ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ಜಾನಪದ ಕ್ರೀಡೆಯಾದ ಕಂಬಳದ ವೈಭವ ಐಟಿ ಸಿಟಿಯ ಜನರನ್ನು ಹೊಸ ಮಾಯಾಲೋಕದಲ್ಲಿ ವಿಹರಿಸುವಂತೆ ಮಾಡಿತು. ಅರಮನೆ ಮೈದಾನದಲ್ಲಿ ಮೈದಾಳಿದ್ದ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಕರಾವಳಿಯ ಗಡಿ ದಾಟಿ ಬೆಂಗಳೂರು ಮೂಲಕ ಜಾಗತಿಕ ಮಟ್ಟದಲ್ಲಿ ರಾರಾಜಿಸುವಂತೆ ವೇದಿಕೆ ಸೃಷ್ಟಿಸಿತು.
ಇಡೀ ಕರಾವಳಿಯ ಪ್ರಮುಖರು ಒಟ್ಟುಗೂಡಿ ತುಳುನಾಡಿನ ಅಸ್ಮಿತೆಯ ಪ್ರತೀಕವಾದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಯತ್ನಕ್ಕೆ ಸಮಾಜದ ವಿವಿಧ ಕ್ಷೇತ್ರಗಳ ಜನರು ಕೈಜೋಡಿಸಿರುವುದು ಕಂಬಳದ ಹೊಂಬೆಳಕು ಹೊಸ ಇತಿಹಾಸವನ್ನು ಸೃಷ್ಟಿಸಿತು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಅದ್ದೂರಿ ಚಾಲನೆ ದೊರೆಯಿತು. ಬೆಳಗ್ಗೆ 10ರಿಂದಲೇ ಸಮಾರಂಭ ನಡೆಯುವ ಸ್ಥಳದತ್ತ ಧಾವಿಸಿ ಬಂದ ಸಾವಿರಾರು ಜನರು ಕೋಣಗಳು ಓಡುವ ಕರೆ ನೋಡಿಯೇ ರೋಮಾಂಚನಕ್ಕೆ ಒಳಗಾದರು. ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆತೊಡನೆ ತುಳುನಾಡ ವೈಭವದ ಸದ್ದು ಮೈದಾನದೆಲ್ಲೆಡೆ ಮಾರ್ದನಿಸಿತು. ವೇದಿಕೆಗೆ ನಟ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿತ್ತು. ವಿಶೇಷವೆಂದರೆ ಪುನೀತ್ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು. ಇದಕ್ಕೆ ತುಳುನಾಡಿನ ರಾಜಕಾರಣಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಾಕ್ಷಿಯಾದರು.
ಕಂಬಳಕ್ಕೆ ಶುಭ ಕೋರಿದ ಪ್ರತಿಯೊಬ್ಬ ಅತಿಥಿಗಳು ತುಳುನಾಡಿನ ಸಂಸ್ಕೃತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ ಮಾತುಗಳನ್ನಾಡಿದರು. ಕರಾವಳಿಗೆ ಸೀಮಿತವಾಗಿರುವ ಕಂಬಳವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಸಲಹೆ ಕೇಳಿಬಂತು. ಇದಕ್ಕೆ ಕಳಸ ಇಟ್ಟಂತೆ ಭವಿಷ್ಯದಲ್ಲಿ ಕಂಬಳ ಪ್ರೀಮಿಯರ್ ಲೀಗ್ ನಡೆಸುವ ೋಷಣೆ ಮೊಳಗಿತು. ಇದರ ಬೆನ್ನಲ್ಲೇ ಮಳೆಯ ಸಿಂಚನವಾಗುತ್ತಿದ್ದಂತೆ ಕಂಬಳದ ಓಟಕ್ಕೆ ಅಧಿಕೃತ ಚಾಲನೆ ದೊರೆಯಿತು.ಕೋಣಗಳು ಓಡುವ ಕರೆಗೆ ‘ರಾಜ-ಮಹಾರಾಜ’ ನಾಮಕರಣ ಮಾಡಿದ್ದು, ಅದರ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಜನಸ್ತೋಮ ಸೇರಿತ್ತು. ಓಟದ ತಾಲೀಮು ಆರಂಭಗೊಂಡಂತೆ ಕೊಂಬು, ಕಹಳೆ, ಬ್ಯಾಂಡ್ ಹಾಗೂ ತಮಟೆ ಸದ್ದು ಓಟಗಾರರನ್ನು ಉತ್ತೇಜಿಸಿತು.
