ಕೇಂದ್ರ ಲೋಕ ಸೇವಾ ಆಯೋಗ ವಿವಿಧ ವಿಭಾಗಗಳಿಗೆ ಡಿಸಿಐಒ (ಟೆಕ್ನಿಕಲ್​) ಸೇರಿದಂತೆ ಇತರ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಜ.12ರೊಳಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರಸೈಂಟಿಸ್ಟ್​ ಬಿ (ಕೆಮಿಸ್ಟ್ರಿ)-2ಡೆಪ್ಯುಟಿ ಸೆಂಟ್ರಲ್​ ಇಂಟೆಲಿಜೆನ್ಸ್​ ಆಫೀಸರ್​ (ಟೆಕ್ನಿಕಲ್​)- 4ಜಾಯಿಂಟ್​ ಅಸಿಸ್ಟೆಂಟ್​ ಡೈರೆಕ್ಟರ್​-3ಅಸಿಸ್ಟೆಂಟ್​ ಲೇಬರ್​ ಕಮಿಷನರ್-1
ವಿದ್ಯಾರ್ಹತೆ:ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪದವಿ ವ್ಯಾಸಂಗ ಮಾಡಿರಬೇಕು. ವೃತ್ತಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ:ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅನ್ವಯವಾಗುವಂತೆ 30 ವರ್ಷ ವಯೋಮಿತಿಯ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ವೇತನ:ಹುದ್ದೆಗಳಿಗೆ ಅನುಗುಣವಾಗಿ 7ನೇ ವೇತನ ಶ್ರೇಣಿ ಅನ್ವಯ 8ರಿಂದ 10ನೇ ಹಂತದವರೆಗೆ ಮಾಸಿಕ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ:ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್​ ಪುರುಷ ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ ಅನ್ವಯವಾಗಲಿದೆ. ಎಸ್​ಸಿ, ಎಸ್​ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಅನ್ವಯ ಆಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:ಅಭ್ಯರ್ಥಿಗಳುhttp://www.upsconline.nic.in.ವೆಬ್​ಸೈಟ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಇತರ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಿದರೆ ತಿರಸ್ಕರಿಸಲಾಗುವುದು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಮತ್ತು ನಿಗದಿತ ರೀತಿಯಲ್ಲಿ ಶುಲ್ಕ ಪಾವತಿಸಬೇಕು. ಆನ್​ಲೈನ್​ ಅರ್ಜಿ ಸಲ್ಲಿಸಿದ ನಂತರ ಅಂತಿಮವಾಗಿ ಅರ್ಜಿಯ ಪ್ರಿಂಟ್​ಔಟ್​ ತೆಗೆದುಕೊಳ್ಳಬೇಕು. ಅಭ್ಯರ್ಥಿಗಳು ಆನ್​ಲೈನ್​ ಅರ್ಜಿಗಳ ಪ್ರಿಂಟ್​ಔಟ್​ಗಳನ್ನು ಅಥವಾ ಇತರ ಯಾವುದೇ ದಾಖಲೆಗಳನ್ನು ಅಂಚೆ ಮೂಲಕ ಅಥವಾ ಕೈಯಿಂದ ಆಯೋಗಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ ಸಂದರ್ಶನಕ್ಕೆ ಕರೆದಾಗ ಪ್ರಿಂಟ್​ಔಟ್​ ಮತ್ತು ಅಧಿಸೂಚನೆಯಲ್ಲಿ ನಮೂದಿಸಲಾದ ದಾಖಲೆ ತರಬೇಕು.
ಹೆಚ್ಚಿನ ಮಾಹಿತಿಗಾಗಿ:ಅರ್ಜಿಗಳು, ಉಮೇದುವಾರಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಾರ್ಗದರ್ಶನ/ ಮಾಹಿತಿ/ಸ್ಪಷ್ಟೀಕರಣದ ಸಂದರ್ಭದಲ್ಲಿ ಅಭ್ಯರ್ಥಿಗಳು ಯುಪಿಎಸ್​ಸಿ ಕ್ಯಾಂಪಸ್​ನ ಗೇಟ್​ “ಸಿ” ಬಳಿ ಇರುವ ಫೆಸಿಲಿಟೇಶನ್​ ಕೌಂಟರ್​ಗೆ ವೈಯಕ್ತಿಕವಾಗಿ ಅಥವಾ ದೂರವಾಣಿ ಸಂಖ್ಯೆ 011-23385271/ 011-23381125/ 011-230985 ಮೂಲಕ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಕೊನೇ ದಿನ:12.01.2023ಅಧಿಸೂಚನೆಗೆ:https://bit.ly/3WYeDovಮಾಹಿತಿಗಾಗಿ:https://www.upsc.gov.in/
18 ಸಾವಿರ ಮಂದಿಯನ್ನ ಕೆಲಸದಿಂದ ವಜಾ ಮಾಡುವುದಾಗಿ ಅಮೆಜಾನ್​ ಘೋಷಣೆ! ಉದ್ಯೋಗಿಗಳಲ್ಲಿ ಆತಂಕ

18 ಸಾವಿರ ಮಂದಿಯನ್ನ ಕೆಲಸದಿಂದ ವಜಾ ಮಾಡುವುದಾಗಿ ಅಮೆಜಾನ್​ ಘೋಷಣೆ! ಉದ್ಯೋಗಿಗಳಲ್ಲಿ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 1 =
Remember me
