ಬೆಂಗಳೂರು:2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ರಾಜ್ಯದ 40 ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರಲ್ಲಿ ನಾಲ್ವರು ವಿಜಯವಾಣಿ ಕಚೇರಿಗೆ ಆಗಮಿಸಿ ಇಂದು ನಡೆದ ಫೋನ್​ ಇನ್​ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು.
ಯುಪಿಎಸ್ಸಿಯಲ್ಲಿ 380ನೇ ರ‍್ಯಾಂಕ್​ ಪಡೆದ ಎಚ್​. ಆರ್​​. ಕೌಶಿಕ್​, ಕೆ.ಟಿ ಮೇಘನಾ (465), ಎನ್​. ವಿವೇಕ್​ ರೆಡ್ಡಿ (485) ಹಾಗೂ ಕನ್ನಡದಲ್ಲೇ ಪರೀಕ್ಷೆ ಬರೆದು 594ನೇ ರ‍್ಯಾಂಕ್​ ಪಡೆದ ದರ್ಶನ್​ ಅವರು ಫೋನ್​ ಇನ್​ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಾವು ಪುಸ್ತಕದ ಹುಳುವಾದ್ರೆ ಸಾಕಾಗುವುದಿಲ್ಲ. ಹಾರ್ಡ್​ ವರ್ಕ್​ ಜತೆಗೆ ಸ್ಮಾರ್ಟ್​ ವರ್ಕ್​ ತುಂಬಾ ಮುಖ್ಯ. ಸುತ್ತಮುತ್ತ ನಡೆಯುವ ವಿದ್ಯಾಮಾನಗಳು ತುಂಬಾನೇ ಮುಖ್ಯವಾಗುತ್ತವೆ. ಅದರ ಬಗ್ಗೆ ತಿಳಿದರೆ ಸಾಲುವುದಿಲ್ಲ, ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡುವ ಕಲೆ ಇರಬೇಕೆಂದು ಸಲಹೆ ನೀಡಿದ ಸಾಧಕರು, ತಾವೇಗೆ ಹೇಗೆ ಪರೀಕ್ಷೆ ಸಿದ್ಧರಾದರೂ? ಏನೆಲ್ಲ ಸವಾಲುಗಳನ್ನು ಎದುರಿಸಿದರು? ತಮ್ಮ ಯುಪಿಎಸ್ಸಿ ಸಾಧನೆಯ ಹಾದಿ ಹೇಗಿತ್ತು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿದ್ದು, ಸಮಗ್ರ ವರದಿ ನಾಳಿನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಲಿದೆ.
https://www.facebook.com/VVani4U/videos/573723009965952/
Sign in to your account
Please enter an answer in digits:one × 2 =
Remember me
