ಬೆಂಗಳೂರು:ಬಿ.ಎಸ್. ಯಡಿಯೂರಪ್ಪ ಅವರಿಗೆ ಈಗ ಮೇಲ್ಮನೆ ಚುನಾವಣೆಯ ಸವಾಲು ಎದುರಾಗಿದೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅನಿಲ್​ಕುಮಾರ್ ರಂಗಪ್ರವೇಶದಿಂದ ಚುನಾವಣೆ ರಂಗುಪಡೆದುಕೊಂಡಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಯುವುದರಿಂದ ಕ್ರಾಸ್ ವೋಟ್ ಮಾಡುವುದು ಸುಲಭ. ಸಚಿವ ಸಂಪುಟ ವಿಸ್ತರಣೆಯಿಂದ ಆಗಿರುವ ಅಸಮಾಧಾನದ ಲಾಭ ಪಡೆಯಬೇಕು ಎಂಬುದು ಜೆಡಿಎಸ್​ನ ರಣತಂತ್ರವಾಗಿದ್ದು, ಅನಿಲ್​ಕುಮಾರ್ ಮೂಲಕ ಬಿಜೆಪಿಗೆ ಚೆಕ್​ವೆುಟ್ ಕೊಟ್ಟಿದೆ. ಆದ್ದರಿಂದಲೇ ಮತಗಳು ಚದುರದಂತೆ ಎಚ್ಚರಿಕೆಯ ಹೆಜ್ಜೆ ಇಡುವ ಮೂಲಕ ಸವದಿಯನ್ನು ಗೆಲ್ಲಿಸಬೇಕಾಗಿದೆ.
9 ಮತ ಕ್ರಾಸ್ ಆದರೂ ಸಾಕು:ಬಿಜೆಪಿಯ 9 ಮತ ಕ್ರಾಸ್ ಆದರೂ ಸವದಿ ಗೆಲುವು ಸಾಧ್ಯವಾಗುವುದಿಲ್ಲ. ಬಿಜೆಪಿ 14 ಹೆಚ್ಚಿನ ಮತಗಳನ್ನು ಹೊಂದಿದೆ. ಮತ ವಿಭಜನೆ ಕಷ್ಟದ ಕೆಲಸ. ಆದರೆ ಅತೃಪ್ತಿಯ ದಾಳ ಇಟ್ಟು 9 ಕ್ರಾಸ್ ವೋಟ್ ಮಾಡಿಸಿದರೆ ಸೋಲಿಸಬಹುದು. ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡೇ ಸಂಪುಟದಲ್ಲಿ ಆರು ಖಾಲಿ ಸ್ಥಾನಗಳನ್ನು ಇಟ್ಟುಕೊಂಡಿದ್ದಾರೆ. ಖಾಲಿ ಹುದ್ದೆಗಳ ಆಸೆ ಬಿತ್ತುವ ಮೂಲಕ ಮತಗಳು ಚದುರದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಇತ್ತ ಅವಿರೋಧ ಆಯ್ಕೆಯ ಖುಷಿಯಲ್ಲಿದ್ದ ಸವದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕಣಕ್ಕೆ ಇಳಿದಿದ್ದರಿಂದ ಚಿಂತೆಗೀಡಾಗಿದ್ದು, ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
