ಬೆಂಗಳೂರು:ಕೈಗಾರಿಕೆಗಳಲ್ಲಿ ರೊಬೊಟಿಕ್ಸ್ ತಂತ್ರಜ್ಞಾನದ ಪಾತ್ರ ಕುರಿತು ಉದ್ಯಮಿ ಮೋಹನದಾಸ್ ಪೈ ಮತ್ತಿತರರೊಂದಿಗೆ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಚರ್ಚೆ ನಡೆಸಿದರು.
ರೊಬೊಟಿಕ್ಸ್ ಮತ್ತು ಉತ್ಪಾದನೆಯಲ್ಲಿ ಬುದ್ಧಿಮತ್ತೆಯ ನಾವೀನ್ಯತೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಉದ್ಯಮಿಗಳಾದ ಅಭಯ್ ಜೈನ್ ಮತ್ತು ಉಮಾಕಾಂತ್ ಸೋನಿ ಅವರು ಉಪಸ್ಥಿತರಿದ್ದರು.
ರೋಬೋಟಿಕ್ ತಂತ್ರಜ್ಞಾನ ಬಳಸಿ ಕೈಗಾರಿಕೆಗಳನ್ನು ಹೇಗೆ ಕ್ರಾಂತಿಗೊಳಿಸಬಹುದು ಮತ್ತು ಸುಸ್ಥಿರ ಪರಿಹಾರಗಳನ್ನು ಹೇಗೆ ರೂಪಿಸಬಹುದು ಎಂಬ ಕುರಿತು ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡರು.
ಉತ್ಪಾದನೆಯ ಭವಿಷ್ಯವನ್ನು ರೂಪಿಸುವ ಉದಯೋನ್ಮುಖ ಪ್ರವೃತ್ತಿಗಳು, ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದು ಉತ್ಕೃಷ್ಟ ಅನುಭವ ದೊರೆತಿದೆ ಎಂದು ಹೇಳಿದ್ದಾರೆ.
ರೋಬೋಟಿಕ್ಸ್ ಕಾರ್ಯತಂತ್ರದ ದೃಷ್ಟಿ ಮತ್ತು ಸಹಯೋಗದೊಂದಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಬಹುದು. ಜತೆಗೆ ಅರ್ಥಪೂರ್ಣ ಪರಿಣಾಮವನ್ನು ಪಡೆಯಬಹುದೆಂಬುದು ನನಗೆ ಮನವರಿಕೆಯಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × five =
Remember me
