ಬೆಂಗಳೂರು:ಬೇರೆ ರಾಜ್ಯಗಳ ನೀರಾವರಿ, ಕೃಷಿ ಮತ್ತು ಕಾನೂನು ಸೇರಿದಂತೆ ಹೈಡ್ರಾಲಜಿ ತಜ್ಞರನ್ನು ನಾಲ್ಕು ರಾಜ್ಯಗಳ ಜಲಾನಯನ ಪ್ರದೇಶದ ವಾಸ್ತವ ಚಿತ್ರಣ ಅರಿಯಲು ಮತ್ತು ಅಣೆಕಟ್ಟುಗಳ ನೀರಿನ ಲಭ್ಯತೆಯನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಶೀಲಿಸಲು ಕಳುಹಿಸಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಒತ್ತಾಯಿಸಿದ್ದಾರೆ.ಈ ಸಂಬಂಧ ಪ್ರಾಧಿಕಾರಕ್ಕೆ ಸುದೀರ್ಘ ಪತ್ರ ಬರೆದಿರುವ ಅವರು, ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ಹಂಚಿಕೆಗೆ ಮಳೆಕೊರತೆ ವೇಳೆ ಶಾಶ್ವತ ಸೂತ್ರ ರಚಿಸುವ ಸಂಬಂಧ ನಾಲ್ಕೂ ರಾಜ್ಯಗಳ ಹೊರತಾದ ನೀರಾವರಿ, ಕೃಷಿ ಹಾಗೂ ಹೈಡ್ರಾಲಜಿ ತಜ್ಞರ ಭೇಟಿ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಾಧಿಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸಾಂವಿಧಾನಿಕ ಅಧಿಕಾರ ನೀಡಲಾಗಿದ್ದು, ಅರೆ ನ್ಯಾಯಿಕ ಅಧಿಕಾರವನ್ನು ನೀಡಿದೆ. ಇದರಿಂದ ಆಯೋಗದ ಅಧ್ಯಕ್ಷರು ನೀಡುವ ನಿರ್ದೇಶನ ಅಥವಾ ಆದೇಶಗಳನ್ನು ನಾಲ್ಕು ರಾಜ್ಯಗಳು ಪಾಲಿಸಲೇ ಬೇಕಿದ್ದು ಸುಪ್ರೀಂಕೋರ್ಟ್ ಕೂಡ ತಮ್ಮ ವ್ಯಾಪ್ತಿಯಲ್ಲಿ ಮಧ್ಯಪ್ರವೇಶ ಮಾಡದೆ ನಿಮ್ಮ ಆದೇಶಗಳನ್ನು ಎತ್ತಿ ಹಿಡಿಯುತ್ತಿದೆ ಎಂಬುದನ್ನು ಪತ್ರದಲ್ಲಿ ನೆನಪಿಸಿದ್ದಾರೆ.ಪ್ರಸ್ತುತ 2023ರಲ್ಲಿ ವಾಡಿಕೆ ಮಳೆಯಾಗದೆ ಅಗತ್ಯ ನೀರು ಲಭ್ಯವಾಗದೆ ಜಲಾನಯನ ಪ್ರದೇಶದಲ್ಲಿ ಕ್ಷಾಮ ತಲೆದೋರಿದೆ. ಶೇಕಡಾ 50ಕ್ಕಿಂತ ಅಧಿಕ ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಕರ್ನಾಟಕ ಪ್ರದೇಶದ ಜನ ತತ್ತರಿಸಿ ಹೋಗಿದ್ದು, ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡು ತನ್ನ ಪಾಲಿನ ನೀರಿಗೆ ಒತ್ತಡ ಹೇರುತ್ತಿದೆ. ಕರ್ನಾಟಕ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜನ ಆಕ್ರೋಶ ಭರಿತರಾಗಿ ಬೀದಿಗಿಳಿದಿದ್ದು, ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಇದರಿಂದ ಕಾನೂನು ಸುವ್ಯವಸ್ಥೆ ಹದೆಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಎರಡೂಗಳ ರಾಜ್ಯಗಳ ನೈಜ ಸ್ಥಿತಿಯನ್ನು ಅರಿಯಬೇಕು. ತಮಿಳುನಾಡಿನ ನೀರಿನ ಪರಿಸ್ಥಿತಿ ಸೇರಿದಂತೆ ಅಲ್ಲಿನ ಬೆಳೆ ಪ್ರಮಾಣವನ್ನು ಗಮನಿಸುವ ಕೆಲಸವನ್ನು ತಜ್ಞರ ತಂಡದಿಂದ ಮಾಡಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಪ್ರಸ್ತುತ ವರ್ಷಕ್ಕೆ ಸಂಕಷ್ಟ ಸೂತ್ರ ರಚಿಸಿ ನೀರನ್ನು ಹಂಚಿಕೆ ಮಾಡಬೇಕು. ಮಳೆ ಕೊರತೆಯಾಗಿ ನೀರಿನ ಲಭ್ಯತೆ ಇಳಿಮುಖ ವಾದ ವರ್ಷಗಳಲ್ಲಿ ಅನುಸರಿಸಬೇಕಾದ ಸಂಕಷ್ಟ ಸೂತ್ರವನ್ನು ಮುನ್ನೆಚೆರಿಕೆಯಾಗಿ ರಚಿಸಿದರೆ ಭವಿಷ್ಯದಲ್ಲಿ ತಲೆದೋರುವ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದಾಗಿದ್ದು, ತಾವು ಇದರ ಬಗ್ಗೆ ಗಮನ ಹರಿಸಿ ಶಾಶ್ವತ ಸಂಕಷ್ಟ ಸೂತ್ರ ರಚಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − three =
Remember me
