|ಕೃಷ್ಣ ಕುಲಕರ್ಣಿಕಲಬುರಗಿ
ಅರವತೆôದು ವರ್ಷದ ಮಾತಾಜಿಯೊಬ್ಬರು ಬರೋಬ್ಬರಿ 200 ಕಿಲೋ ಮೀಟರ್ ಉರುಳು ಸೇವೆ ನಡೆಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಜಹೀರಾಬಾದ್ ತಾಲೂಕಿನ ಧನಾಶ್ರೀ ಗ್ರಾಮದ ಶಶಿಕಲಾ ಪಂಚಾಳ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಘತ್ತರಗಿಯ ಶ್ರೀ ಭಾಗ್ಯವಂತಿ ಕ್ಷೇತ್ರಕ್ಕೆ ಉರುಳು ಸೇವೆ ಸಲ್ಲಿಸುತ್ತಿ್ತ್ದಾರೆ. ವೈವಾಹಿಕ ಜೀವನ ತೊರೆದು ಸನ್ಯಾಸಿಯಂತೆ ಬದುಕು ಸವೆಸುತ್ತಿರುವ ಶಶಿಕಲಾ ಸ್ವಗ್ರಾಮದ ಭವಾನಿ ದೇಗುಲದಲ್ಲಿ ವಾಸ್ತವ್ಯ ಮಾಡುತ್ತ ದೇವಿಯನ್ನು ಆರಾಧಿಸುತ್ತಿದ್ದಾರೆ. ಊಟ, ಉಪಾಹಾರ ಮಾಡದೆ ಎಳೆನೀರು ಮಾತ್ರ ಸೇವಿಸುತ್ತಾರೆ. ಮಹಾ ದೈವ ಭಕ್ತೆಯಾಗಿರುವ ಶಶಿಕಲಾ 2009, 2010 ಹಾಗೂ 2011ರಲ್ಲಿ 180 ಕಿಮೀ ದೂರದ ಮಹಾರಾಷ್ಟ್ರದ ತುಳಜಾಪುರಕ್ಕೂ ಉರುಳು ಸೇವೆ ಸಲ್ಲಿಸಿದ್ದರು.
ಇದೀಗ ನ.11ರಂದು ಶುರುವಾದ ಶಶಿಕಲಾ ಪಂಚಾಳರ ಉರುಳು ಸೇವೆ ಡಿ.3 ಅಥವಾ 4ರಂದು ಘತ್ತರಗಾದ ಶ್ರೀ ಭಾಗ್ಯವಂತಿ ದೇವಸ್ಥಾನ ತಲುಪಲಿದೆ. ದಾರಿಯುದ್ದಕ್ಕೂ ಮಾತಾಜಿಗೆ ಅದ್ದೂರಿ ಸ್ವಾಗತ ಸಿಗುತ್ತಿದೆ. ಭಕ್ತರು ಪುಷ್ಪಾರ್ಚನೆ, ಪಾದಪೂಜೆ ಮೂಲಕ ಭಕ್ತಿಸೇವೆ ಸಲ್ಲಿಸುತ್ತಿದ್ದಾರೆ. ಸೋಮವಾರ ಕಿಣ್ಣಿಸಡಕ್ ಮೂಲಕ ಉರುಳು ಸೇವೆ ಕಲಬುರಗಿ ಜಿಲ್ಲೆ ಪ್ರವೇಶಿಸಿದ್ದು, 13 ದಿನ ಜಿಲ್ಲೆಯಲ್ಲಿ ಮಾತಾಜಿ ಉರುಳು ಸೇವೆ ಸಲ್ಲಿಸಲಿದ್ದಾರೆ.
