ಬೆಂಗಳೂರು: ಗ್ಯಾರಂಟಿ ಯೋಜನೆಗಳ ಪರಿಣಾಮಗಳನ್ನು ಅಧ್ಯಯನ ಮಾಡಿಸಿ ನಾಡಿನ ಹಾಗೂ ದೇಶವಾಸಿಗಳ ಮುಂದಿಡಲು ರಾಜ್ಯ ಸರ್ಕಾರ ಬಯಸಿದೆ.ಗ್ಯಾರಂಟಿ ಯೋಜನೆಗಳ ಕುರಿತು ಸಮಾಜದಲ್ಲಿ ವಿವಿಧ ಬಗೆಯ ಅಭಿಪ್ರಾಯವಿದೆ, ಒಂದು ವರ್ಗದಿಂದ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಸರ್ಕಾರ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದು, ಪ್ರಯತ್ನ ಆರಂಭಿಸಿದೆ.ಐದು ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ ಯೋಜನೆ ಜಾರಿಯಾಗಿದ್ದು, ಯುವ ನಿಧಿ ಯೋಜನೆ ಜಾರಿಯಾಗುವುದು ಬಾಕಿ ಉಳಿದಿದೆ. ಈ ಯೋಜನೆಗಾಗಿ ಈ ಆರ್ಥಿಕ ವರ್ಷದಲ್ಲಿ ಅಂದಾಜು 40 ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, ಮುಂದಿನ ಸಾಲಿನಿಂದ ಅಂದಾಜು 54 ಸಾವಿರ ಕೋಟಿ ರೂ. ಬೇಕಾಗಲಿದೆ. ದೊಡ್ಡ ಮೊತ್ತದ ಯೋಜನೆಗಳಾಗಿದ್ದು, ಇವುಗಳ ಪರಿಣಾಮದ ಬಗ್ಗೆ ಅಧ್ಯಯನ ನಡೆಸುವುದು ಸರ್ಕಾರದ ಉದ್ದೇಶವಾಗಿದೆ.ಸರ್ಕಾರದ ಭಾಗವಾಗಿರುವ ಫಿಸಿಕಲ್ ಪಾಲಿಸಿ ಇನ್‌ಸ್ಟಿಟ್ಯೂಟ್ (ಎ್ಪಿಐ)ನ ಮೂಲಕ ಅಧ್ಯಯನ ಸಂಸ್ಥೆಯನ್ನು ಗುರುತಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಅಖಿಲ ಭಾರತ ಕಾಂಗ್ರೆಸ್ (ಎಐಸಿಸಿ)ಗೆ 2019ರ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ‘ನ್ಯಾಯ್’ ಯೋಜನೆಯನ್ನು ಪ್ರಚಾರದಲ್ಲಿ ಬಳಸಲು ರೂಪಿಸಿಕೊಟ್ಟ ಅಮೆರಿಕಾದ ಜೆ-ಪಾಲ್ ಎಂಬ ಸಂಸ್ಥೆ ಈಗ ಮೌಲ್ಯಮಾಪನ ಮಾಡಿಕೊಡಲು ಮುಂದೆ ಬಂದಿದೆ.ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ರೋ ನೇತೃತ್ವದ ಜೆ-ಪಾಲ್ ಜೆ-ಪಾಲ್‌ನ ಸಂಸ್ಥಾಪಕರು. ಅಧ್ಯಯನ, ಪಾಲಿಸಿ ರೂಪಿಸುವುದು, ತರಬೇತಿ ನೀಡುವ ಸಂಸ್ಥೆಯಾಗಿದೆ. ಇದು ಅಧ್ಯಯನ ನಡೆಸಲು ಈಗಾಗಲೇ ತನ್ನ ಆಸಕ್ತಿಯನ್ನೂ ಸಹ ತೋರಿಸಿದೆ.2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಳಸಿದ್ದ, ‘ನಮಗೆ ಅಧಿಕಾರ ನೀಡಿದರೆ ಪ್ರತಿ ಬಡ ಕುಟುಂಬಕ್ಕೆ ಮಾಸಿಕ 6 ಸಾವಿರ ರೂ. ನೀಡುತ್ತೇವೆ’ ಎಂಬ ಪ್ರಸ್ತಾಪವನ್ನು ಅಭಿಜಿತ್ ಬ್ಯಾನರ್ಜಿಯವರೇ ರೂಪಿಸಿಕೊಟ್ಟಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಅಂದು ನ್ಯಾಯ್ ಕಾಂಗ್ರೆಸ್ ಕೈ ಹಿಡಿದರಲಿಲ್ಲ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳು ಕಾಂಗ್ರೆಸ್ ಕೈ ಹಿಡಿದಿದೆ.ಸರ್ಕಾರವೇ ಹೇಳಿಕೊಂಡಂತೆ ಬಡ ಕುಟುಂಬಗಳು ಈ ಐದು ಗ್ಯಾರಂಟಿ ಯೋಜನೆಯಿಂದ ವಾರ್ಷಿಕ 48 ಸಾವಿರ ರೂ. ನಿಂದ 60 ಸಾವಿರ ರೂ. ವರೆಗೂ ಲಾಭ ಪಡೆದುಕೊಳ್ಳುತ್ತವೆ. ಈ ರೀತಿ ಸರ್ಕಾರದಿಂದ ಆರ್ಥಿಕ ನೆರವು ಪಡೆಯುವ ಕುಟುಂಬಗಳು ಆರ್ಥಿಕವಾಗಿ ಯಾವ ರೀತಿ ಚೈತನ್ಯ ಹೊಂದುತ್ತಿವೆ, ಯಾವ ರೀತಿ ಲಾಭವಾಗುತ್ತದೆ ಎಂಬುದು ಅಧ್ಯಯನದ ಹುರುಳಾಗಿರಲಿದೆ.ಗೃಹಲಕ್ಷ್ಮೀ ಯೋಜನೆಯಿಂದ ಮಾಸಿಕ 2 ಸಾವಿರ ರೂ.ನಂತೆ ವಾರ್ಷಿಕ 24 ಸಾವಿರ ರೂ., ಉಚಿತ ವಿದ್ಯುತ್‌ನಿಂದ ವಾರ್ಷಿಕ 8-10 ಸಾವಿರ ರೂ. ಉಳಿತಾಯ, ಅನ್ನಭಾಗ್ಯದಿಂದ ಐದು ಸದಸ್ಯರಿರುವ ಕುಟುಂಬಕ್ಕೆ ವಾರ್ಷಿಕ 10 ಸಾವಿರ ರೂ., ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದಿಂದ ಅಂದಾಜು 8-10 ಸಾವಿರ ರೂ. ಲಾಭವಾಗಲಿದೆ ಎಂಬುದು ಸರ್ಕಾರ ಮಾಡಿರುವ ಅಂದಾಜಾಗಿದೆ.ಇಷ್ಟು ದೊಡ್ಡ ನೆರವು ಸಿಗುವುದರಿಂದ ಸಹಜವಾಗಿ ಕುಟುಂಬಗಳಿಗೆ ಶ್ರೇಯಸ್ಕರವಾಗಲಿದೆ. ಅದರಲ್ಲೂ ಗ್ರಾಮೀಣ ಭಾಗದ ಕುಟುಂಬಗಳಿಗೆ, ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಲಿದ್ದು, ಅವರಲ್ಲಿ ಖರೀದಿ ಶಕ್ತಿ ಹೆಚ್ಚಾಗಲಿದೆ. ಹೀಗಾಗಿ ತಮ್ಮ ಯೋಜನೆಗಳು ಜನರಿಗೆ ಯಾವ ರೀತಿ ಅನುಕೂಲಕರವಾಗುತ್ತಿದೆ ಎಂದು ಸಮರ್ಥಿಸಿಕೊಳ್ಳಲು ಸರ್ಕಾರ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದ ಅಧ್ಯಯನ ನಡೆಸಲು ಬಯಸಿತ್ತು.