ಬೆಂಗಳೂರು :ಏಪ್ರಿಲ್​ ತಿಂಗಳಲ್ಲಿ ಬಿಎಂಟಿಸಿಯ ಮಾಸಿಕ ಬಸ್​ ಪಾಸ್ ಪಡೆದಿದ್ದು, ನೌಕರರ ಮುಷ್ಕರದಿಂದಾಗಿ ಮತ್ತು ನಂತರದ ಲಾಕ್​ಡೌನ್​ನಿಂದಾಗಿ ಬಳಸಲಾಗಿಲ್ಲ ಎಂದರೆ ಚಿಂತೆ ಬೇಡ. ನಾಳೆಯಿಂದ ಪುನರಾರಂಭಗೊಳ್ಳುತ್ತಿರುವ ಸಿಟಿ ಬಸ್​ ಸೇವೆಯಲ್ಲಿ ಈ ಪಾಸ್​ಗಳನ್ನು ಈಗಲೂ ಬಳಸಬಹುದಾಗಿದೆ.
ಹೌದು! ಏಪ್ರಿಲ್​ ತಿಂಗಳಲ್ಲಿ ಪಡೆದ ಮಾಸಿಕ ಪಾಸ್​ಗಳ ಮಾನ್ಯತಾ ಅವಧಿಯನ್ನು ಜುಲೈ 8 ರವರೆಗೆ ವಿಸ್ತರಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ. ಏಪ್ರಿಲ್​ನಲ್ಲಿ ನೀಡಲಾಗಿರುವ ಸಾಮಾನ್ಯ ಮಾಸಿಕ ಪಾಸ್ ಮತ್ತು ಹಿರಿಯ ನಾಗರೀಕರ ಮಾಸಿಕ ಪಾಸ್​ಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ.
ಇದನ್ನೂ ಓದಿ:ಪಾಟ್ನದಿಂದ ಲೂಧಿಯಾನಕ್ಕೆ ಗಂಡನನ್ನು ಅರಸಿ ಬಂದ ಯುವತಿ! ಅಪೂರ್ಣ ಮೊಬೈಲ್ ಸಂಖ್ಯೆ ಹಿಡಿದು ಹುಡುಕಾಟ!
ಏಪ್ರಿಲ್​ 7 ರಿಂದ 21 ರವರೆಗೆ ಬಸ್​ ಚಾಲಕರ ಮುಷ್ಕರದಿಂದಾಗಿ ಬಸ್​ ಸೇವೆ ವ್ಯತ್ಯಯಗೊಂಡಿತ್ತು. ಅದಕ್ಕಾಗಿ ಏಪ್ರಿಲ್​ ಪಾಸ್​ಗಳ ಅವಧಿಯನ್ನು ಮೇ 16 ರವರೆಗೆ ಈ ಮುನ್ನ ವಿಸ್ತರಿಸಲಾಗಿತ್ತು. ಆದರೆ ಏಪ್ರಿಲ್ 28 ರಿಂದ ಜೂನ್ 20 ರವರೆಗೆ ಕೋವಿಡ್​ ನಿರ್ಬಂಧಗಳಿಂದಾಗಿ ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ, ಈಗ ಮತ್ತೆ ಪಾಸ್​ಗಳ ಅವಧಿಯನ್ನು ಜುಲೈ 8 ರವರೆಗೂ ವಿಸ್ತರಿಸಲಾಗಿದೆ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಇಂದಿನ ಆದೇಶದಲ್ಲಿ ತಿಳಿಸಿದ್ದಾರೆ.
ವಧುವರರ ವೆಬ್​​ಸೈಟಲ್ಲಿ ಪರಿಚಯ ಬೆಳೆಸಿ ಹಣ ಲಪಟಾಯಿಸಿದ ಖದೀಮ

ಮತ್ತೆ ಶಾಲೆ ಯಾವಾಗ ತೆರೆಯುತ್ತೆ ? ಕೇಂದ್ರ ಸರ್ಕಾರ ಏನು ಹೇಳುತ್ತೆ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 11 =
Remember me
