ಬೆಂಗಳೂರು:ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಉಪೇಂದ್ರ ವಿರುದ್ಧ ಸಿ.ಕೆ, ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾತಿ ನಿಂದನೆ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ ವಿಚಾರಣೆಗೂ ಹಾಜರಾಗದೇ ಉಪೇಂದ್ರ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಎಫ್​ಐಆರ್​ಗೆ ಕಾರಣ, ನಟ ಉಪೇಂದ್ರ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಉಲ್ಲೇಖಿಸಿ ದೂರು ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೂರು ಸ್ವೀಕರಿಸಿದ ಪೊಲೀಸರು, ನಟನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:ನಟ ಉಪೇಂದ್ರಗೆ ನೋಟಿಸ್​ ಜಾರಿ; ತಕ್ಷಣ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ ಪೊಲೀಸರು
ಇದಾದ ಬಳಿಕ ಇಂದು ವಿಚಾರಣೆಗೆ ಉಪೇಂದ್ರ ಹಾಜರಾಗದ ಹಿನ್ನೆಲೆಯಲ್ಲಿ, ಅವರ ಮನೆಗೇ ಪೊಲೀಸರು ತೆರಳಿದ್ದರು. ಆದರೆ ಅಲ್ಲೂ ಅವರು ಪತ್ತೆ ಆಗಿರಲಿಲ್ಲ. ಇದೀಗ ಉಪೇಂದ್ರ, ಹೈಕೋರ್ಟ್‍ ಮೆಟ್ಟಿಲೇರಿದ್ದು FIRಅನ್ನೇ ರದ್ದು ಮಾಡುವಂತೆ ಕೋರಿದ್ದಾರೆ.
ಇದನ್ನೂ ಓದಿ:ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ?; ಇಷ್ಟೊಂದು ಧ್ವೇಷ ಯಾಕೆ: ನಟ ಉಪೇಂದ್ರ
“ಇನ್ನೋಸೆಂಟ್‌ ಹೃದಯಗಳಿಂದಲೇ ನಿಜವಾದ ಬದಲಾವಣೆ ಸಾಧ್ಯ. ಇನ್ನೋಸೆಂಟ್‌ ಅಂದರೆ ಮುಗ್ಧತೆ ಇದೆಯಲ್ಲಾ ಅದೇ ಸತ್ಯದ ಮನಸ್ಸು. ಇನ್ನೋಸೆಂಟ್‌ ಮನಸ್ಸುಗಳು ಇಲ್ಲಿ ಜಾಯಿನ್‌ ಆಗಲಿ ಮಾತನಾಡಲಿ, ಹೇಳುವುದಕ್ಕೆ ಇಷ್ಟಪಡ್ತೀನಿ. ಅವರಿಂದ ನಮಗೆ ತುಂಬಾ ಬೆನಿಫಿಟ್‌ ಇದೆ, ಸಜೆಷನ್‌ ಕೂಡ ಉತ್ತಮವಾಗಿರುತ್ತದೆ. ಏನೋ ಒಂದು ಕೇರ್‌ಲೆಸ್‌ ಆಗಿ ಏನೋ ಒಂದು ಸಜೆಸ್ಟ್‌ ಮಾಡೋಣ, ಕೇರ್‌ಲೆಸ್‌ ಆಗಿ ಅವಹೇಳನ ಮಾಡುವುದಾಗಲಿ, ಏನೋ ನಾವು ಮಾತನಾಡಬೇಕು ಟೈಮ್‌ ಇದೆ ಎಂದು ಬಾಯಿಗೆ ಬಂದಂತೆ ಕಮೆಂಟ್‌ ಮಾಡೋಣ ಎನ್ನುವವರೂ ಇದ್ದಾರೆ. ಅಂತಹವರನ್ನ ಬಿಡಿ, ಅವರನ್ನು ಏನೂ ಮಾಡೋಕೆ ಆಗಲ್ಲ. “ಊರು ಎಂದಮೇಲೆ ಹೊಲೆಗೇರಿ ಇರುತ್ತೆ”, ಆ ತರಹ ಇಂಥವರೂ ಇರುತ್ತಾರೆ ಜಗತ್ತಲ್ಲಿ ಏನೂ ಮಾಡೋಕಾಗಲ್ಲ. ಅವರನ್ನೆಲ್ಲಾ ಬಿಟ್ಟಾಕೋಣ ಅದನ್ನು ಓದೋದು ಬೇಡ ನಾವು. ಸ್ವಲ್ಪ ನಾವು ಹೇಳ್ತಿರೋದು ಇಂಥ ಒಂದು ಪ್ಯೂರ್‌ ಜನರನ್ನ ಪ್ರೀತಿಸೋವಂಥದ್ದು, ಜನರನ್ನು ಪ್ರೀತಿಸುವುದೇ ಜನಾರ್ಧನನ ಪೂಜೆ ಎನ್ನುತ್ತಾರೆ. ಜನರನ್ನು ಪ್ರೀತಿಸುವುದೇ ದೇಶಪ್ರೇಮ ಎನ್ನುತ್ತಾರೆ’ ಎಂದು ಹೇಳಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
