ಬೆಂಗಳೂರು:ದೇಶದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್​ಸಿ 2019ನೇ ಸಾಲಿನ ಫಲಿತಾಂಶ ಇಂದು (ಮಂಗಳವಾರ) ಪ್ರಕಟವಾಗಿದ್ದು, ಕರ್ನಾಟಕದಿಂದ 38ಕ್ಕೂ ಹೆಚ್ಚು ಮಂದಿ ಪಾಸ್​ ಆಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ರಾಜ್ಯದಿಂದ 23 ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್​ ಆಗಿದ್ದರು. ಈ ಬಾರಿ ಉತ್ತೀರ್ಣರಾಗಿರುವ ಪ್ರಮಾಣ ಸ್ವಲ್ಪ ಹೆಚ್ಚಳವಾಗಿದೆ. ದೇಶಕ್ಕೆ 71ನೇ ರ‍್ಯಾಂಕ್ ಪಡೆದಿರುವ ಬಿ.ಯಶಸ್ವಿನಿ ಕರ್ನಾಟಕಕ್ಕೆ ಟಾಪರ್​. ಆದರೆ, ಇಡೀ ದೇಶಕ್ಕೆ ಪುರುಷ ಅಭ್ಯರ್ಥಿಗಳಲ್ಲಿ ಪ್ರದೀಪ್​ ಸಿಂಗ್ ಹಾಗೂ ಮಹಿಳಾ ಅಭ್ಯರ್ಥಿಗಳಲ್ಲಿ ಪ್ರತಿಭಾ ವರ್ಮಾ ಟಾಪರ್ಸ್​ಗಳಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿರಿಅಮೆರಿಕ ಕೆಲಸಕ್ಕೆ ಗುಡ್​ ಬೈ ಹೇಳಿ ಕನ್ನಡದಲ್ಲೇ ಯುಪಿಎಸ್​ಸಿ ಪರೀಕ್ಷೆ ಬರೆದು ಜಯ ಸಾಧಿಸಿದ ಯುವಕ!
2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಕರ್ನಾಟಕ ಸಾಧಕರ ಪಟ್ಟಿ ಹೀಗಿದೆ. ಬಿ.ಯಶಸ್ವಿನಿ- 73ನೇ ರ‍್ಯಾಂಕ್, ಎಚ್​.ವಿನೋದ್​ ಪಾಟೀಲ್​- 132, ಎಚ್​.ಎಸ್​. ಕೀರ್ತನಾ- 167, ಎಸ್​. ಸಚಿನ್​ ಹಿರೇಮಠ್​- 213, ಹೇಮಾ ನಾಯಕ್​- 225, ಎಂ.ಜೆ. ಅಭಿಷೇಕ್​ ಗೌಡ- 278, ಬಿ.ಕೃತಿ- 297, ವೆಂಕಟಕೃಷ್ಣ- 336, ಎಚ್​.ಎನ್​. ಮಿಥುನ್​- 359, ವೆಂಕಟರಾಮನ್​ ಕಾವಡಿಕೆರೆ- 363, ಎಚ್​.ಆರ್​. ಕೌಶಿಕ್​- 380, ಬಿ.ಆರ್​. ವರುಣ್​- 395, ಆರ್​.ಮಂಜುನಾಥ್​- 406, ಬಿ.ಸಿ. ಹರೀಶ್​- 409, ಜಗದೀಶ್​ ಅಡಹಳ್ಳಿ- 440, ಎಚ್​.ಬಿ.ವಿವೇಕ್​- 444, ಆನಂದ್​ ಕಲ್ಲಾದಗಿ- 446, ಮೊಹಮ್ಮದ್​ ನದಿಮುದ್ದಿನ್​- 461, ಕೆ.ಟಿ. ಮೇಘನಾ- 465, ಸೈಯದ್​ ಜಾಹಿದ್​ ಅಲಿ- 476, ಎನ್​.ವಿವೇಕ್​ ರೆಡ್ಡಿ- 485, ಎಂ.ಡಿ.ಕಮ್ಮಾರುದ್ಧಿನ್​ ಖಾನ್​- 511, ವರುಣ್​ ಕೆ.ಗೌಡ- 528, ಫ್ರಫುಲ್​ ದೇಸಾಯಿ- 532(ಬೆಳಗಾವಿ), ಎನ್​.ರಾಘವೇಂದ್ರ- 536, ಕೆ.ಆರ್​.ಭರತ್​- 545, ಪೃಥ್ವಿ ಎಸ್​.ಹುಲ್ಲತ್ತಿ- 582, ಆರ್​.ಸುಹಾಸ್​- 583, ಅಭಿಲಾಶ್​ ಶಶಿಕಾಂತ್​ ಬಡ್ಡೂರ್​- 591, ಎಚ್​.ಜಿ.ದರ್ಶನ್​ ಕುಮಾರ್​ 594, ಸವಿತಾ ಗೊತ್ಯಾಲ್​- 626, ಪ್ರಜ್ವಲ್​- 636, ರಮೇಶ್​- 646, ಗಜಾನನ ಬಾಲೆ- 663, ಪ್ರಿಯಾಂಕ ಕಾಂಬ್ಳಿ- 670, ಎ.ಎಂ.ಚೈತ್ರಾ- 713, ಜಿ.ಎಸ್​. ಚಂದನ್​- 777, ಎ.ಪಿ.ಮಂಜೇಶ್​ ಕುಮಾರ್​ 800ನೇ ರ‍್ಯಾಂಕ್ ಪಡೆದಿದ್ದಾರೆ.
ವಿವಿಧ ನಾಗರಿಕ ಸೇವೆಗಳಿಗೆ ಒಟ್ಟು 829 ಅಭ್ಯರ್ಥಿಗಳು 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಅಂತಿಮ ಫಲಿತಾಂಶವನ್ನು ಯುಪಿಎಸ್​ಸಿ ಅಧಿಕೃತ ವೆಬ್​ಸೈಟ್​ನಲ್ಲಿ ನೋಡಬಹುದು. ಯುಪಿಎಸ್​ಸಿ ಸಾಧಕರಿಗೆ ‘ವಿಜಯವಾಣಿ’ ಶುಭಹಾರೈಸಿದೆ.
ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಗ್ರಾಮೀಣರಿಗೆ ಉಚಿತ ಮಾರ್ಗದರ್ಶನ: ಯುಪಿಎಸ್‍ಸಿ ಸಾಧಕ ಪ್ರಫುಲ್ ದೇಸಾಯಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine + 3 =
Remember me
