ಚೆನ್ನೈ:ಯುಎಸ್​ ರಾಯಭಾರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಮೊದಲ ಬಾರಿ ಚೆನ್ನೈಗೆ ಅಧಿಕೃತ ಪ್ರವಾಸದ ಅಂಗವಾಗಿ ಆಗಮಿಸಿರುವ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಅವರು ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯು ಗುರುವಾರ (ಜೂನ್‌ 15) ಆಯೋಜಿಸಿದ್ದ 247ನೇ ಅಮೆರಿಕ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದರು.
ಫೋರ್ತ್‌ ಆಫ್‌ ಜುಲೈ ಎಂದೂ ಕರೆಯಲಾಗುವ ಅಮೆರಿಕ ಸ್ವಾತಂತ್ರ್ಯ ದಿನಾಚರಣೆಯನ್ನು, 1776ರ ಜುಲೈ 4 ರಂದು ಸ್ವಾತಂತ್ರ್ಯದ ಘೋಷಣೆಯನ್ನು (ಡಿಕ್ಲೆರೇಷನ್‌ ಆಫ್‌ ಇಂಡಿಪೆಂಡೆನ್ಸ್‌) ಅಂಗೀಕರಿಸಿದ ಸ್ಮರಣಾರ್ಥ ಆಚರಿಸಲಾಗುತ್ತದೆ.
ಈ ಕಾರ್ಯಕ್ರಮವು ಇಂಡೋ-ಪೆಸಿಫಿಕ್‌, ಲಿಂಗ ಸಮಾನತೆ, ಆವಿಷ್ಕಾರ, ಬಾಹ್ಯಾಕಾಶ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಅಮೆರಿಕ- ಭಾರತದ ನಡುವಿನ ಸಹಕಾರವನ್ನು ಎತ್ತಿ ತೋರಿಸಿತು. ಹಾಗೆಯೇ ಅಮೆರಿಕ-ಭಾರತದ ಜನರ ನಡುವಣ ಬಾಂಧವ್ಯ ಮತ್ತು ಸಾಂಸ್ಥಿಕ ಸಹಯೋಗಗಳನ್ನೂ ಗುರುತಿಸಿತು.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಯಭಾರಿ ಗಾರ್ಸೆಟ್ಟಿ, ಸುಭದ್ರವಾಗಿ ಮತ್ತು ಬೆಳೆಯುತ್ತಿರುವ ಅಮೆರಿಕ-ಭಾರತ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಬಾಂಧವ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅನೇಕ ಪ್ರಮುಖ ವಲಯಗಳಲ್ಲಿ ಅಮೆರಿಕ ಮತ್ತು ಭಾರತವು ಬಲಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತವು ಬಹಳ ಮುಖ್ಯ ಪಾತ್ರವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯು ಉಭಯ ದೇಶಗಳ ನಡುವೆ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಸಹಕಾರದ ದ್ಯೋತಕವಾಗಿದೆ ಎಂದರು.
ಅಮೆರಿಕ- ಭಾರತದ ಪಾಲುದಾರಿಕೆಯು ನಮ್ಮ ಅತ್ಯಂತ ಪರಿಣಾಮಕಾರಿ ಸಂಬಂಧಗಳಲ್ಲಿ ಒಂದಾಗಿದೆ. ಇಂಡೋ-ಪೆಸಿಫಿಕ್‌ ಪ್ರಾಂತ್ಯದಲ್ಲಿನ ನಮ್ಮ ಸಮಾನ ಗುರಿಗಳ ಸಾಧನೆಗೆ ಜತೆಯಾಗಿ ಕೆಲಸ ಮುಂದುವರಿಸುವುದನ್ನು ಎದುರು ನೋಡುತ್ತಿದ್ದೇವೆ. ಶಾಂತಿ, ಸಮೃದ್ಧಿ, ನಮ್ಮ ಭೂಮಿ ಮತ್ತು ನಮ್ಮ ಜನರೂ ಸೇರಿದಂತೆ ಮಹತ್ವದ ವಿಷಯಗಳಲ್ಲಿ ಭಾರತದೊಂದಿಗಿನ ಸಹಕಾರವೃದ್ಧಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಈ ಸಮಾರಂಭದಲ್ಲಿ ಭಾಗಿಯಾಗಿದ್ದ ಅತಿಥಿಗಳ ಕೊಡುಗೆಯನ್ನು ಪ್ರಶಂಸೆ ವ್ಯಕ್ತಪಡಿಸಿದ ಗಾರ್ಸೆಟ್ಟಿ ಅವರು, “ಭಾರತ- ಅಮೆರಿಕದ ನಡುವಿನ ರೋಮಾಂಚಕ ಮತ್ತು ಸದೃಢ ಸಂಬಂಧದ ಎಂಜಿನ್‌ಗಳು” ಎಂದು ಬಣ್ಣಿಸಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರನ್ನು ಪ್ರತಿನಿಧಿಸಿದ್ದ ಕೈಗಾರಿಕೆ, ಹೂಡಿಕೆ ಪ್ರೋತ್ಸಾಹ ಮತ್ತು ವಾಣಿಜ್ಯ ಸಚಿವ ಡಾ.ಟಿ.ಆರ್‌.ಬಿ. ರಾಜಾ ಅವರು ಸಮಾರಂಭದಲ್ಲಿ ಮಾತನಾಡಿದರು. ಸಚಿವ ರಾಜಾ ಅವರು ಅಮೆರಿಕದ 247ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಅಮೆರಿಕದೊಂದಿಗೆ ಗಾಢವಾದ ಬಾಂಧವ್ಯ ಹೊಂದಿರುವ ತಮಿಳುನಾಡಿನ ಪ್ರತಿನಿಧಿಯಾಗಿ ಇಂದಿನ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದು ನನಗೆ ದೊಡ್ಡ ಗೌರವ. ಅಮೆರಿಕದಂತೆಯೇ ತಮಿಳುನಾಡು ಸಹ ಸ್ವಾತಂತ್ರ್ಯ, ವೈವಿಧ್ಯತೆ ಮತ್ತು ಸಮಾನತೆಯನ್ನು ಗೌರವಿಸುತ್ತದೆ ಮತ್ತು ಈ ಮೌಲ್ಯಗಳನ್ನು ಒಳಗೊಂಡ ಸುಸ್ಥಿರ ಕೈಗಾರಿಕಾ ಬೆಳವಣಿಗೆಯಲ್ಲಿ ಸಹಕರಿಸುವ ಮೂಲಕ ನಮ್ಮ ಸಂಬಂಧಗಳನ್ನು ಗಾಢವಾಗಿಸಲು ನಾವು ಬಯಸುತ್ತೇವೆ ಎಂದರು.