ಗಂಡನ ಮನೆ ಕಲಬುರಗಿ:ಮಾತಾಜಿ ಶಶಿಕಲಾ ಸ್ವಗ್ರಾಮ ತೆಲಂಗಾಣದ ಧನಾಶ್ರೀ ಆಗಿದ್ದರೆ, ಗಂಡನ ಊರು ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಸೋಂತ. ಈ ಊರಿನ ಮಾಣಿಕರಾವ ಜತೆ ವಿವಾಹವಾಗಿ ಕೆಲವರ್ಷ ದಾಂಪತ್ಯ ಜೀವನ ಸಾಗಿಸಿದ್ದಾರೆ. ಚಿಂಚೋಳಿಯಲ್ಲಿ ಶಿಕ್ಷಕರಾಗಿದ್ದ ಪತಿ ಹಾಗೂ ಪುತ್ರನ ನಿಧನ ನಂತರ ತವರೂರಲ್ಲಿ ನೆಲೆಸಿದ್ದು, ಭವಾನಿ ದೇಗುಲದಲ್ಲಿ ಪೂಜೆ ನೆರವೇರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಪ್ರತಿ ಹುಣ್ಣಿಮೆ ದಿನ ಭಾಗ್ಯವಂತಿ ದರ್ಶನಕ್ಕೆ ಘತ್ತರಗಿಗೆ ಹೋಗುತ್ತಿದ್ದೆ. ಕರೊನಾ ಸಂಪೂರ್ಣ ನಿಮೂಲನೆ ಆಗಲಿ ಎಂಬ ಪ್ರಾರ್ಥನೆಯೊಂದಿಗೆ ಈ ಉರುಳು ಸೇವೆ ಸಲ್ಲಿಸುತ್ತಿವೆ. ಕಳೆದ ಜ.6ರಂದು ಸ್ವಪ್ನದಲ್ಲಿ ಬಂದಿದ್ದ ದೇವಿ, ‘ನೀನು ನನ್ನ ಸನ್ನಿಧಿವರೆಗೆ ಉರುಳು ಸೇವೆ ಸಲ್ಲಿಸು. ಅಂದಾಗಲೇ ಎಲ್ಲ ಸಮಸ್ಯೆಗಳು ದೂರವಾಗುತ್ತವೆ’ ಎಂದು ಆಜ್ಞೆ ಮಾಡಿದ್ದಳು. ಮರುದಿನವೇ ಈ ಸೇವೆ ಶುರು ಮಾಡಿರುವೆ.
|ಶಶಿಕಲಾ ಪಂಚಾಳಉರುಳು ಸೇವೆ ಸಲ್ಲಿಸುತ್ತಿರುವ ಭಕ್ತೆ
ನಿತ್ಯವೂ 7 ಕಿಮೀ ಸೇವೆ:65 ವರ್ಷದ ಶಶಿಕಲಾ ಮಾತಾಜಿ 200 ಕಿಮೀ ದೂರದ ಘತ್ತರಗಿಗೆ ಉರುಳು ಸೇವೆ ಸಲ್ಲಿಸುತ್ತಿರುವುದು ಅಚಲ ಭಕ್ತಿಗೆ ಸಾಕ್ಷಿ. 100ಕ್ಕೂ ಅಧಿಕ ಜನರೊಂದಿಗೆ ನಿತ್ಯ ಸುಮಾರು ಏಳು ಕಿಮೀ ಉರುಳು ಸೇವೆ ಸಲ್ಲಿಸುತ್ತಾರೆ. ದಿನ ಬೆಳಗ್ಗೆ 7ರಿಂದ 11 ಹಾಗೂ ಸಂಜೆ 4 ರಿಂದ 6ರವರೆಗೆ ಸೇವೆ ಸಲ್ಲಿಸುತ್ತಾರೆ. ಮಧ್ಯಾಹ್ನ ಹಾಗೂ ರಾತ್ರಿ ಆಯಾ ಊರಿನ ದೇಗುಲದಲ್ಲಿ ವಿಶ್ರಾಂತಿ ಪಡೆಯುತ್ತಾರೆ.
ಬೆಂದಕಾಳೂರು ಥಂಡಾ: 10 ವರ್ಷಗಳ ನಂತರ ಬೆಂಗಳೂರಲ್ಲಿ ಅತಿ ಕಡಿಮೆ ಉಷ್ಣಾಂಶ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + five =
Remember me
