೊದಲುಗಳನ್ನು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಕರ್ನಾಟಕದ ಶಕ್ತಿ-ಸಾಮರ್ಥ್ಯ ಅನಾವರಣಗೊಳಿಸಿದರು.
ಅರಮನೆ ಆವರಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ- 2022 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವರ್ಚುವಲ್ ವೇದಿಕೆ ಮೂಲಕ ಬುಧವಾರ ಉದ್ಘಾಟನಾ ಭಾಷಣ ಮಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಜಾಗತಿಕವಾಗಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು. ಮೃದು ಭಾಷೆ, ಎಲ್ಲರೊಡನೆ ಬೆರೆಯುವ ಕನ್ನಡಿಗರ ಸ್ವಭಾವ, ಸಂಪ್ರದಾಯ-ತಂತ್ರಜ್ಞಾನ, ಪ್ರಕೃತಿ-ಸಂಸ್ಕೃತಿ ಸಂಗಮದ ನೆಲೆ. ಆರೋಗ್ಯಪೂರ್ಣ ಸ್ಪರ್ಧೆ, ಸಹಕಾರ, ಕೇಂದ್ರದ ನೀತಿ-ನಿರ್ಧಾರಗಳಿಗೆ ಅನುಗುಣವಾದ ನೀತಿಗಳು, ಉಪಕ್ರಮಗಳನ್ನು ಜಾರಿಗೊಳಿಸುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಕರ್ನಾಟಕ ನಿದರ್ಶನವಾಗಿದೆ ಎಂದು ಮೋದಿ ಹಾಡಿ ಹೊಗಳಿದರು.ಸುಭದ್ರ ಸರ್ಕಾರ, ಬೆಳವಣಿಗೆಯಲ್ಲಿ ವೇಗ, ಸ್ಥಿರತೆ, ನುರಿತ ಮಾನವ ಸಂಪನ್ಮೂಲ, ಪ್ರತಿಭಾವಂತ ಯುವ ಸಂಪತ್ತು. ಜತೆಗೆ ಡಬಲ್ ಇಂಜಿನ್ ಸರ್ಕಾರದ ಬಲವಿರುವ ಕಾರಣ ಬಂಡವಾಳ ಹೂಡಿಕೆಗೆ ಮುಂದೆ ಬರಬೇಕು ಎಂದು ಉತ್ತೇಜನ ನೀಡಿದರು.
ಅಭಿವೃದ್ಧಿಗೆ ಸಾಥ್:ಕರ್ನಾಟಕದಲ್ಲಿ ಹೂಡಿಕೆಯಾದರೆ ದೇಶದ ಅಭಿವೃದ್ಧಿಗೆ ಕೈಜೋಡಿಸಿದಂತಾಗುತ್ತದೆ. ಭಾರತದಲ್ಲಿ ಹೂಡಿಕೆ ಎಂದರೆ ಪ್ರಜಾಪ್ರಭುತ್ವದ ಸದೃಢತೆ, ಕೋಟ್ಯಂತರ ಜನರ ಬದುಕಿನಲ್ಲಿ ಬದಲಾವಣೆ, ಹೂಡಿದ ಬಂಡವಾಳ ಸುರಕ್ಷಿತ. ದ್ವಿಗುಣ ಬೆಳವಣಿಗೆ, ಜಾಗತಿಕವಾಗಿ ದೊಡ್ಡ ಕೊಡುಗೆ ನೀಡಲು ಶಕ್ತರಾಗುವಿರಿ ಎಂದು ಮೋದಿ ಹುರಿದುಂಬಿಸಿದರು.
