ಬೆಂಗಳೂರು:ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇನ್ನೂ ಜ್ವಲಂತವಾಗಿದ್ದು, ಮೈತ್ರಿ ಬಗ್ಗೆ ಸಾರ್ವಜನಿಕ ವಲದಯಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿವೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಈ ಪ್ರಕರಣ ದೊಡ್ಡ ಮುಜುಗರ ಉಂಟು ಮಾಡಿರುವುದರಿಂದ ಮೈತ್ರಿ ಮುಂದುವರಿಯುವ ಅನುಮಾನ ಖುದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರಲ್ಲಿತ್ತು. ಆದರೆ ಮೇಲ್ಮನೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯುವುದು ನಿಕ್ಕಿಯಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅದನ್ನು ಖಚಿತಪಡಿಸಿದ್ದಾರೆ. ಹೀಗಾಗಿ ಜೆಡಿಎಸ್ ನಿಟ್ಟುಸಿರು ಬಿಟ್ಟಿದೆ. ಮೈತ್ರಿ ಯಾವುದೇ ಅಡ್ಡಿ ಆತಂಕವಿಲ್ಲದೇ ಮುಂದುವರಿಯಲಿದ್ದು, ಬಿಜೆಪಿ-ಜೆಡಿಎಸ್ ಮೇಲ್ಮನೆ ಚುನಾವಣೆಯನ್ನು ಒಟ್ಟಿಗೆ ಎದುರಿಸಲಿವೆ.
ಮೂರು ಶಿಕ್ಷಕರ ಕ್ಷೇತ್ರ, ಮೂರು ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಪ್ರಜ್ವಲ್ ಪ್ರಕರಣದ ಮುಜುಗರದಿಂದ ಪಾರಾಗಲು ಉಭಯ ಪಕ್ಷಗಳು ಎಚ್ಚರಿಕೆ ಹೆಜ್ಜೆ ಇಡಲು ಹೆಣಗಾಡುತ್ತಿವೆ.
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ಪ್ರಜ್ಞಾವಂತ ಮತದಾರರ ಮೇಲೆ ಪರಿಣಾಮ ಬೀರದಂತೆ ಚುನಾವಣೆ ನಡೆಸಲು ತಂತ್ರಗಾರಿಕೆ ರೂಪಿಸಲು ಚಿಂತಕರ ಚಾವಡಿಯಲ್ಲಿ ಚರ್ಚಿಸುತ್ತಿವೆ.
ಈ ಪ್ರಕರಣ ಎರಡೂ ಪಕ್ಷಗಳ ನಾಯಕರಿಗೆ ಬಿಸಿ ತುಪ್ಪವಾಗಿದ್ದು, ಇಡೀ ಚುನಾವಣಾ ಪ್ರಚಾರದ ತಂತ್ರಗಾರಿಕೆಯನ್ನೇ ಬದಲು ಮಾಡಲು ಗಂಭೀರ ಆಲೋಚನೆಯಲ್ಲಿ ತೊಡಗಿವೆ.
ಪ್ರತಿಪಕ್ಷ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆಯಲ್ಲೂ ಪ್ರಜ್ವಲ್ ಪ್ರಕರಣವನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಮೈತ್ರಿ ಪಕ್ಷಗಳಿಗೆ ಈ ಚುನಾವಣೆ ಸವಾಲಾಗಿದೆ.
ಕಾಂಗ್ರೆಸ್ ಕೊಡುವ ಕೌಂಟರ್‌ಗಳಿಗೆ ಎನ್ ಕೌಂಟರ್ ಕೊಡಲು ಮೈತ್ರಿ ಪಕ್ಷಗಳಲ್ಲಿ ತಯಾರಿ ನಡೆದಿದೆ. ಪ್ರಜ್ವಲ್ ಪ್ರಕರಣದಿಂದ ಮತದಾರರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಶಿಕ್ಷಕರು, ಪದವೀಧರರ ಸಮಸ್ಯೆ, ಶಿಕ್ಷಕರ ವರ್ಗಾವಣೆ ನೀತಿ, ಪದವೀಧರರಿಗೆ ಉದ್ಯೋಗಾವಕಾಶ, ಕೌಶಲ ತರಬೇತಿ, ವೇತನ ಆಯೋಗ ಜಾರಿ, ಹೊಸ ಶಿಕ್ಷಣ ನೀತಿ ರದ್ದು…ಮತ್ತಿತರ ವಿಷಯಗಳನ್ನು ಮುನ್ನೆಲೆಗೆ ತರಲು ಚಿಂತನೆ ನಡೆಸಿವೆ ಎನ್ನಲಾಗಿದೆ.
ಸಾಮಾನ್ಯವಾಗಿ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವುದರಿಂದ ಜೆಡಿಎಸ್ ಈ ಚುನಾವಣೆಯಲ್ಲಿ ಬಿಜೆಪಿ ನಾಯಕರನ್ನೇ ಹೆಚ್ಚು ಹೆಚ್ಚು ಪ್ರಚಾರದಲ್ಲಿ ಬಳಸಿಕೊಳ್ಳಲು ಆಲೋಚನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seven =
Remember me