ಜೋಡಿ ಕೋಣಗಳ ರಾಜಠೀವಿ:
ಓಟ ನಡೆಯುವ ಕರೆ ಜಾಗಕ್ಕೆ ಒಂದೊಂದಾಗಿ ಕೋಣದ ಜೋಡಿಗಳನ್ನು ಅದರ ಮಾಲೀಕರು ಮೆರವಣಿಗೆ ಮೂಲಕ ಕರೆತಂದರು. ನೋಡುಗರ ಹರ್ಷೋದ್ಘಾರ, ಚಪ್ಪಾಳೆ, ಶಿಳ್ಳೆಯ ಸದ್ದನ್ನು ದೂರ ಮಾಡುವಂತೆ ಜೋಡಿ ಕೋಣಗಳು ರಾಜಠೀವಿಯಿಂದ ನಡೆದು ಬಂದು ಕರೆ ಜಾಗದಲ್ಲಿ ನಿಂತವು. ಅವುಗಳನ್ನು ಆರೈಕೆ ಮಾಡುವ ಮಂದಿ ಹಾಗೂ ಕೋಣ ಓಡಿಸುವ ಓಟಗಾರರ ಹೆಸರು ಹೇಳಿದಾಗಲೆಲ್ಲ ಜನರಿಂದ ಸಂಭ್ರಮಿಸಿ ಪ್ರೋತ್ಸಾಹಿಸಿದರು.
ಸಾಂಸ್ಕೃತಿಕ ವೈಭವ:
ಒಂದೆಡೆ ಕರೆಯಲ್ಲಿ ಕೋಣಗಳ ಒಟದ ಝಳಕ್ ನಡೆದಿದ್ದರೆ, ಇನ್ನೊಂದೆಡೆ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನರು ಕಣ್ತುಂಬಿಕೊಂಡರು. ಕರಾವಳಿಯ ಸಿರಿತನಕ್ಕೆ ಸಾಕ್ಷಿಯಾದ ಯಕ್ಷಗಾನದ ಜತೆಗೆ ಹಾಸ್ಯ ನಾಟಕ, ಹಾಡುಗಾರಿಕೆ, ನೃತ್ಯ ಕಾರ್ಯಕ್ರಮ ಕಳೆಗಟ್ಟಿದವು. ಮೈದಾನದ ಅಲ್ಲಲ್ಲಿ ತುಳುನಾಡ ಸಂಸ್ಕೃತಿ ಬಿಂಬಿಸುವ ತಳಿರು ತೋರಣ, ನಾಗಾರಾಧನೆ, ದೈವರಾಧಾನೆ, ದೇವತಾರಾಧನೆಗಳ ಪ್ರತಿಕೃತಿ ಗಮನ ಸೆಳೆದರು. ವಿಶೇಷ ಆಕರ್ಷಣೆಯಾಗಿದ್ದ ಹುಲಿ ವೇಷಧಾರಿಗಳು ತಮ್ಮ ವಿಶಿಷ್ಟ ನೃತ್ಯದ ಮೂಲಕ ಚಿಣ್ಣರಿಂದ ಹಿಡಿದು ವೃದ್ಧರವರೆಗೂ ಖುಷಿ ಕೊಟ್ಟರು. ಹಲವು ಮಂದಿ ಇವುಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಧನ್ಯತಾಭಾವ ಮೆರೆದರು.
ಕರಾವಳಿ ತಿಂಡಿ-ತಿನಿಸು ಸವಿದ ಜನ:ಕಂಬಳ ಉತ್ಸವಕ್ಕೆ ಆಗಮಿಸಿದ್ದ ಎಲ್ಲ ಜನರಿಗೂ ಮಧ್ಯಾಹ್ನದ ಉಚಿತವಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಆದರೂ ಜನರು ುಡ್ ಕೋರ್ಟ್‌ಗಳಲ್ಲಿದ್ದ ಮಳಿಗೆಗಳಲ್ಲಿ ಕರಾವಳಿಯ ವಿಶಿಷ್ಟ ತಿಂಡಿ-ತಿನಿಸುಗಳನ್ನು ಸವಿಯಲು ಮರೆಯಲಿಲ್ಲ. ಕುಟುಂಬ ಸಮೇತರಾಗಿ ಆಗಮಿಸಿದ್ದವರು ಮೀನೂಟ ರುಚಿ ಸವಿದರು. ಸಿಹಿ ತಿನಿಸು, ಐಸ್‌ಕ್ರೀಂ ಹಾಗೂ ಚಾಟ್ಸ್ ಕೂಡ ಸವಿದ ಜನ ಕರಾವಳಿಯ ಭಕ್ಷ್ಯಗಳಿಗೆ ಸಲಾಂ ಹೇಳಲು ಮರೆಯಲಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eight =
Remember me