ಅಡೆತಡೆ ನಿವಾರಣೆ:ನಾವು ವ್ಯಾಪಾರ ವ್ಯವಹಾರಕ್ಕೆ ಇರುವ ಕಾನೂನಾತ್ಮಕ ಅಡೆತಡೆಗಳನ್ನು ತೆಗೆದುಹಾಕಿದ್ದೇವೆ. ರೈಲು, ವಿಮಾನ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಿದ್ದೇವೆ. ಇನ್ನೊಂದೆಡೆ ವಿಶ್ವದ ಅತಿದೊಡ್ಡ ವೈದ್ಯಕೀಯ ವಿಮಾ ಯೋಜನೆಯನ್ನು ಒದಗಿಸುತ್ತದೆ. ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾ್ಯನ್ ಮೂಲಕ ದೇಶದಲ್ಲಿ ಹೂಡಿಕೆ ಮಾದರಿಗಳನ್ನು ಬದಲಾಯಿಸಿದೆ. ಯೋಜನೆಯು ಮೂರು ಆಯಾಮಗಳಲ್ಲಿ ಕೆಲಸ ಮಾಡಿದೆ. ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಯೋಜನೆಯ ಅನುಷ್ಠಾನಕ್ಕೆ ವೇಗ ನೀಡುವುದು, ವಿಶ್ವದರ್ಜೆಯ ಉತ್ಪನ್ನವನ್ನು ತಯಾರಿಸುವುದನ್ನು ಖಾತ್ರಿಪಡಿಸುವ ಮೂಲಕ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಮೋದಿ ವಿವರಣೆ ನೀಡಿದರು. ರಾಜ್ಯಪಾಲ ಥಾವರ್​ಚಂದ್ ಗೆಹಲೋತ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ಪಿಯೂಷ್ ಗೋಯಲ್, ರಾಜೀವ್ ಚಂದ್ರಶೇಖರ್, ಉದ್ಯಮಿಗಳು, ರಾಜ್ಯದ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಂಟಿಬಿ ನಾಗರಾಜ್, ಪ್ರಮೋದಾದೇವಿ ಒಡೆಯರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಆಯುಕ್ತೆ ಗುಂಜನ್ ಕೃಷ್ಣಾ ಉಪಸ್ಥಿತರಿದ್ದರು.
ಹಿಗ್ಗಲಿದೆ ಹೂಡಿಕೆ ಗಾತ್ರ:2012ರಲ್ಲಿ ನಡೆದ ಸಮಾವೇಶದಲ್ಲಿ 7.6 ಲಕ್ಷ ಕೋಟಿಗೆ ಎಂಒಯು ಆಗಿತ್ತು. ಆಗಿನ ಸಂದರ್ಭದಲ್ಲಿ ದೇಶದಲ್ಲಿ ಸಂಚಲನ ಮೂಡಿಸಿತ್ತು. ಈ ವರ್ಷ ಮೊದಲ ದಿನವೇ 7.60 ಲಕ್ಷ ಕೋಟಿ ರೂ. ಮೊತ್ತದ ಒಡಂಬಡಿಕೆ ಆಗಿದ್ದು, ಇದು ದೊಡ್ಡದಾಗಿದೆ, ಇದು ಇಷ್ಟಕ್ಕೆ ಸೀಮಿತವಾಗದೆ ದೊಡ್ಡ ಸಂಖ್ಯೆ ಮುಟ್ಟಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಈ ಬಾರಿ ಬೆಂಗಳೂರು ಹೊರತು ಬೇರೆ ನಗರಗಳಲ್ಲಿ ಹೆಚ್ಚು ಹೂಡಿಕೆಗೆ ಒಡಂಬಡಿಕೆಯಾಗಿದೆ. 