ಹೊಸದಿಲ್ಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿನ ಹಿರಿಯ ರಕ್ಷಣಾ ಅಧಿಕಾರಿ ಮತ್ತು ಡಿಫೆನ್ಸ್‌ ಅಟಾಶೆ ರಿಯರ್‌ ಅಡ್ಮಿರಲ್‌ ಬೆಕರ್‌, ಹೊಸದಿಲ್ಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿನ ಡೆಪ್ಯುಟಿ ಮಿನಿಸ್ಟರ್‌ ಕೌನ್ಸಲರ್‌ ಫಾರ್‌ ಕಮರ್ಷಿಯಲ್‌ ಅಫೇರ್ಸ್‌ ಜಿಯೊಪ್ರೇ ಪರಿಶ್‌ ಮತ್ತು ಯು.ಎಸ್‌. ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ನ ನಿರ್ದೇಶಕ ಡಾ. ಸೇತುರಾಮನ್‌ ಪಂಚನಾಥನ್‌ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಯು.ಎಸ್‌. ಕಾನ್ಸಲ್‌ ಜನರಲ್‌ ಚೆನ್ನೈ ಜುಡಿತ್‌ ರೇವಿನ್‌ ಮತ್ತು ವೈಸ್‌ ಕಾನ್ಸಲ್‌ ಕೆಮಿಲ ಜೊಸ್ವಿನ್ಸನ್‌ ಈ ಸಮಾರಂಭದ ನಿರೂಪಕರಾಗಿದ್ದರು.
ಚೆನ್ನೈನ ನೂತನವಾಗಿ ಬಂದಿರುವ ಮರೀನ್‌ ಕಾರ್ಪ್ಸ್‌ ವಿಭಾಗದ ಫಸ್ಟ್‌ ಕಲರ್‌ ಗಾರ್ಡ್‌ ಮಾರ್ಚ್‌, ಚೆನ್ನೈನ ಕೆಎಂ ಮ್ಯೂಸಿಕ್‌ ಕನ್ಸರ್ವೇಟರಿಯ ವಿದ್ಯಾರ್ಥಿಗಳು ಅಮೆರಿಕ ಮತ್ತು ಭಾರತದ ರಾಷ್ಟ್ರಗೀತೆಗಳನ್ನು ಹಾಡಿದರು. ಬೀಟ್‌ಫ್ರೀಕ್ಸ್‌ ತಂಡ ಭಾರತೀಯ ಮೂಲದ ಅಮೆರಿಕನ್‌ ಪಾಪ್‌ ಗಾಯಕಿ ರಾಜಕುಮರಿ ಅವರ ಬಿಂದೀಸ್‌ ಆ್ಯಂಡ್​ ಬ್ಯಾಂಗಲ್ಸ್‌ ಹಾಡಿಗೆ ನೃತ್ಯ ಮಾಡಿದರು. ರಾಜಕೀಯ ವ್ಯಂಗ್ಯಚಿತ್ರಕಾರ ಹಾಗೂ ಫುಲ್‌ಬ್ರೈಟ್‌-ನೆಹರು ಸ್ಕಾಲರ್‌ ಸಾತ್ವಿಕ್‌ ಗಾಡೆ ಅಮೆರಿಕ-ಭಾರತದ ಸಹಕಾರವನ್ನು ಎತ್ತಿತೋರಿಸುವ ಹಿನ್ನೆಲೆ ಚಿತ್ರವನ್ನು ವಿನ್ಯಾಸಗೊಳಿಸಿದ್ದು ಸಮಾರಂಭದ ವಿಶೇಷಗಳಾಗಿದ್ದವು.
ದ್ವೇಷದ ತೀರ್ಮಾನ ತೆಗೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪವಾಗಿದೆ: ಬಸವರಾಜ ಬೊಮ್ಮಾಯಿ

ಕಾಮಗಾರಿ ನಡೆಸದೆ ಬಿಲ್​ ಪಾವತಿ ಆರೋಪ; 11 ಮಂದಿ ಬಿಬಿಎಂಪಿ ಅಧಿಕಾರಿಗಳು ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