ಅಧ್ಯಯನ ನಡೆಸಲು ಸೆಂಟರ್ ಾರ್ ಮಾನಿಟರಿಂಗ್ ಇಂಡಿಯಾ ಹಾಗೂ ಎಕ್ಸ್ ಕೆಡಿಆರ್ ಸಂಸ್ಥೆ ಜತೆಯೊಂದಿಗೂ ಮಾತುಕತೆ ನಡೆಸಲು ಪ್ರಯತ್ನಿಸಲಾಗಿತ್ತು.ಸಾಮಾನ್ಯವಾಗಿ ಯೋಜನೆ ಜಾರಿಗೆ ಮುನ್ನ ಹಾಗೂ ನಂತರದ ಪರಿಸ್ಥಿತಿ ಬಗ್ಗೆ ಅವಲೋಕನ ಅಥವಾ ವಿಶ್ಲೇಷಣೆ ನಡೆಸಬೇಕಾಗುತ್ತದೆ. ಅಥವಾ ಯೋಜನೆ ಜಾರಿಯಾದ ಪ್ರದೇಶ ಹಾಗೂ ಯೋಜನೆ ಜಾರಿಯಾಗದ ಪ್ರದೇಶದೊಂದಿಗೆ ತುಲನೆ ಮಾಡಬೇಕಾಗುತ್ತದೆ.ಪ್ರಸ್ತುತ ರಾಜ್ಯಕ್ಕೆ ಹೊಂದಿಕೊಂಡ ರಾಜ್ಯಗಳ ಗಡಿ ಜಿಲ್ಲೆಗಳು ಮತ್ತು ರಾಜ್ಯದೊಂದಿಗಿನ ಜಿಲ್ಲೆಗಳ ನಡುವೆ ಯೋಜನೆ ಪರಿಣಾಮದ ಬಗ್ಗೆ ಅವಲೋಕನ ನಡೆಸುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ.ಉದಾಹರಣೆಗೆ ರಾಜ್ಯಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ, ತೆಲಂಗಾಣ, ಆಂಧ್ರದ ಆಯ್ದ ಜಿಲ್ಲೆಗಳೊಂದಿಗೆ ರಾಜ್ಯದೊಳಗಿನ ಜಿಲ್ಲೆಗಳನ್ನು ತುಲನೆ ಮಾಡಲಾಗುತ್ತದೆ. ಗ್ಯಾರಂಟಿ ಪರಿಣಾಮ ಯಾವ ರೀತಿ ಪರಿಣಾಮ ಬೀರುತ್ತಿದೆ, ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆ ಹೇಗೆ ಸುಧಾರಣೆ ಕಾಣಿಸಿದೆ, ಜನರ ಖರೀದಿ ಸಾಮರ್ಥ್ಯ ಯಾವ ಪ್ರಮಾಣದಲ್ಲಿ ಹೆಚ್ಚಾಗಿದೆ ಸೇರಿದಂತೆ ಹಲವಾರು ಆಯಾಮಗಳಲ್ಲಿ ಅಧ್ಯಯನ ಮಾಡಿ ಅಂಕಿಅಂಶ ಆಧಾರಿತ ವಿಶ್ಲೇಷಣೆ ನಡೆಸುವ ಉದ್ದೇಶ ಹೊಂದಲಾಗಿದೆ.ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಚಾಲನೆ ಸಿಕ್ಕಿದ್ದು, ಗೃಹಲಕ್ಷ್ಮೀ ಯೋಜನೆ ಬುಧವಾರ ಜಾರಿಗೆ ಬಂದಿದೆ. ನಿರುದ್ಯೋಗ ಭತ್ಯೆ ನೀಡುವ ಯೋಜನೆ ಡಿಸೆಂಬರ್‌ನಿಂದ ಆರಂಭವಾಗುತ್ತಿದೆ. ಹೀಗಾಗಿ ಆರಂಭದಲ್ಲಿ ನಾಲ್ಕು ಯೋಜನೆಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸುವ ಸಾಧ್ಯತೆ ಇದ್ದು, ಶೀಘ್ರವೇ ಈ ಕೆಲಸಕ್ಕೆ ಚಾಲನೆ ಸಿಗಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 − nine =
Remember me