2025ರ ಜನವರಿಯಲ್ಲಿ ಮುಂದಿನ ಸಮಾವೇಶ ಆಯೋಜಿಸಲಾಗುತ್ತದೆ. ಈ ಬಾರಿ ಆದ ಒಡಂಬಡಿಕೆ ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನವಾಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಅನುಮೋದನೆಗೆ 3 ತಿಂಗಳ ಕಾಲಮಿತಿ:ಇನ್ವೆಸ್ಟ್ ಕರ್ನಾಟಕ 2022ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಇಂದು ಸಹಿ ಹಾಕಲಾಗಿರುವ ಎಲ್ಲ ಬಂಡವಾಳ ಹೂಡಿಕೆಯ ಒಪ್ಪಂದಗಳನ್ನು ಮುಂದಿನ ಮೂರು ತಿಂಗಳೊಳಗೆ ಅನುಮೋದನೆ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೊಷಿಸಿದರು. ಗರಿಷ್ಟ ಮಟ್ಟದ, ದಕ್ಷ ಹಾಗೂ ಉತ್ತಮ ಗುಣಮಟ್ಟದ ಉತ್ಪಾದಕತೆ ರಾಜ್ಯದಲ್ಲಿ ಆಗಬೇಕಿದೆ. ಆರ್ಥಿಕತೆಯಲ್ಲಿ ಪರಿಣಾಮ ಮಾತ್ರ ಮಹತ್ವದ ಪಾತ್ರ ವಹಿಸುತ್ತದೆ. ಈ ಬಂಡವಾಳಗಳು ವಾಸ್ತವವಾಗಿ ಬದಲಾಯಿಸುವುದೇ ಸರ್ಕಾರದ ಮುಂದಿನ ಗುರಿಯಾಗಿದೆ, ಈ ವಿಷಯದಲ್ಲಿ ನಾವು ಗಂಭೀರವಾಗಿದ್ದೇವೆ ಎಂದರು. 2.80 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಯೋಜನೆಗಳಿಗೆ ಈಗಾಗಲೆ ಸರ್ಕಾರ ಅನುಮೋದನೆ ನೀಡಿದೆ. ಉಳಿದ ಬಂಡವಾಳ ಹೂಡಿಕೆಯ ಯೋಜನೆಗಳ ಬಗ್ಗೆ ಸರ್ಕಾರ ಅನುಮೋದನೆ ನೀಡಲು ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸದ್ದು ಮಾಡಿದ ಕಾಂತಾರ:ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಬಿಸಿ ಚರ್ಚೆಯಾಗುತ್ತಿದೆ. ಗಲ್ಲಾ ಪೆಟ್ಟಿಗೆ ಭರ್ತಿಯಲ್ಲಿ ಹೊಸ ದಾಖಲೆ ಸೃಷ್ಟಿಸಿರುವುದು ಹೂಡಿಕೆದಾರರ ಸಮಾವೇಶದಲ್ಲೂ ಸದ್ದು ಮಾಡಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಕಾಂತಾರ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿ, ದೇಸಿ ಸಂಸ್ಕೃತಿ ಆಚರಣೆಯನ್ನು ಹೇಗೆ ಬಳಸಿಕೊಂಡು ಪ್ರಸಿದ್ಧಿಯಾಗಬಹುದು ಎಂಬುವುದಕ್ಕೆ ಕಾಂತಾರ ನಿದರ್ಶನ. ಅಷ್ಟು ಮಾತ್ರವಲ್ಲದೆ 8-10 ಕೋಟಿ ರೂ. ವೆಚ್ಚ ಮಾಡಿ 300 ಕೋಟಿ ರೂ. ಸಂಗ್ರಹಿಸಿ ದಾಖಲೆ ಮಾಡಿದೆ. ಇದು ಕರ್ನಾಟಕದ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸಿತು. ಹೂಡಿಕೆದಾರರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಹುಣಸೆಹಣ್ಣಿಗೆ ಆಸೆಪಟ್ಟು ಪ್ರಾಣ ಕಳೆದುಕೊಂಡ ಮಹಿಳೆ; ಹಣ್ಣು ಕೈಗೆ ಸಿಕ್ತು ಎನ್ನುವಷ್ಟರಲ್ಲೇ ಜೀವವೇ ಹೋಯ್ತು!

ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
